ಉದ್ಯೋಗ ಕಳೆದುಕೊಂಡ ನೌಕರರ ಪಿಎಫ್‌ ಪಾಲನ್ನು 2022ರವರೆಗೆ ಭರಿಸಲಿದೆ ಕೇಂದ್ರ

ಉದ್ಯೋಗ ಕಳೆದುಕೊಂಡಿರುವ ನೌಕರರ ಭವಿಷ್ಯನಿಧಿಯಲ್ಲಿ (ಪಿಎಫ್‌) ಉದ್ಯೋಗದಾತರು ಮತ್ತು ಉದ್ಯೋಗಿಯ ಪಾಲಿನ ಹಣದ ಮೊತ್ತವನ್ನು 2022ರ ತನಕ ಕೇಂದ್ರ ಸರಕಾರವೇ ಭರಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶನಿವಾರ ತಿಳಿಸಿದ್ದಾರೆ.

ಉದ್ಯೋಗ ಕಳೆದುಕೊಂಡ ನೌಕರರ ಪಿಎಫ್‌ ಪಾಲನ್ನು 2022ರವರೆಗೆ ಭರಿಸಲಿದೆ ಕೇಂದ್ರ
Linkup
ಲಖನೌ: ಉದ್ಯೋಗ ಕಳೆದುಕೊಂಡಿರುವ ನೌಕರರ ಭವಿಷ್ಯನಿಧಿಯಲ್ಲಿ () ಉದ್ಯೋಗದಾತರು ಮತ್ತು ಉದ್ಯೋಗಿಯ ಪಾಲಿನ ಹಣದ ಮೊತ್ತವನ್ನು 2022ರ ತನಕ ಕೇಂದ್ರ ಸರಕಾರವೇ ಭರಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶನಿವಾರ ತಿಳಿಸಿದ್ದಾರೆ. ಹೀಗಿದ್ದರೂ, ಕೆಲಸ ಕಳೆದುಕೊಂಡಿರುವ ಉದ್ಯೋಗಿಯನ್ನು ಸಂಸ್ಥೆ ಅಥವಾ ಕಂಪನಿಯು ಮರಳಿ ಸೇರಿಸಿದರೆ ಮಾತ್ರ ಕೇಂದ್ರ ಸರಕಾರ ಈ ನೆರವು ಸಿಗಲಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಇಪಿಎಫ್‌ಒ ಅಡಿಯಲ್ಲಿ ನೋಂದಾಯಿತ ಸಂಘಟಿತ ವಲಯದ ಸಂಸ್ಥೆಗಳು, ಅದರಲ್ಲೂ ಸಣ್ಣ ಮತ್ತು ಮಧ್ಯಮ ವಲಯದ ಸಂಸ್ಥೆಗಳಲ್ಲಿ ದುಡಿಯುವ ನೌಕರರಿಗೆ ಮತ್ತು ಅಂಥ ಸಂಸ್ಥೆಗಳಿಗೆ ಈ ನೆರವು ಸಿಗಲಿದೆ. ಒಂದು ಜಿಲ್ಲೆಯಲ್ಲಿ ಅನೌಪಚಾರಿಕ ವಲಯದದಲ್ಲಿ 25,000ಕ್ಕೂ ಹೆಚ್ಚು ವಲಸಿಗ ಕಾರ್ಮಿಕರು ಕೆಲಸ ಮಾಡುತ್ತಿದ್ದರೆ, ಹಾಗೂ ಅವರು ತಮ್ಮ ಸ್ವಂತ ಊರುಗಳಿಗೆ ಹಿಂತಿರುಗಿದ್ದರೆ, ಅವರಿಗೆ ಉದ್ಯೋಗಗಳಿಗೆ ಸಂಬಂಧಿಸಿ ಕೇಂದ್ರದ 16 ಯೋಜನೆಗಳ ಪ್ರಯೋಜನ ಸಿಗಲಿದೆ ಎಂದು ತಿಳಿಸಿದರು. ''ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ 2020ರಲ್ಲಿನರೇಗಾ ಅಡಿಯಲ್ಲಿ ನೀಡುವ ಬಜೆಟ್‌ ಅನುದಾನವನ್ನು 60 ಸಾವಿರ ಕೋಟಿ ರೂ.ಗಳಿಂದ 1 ಲಕ್ಷ ಕೋಟಿ ರೂ.ಗೆ ವೃದ್ಧಿಸಲಾಗಿದೆ'' ಎಂದು ಸೀತಾರಾಮನ್‌ ತಿಳಿಸಿದರು. ಇಪಿಎಫ್‌ಒ ಬಿಡುಗಡೆಗೊಳಿಸಿರುವ ಅಂಕಿ ಅಂಶಗಳ ಪ್ರಕಾರ ಕಳೆದ ಜೂನ್‌ನಲ್ಲಿ ಸಂಸ್ಥೆಯ ಪೇ ರೋಲ್‌ (ವೇತನದಾರರ ವಿವರ) ಪಟ್ಟಿಗೆ ಹೆಚ್ಚುವರಿ 12.83 ಲಕ್ಷ ಮಂದಿ ಸೇರ್ಪಡೆಯಾಗಿದ್ದಾರೆ. ಮಹಾರಾಷ್ಟ್ರ, ಹರಿಯಾಣ, ಗುಜರಾತ್‌, ತಮಿಳುನಾಡು ಮತ್ತು ಕರ್ನಾಟಕದಿಂದ ಇಪಿಎಫ್‌ಒಗೆ ಒಟ್ಟು 7.78 ಲಕ್ಷ ಹೊಸ ಚಂದಾದಾರರ ಸೇರ್ಪಡೆಯಾಗಿದೆ. ಪೇ ರೋಲ್‌ ವಿವರಗಳನ್ನು ಗಮನಿಸಿದರೆ ಕೋವಿಡ್‌ ಎರಡನೇ ಅಲೆಯ ಪ್ರಭಾವ ಜೂನ್‌ನಿಂದ ಉಪಶಮನವಾಗಿರುವುದು ಗೊತ್ತಾಗುತ್ತದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.