ಪೂಜಾ ಹೆಗ್ಡೆ, ಸಮಂತಾ ರೀತಿ ಐಟಂ ಡ್ಯಾನ್ಸ್ ಮಾಡ್ತೀರಾ? ಮುಲಾಜಿಲ್ಲದೆ ಉತ್ತರ ಕೊಟ್ಟ ನಟಿ ಸಾಯಿ ಪಲ್ಲವಿ

'ರಂಗಸ್ಥಲಂ' ಸಿನಿಮಾದಲ್ಲಿ ಪೂಜಾ ಹೆಗ್ಡೆ ಸ್ಪೆಷಲ್ ಹಾಡಿಗೆ ಡ್ಯಾನ್ಸ್‌ ಮಾಡಿದಂತೆ, 'ಪುಷ್ಪ'ದಲ್ಲಿ ಸಮಂತಾ ಸೊಂಟ ಬಳುಕಿಸಿದಂತೆ ನೀವು ಸ್ಪೆಷಲ್ ಹಾಡಿಗೆ ಡ್ಯಾನ್ಸ್ ಮಾಡ್ತೀರಾ ಎಂಬ ಪ್ರಶ್ನೆಗೆ ಸಾಯಿ ಪಲ್ಲವಿ ಉತ್ತರ ನೀಡಿದ್ದಾರೆ.

ಪೂಜಾ ಹೆಗ್ಡೆ, ಸಮಂತಾ ರೀತಿ ಐಟಂ ಡ್ಯಾನ್ಸ್ ಮಾಡ್ತೀರಾ? ಮುಲಾಜಿಲ್ಲದೆ ಉತ್ತರ ಕೊಟ್ಟ ನಟಿ ಸಾಯಿ ಪಲ್ಲವಿ
Linkup
ನಟಿ ಎಂದತಕ್ಷಣ ಸಹಜತೆ, ಸರಳತೆ, ಡ್ಯಾನ್ಸ್ ನೆನಪಾಗುವುದು. 'ಲವ್ ಸ್ಟೋರಿ' ಸಿನಿಮಾದಲ್ಲಿ ಸಾಯಿ ಹಾಕಿದ್ದ ಸ್ಟೆಪ್ಸ್‌ ಅನೇಕರಿಗೆ ಇಷ್ಟವಾಗಿತ್ತು, ಅದರಲ್ಲೂ ಕೆಲ ಹುಡುಗಿಯರು ಅದನ್ನು ಅನುಕರಿಸಿ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದರು. ಇಷ್ಟೊಂದು ಚೆನ್ನಾಗಿ ಡ್ಯಾನ್ಸ್ ಮಾಡುವ ಸಾಯಿ ಪಲ್ಲವಿ ಮುಂದಿನ ದಿನಗಳಲ್ಲಿ ಚಿತ್ರವೊಂದರ ಸ್ಪೆಷಲ್ ಹಾಡಿಗೆ ಸ್ಟೆಪ್ ಹಾಕಲಿದ್ದಾರಾ? '' ಚಿತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಾನಿ, ಕೃತಿ ಶೆಟ್ಟಿ ಕೂಡ ಇದ್ದಾರೆ. ಈ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಸಾಯಿ ಪಲ್ಲವಿಗೆ ಸಂದರ್ಶನದಲ್ಲಿ ಸಾಕಷ್ಟು ಪ್ರಶ್ನೆಗಳು ಎದುರಾಗಿದ್ದವು. ಅವುಗಳಿಗೆ ಸಾಯಿ ಪಲ್ಲವಿ ಉತ್ತರ ನೀಡಿದ್ದಾರೆ. 'ರಂಗಸ್ಥಲಂ' ಸಿನಿಮಾದಲ್ಲಿ ಪೂಜಾ ಹೆಗ್ಡೆ ಸ್ಪೆಷಲ್ ಹಾಡಿಗೆ ಡ್ಯಾನ್ಸ್‌ ಮಾಡಿದಂತೆ, ''ದಲ್ಲಿ ಸಮಂತಾ ಸೊಂಟ ಬಳುಕಿಸಿದಂತೆ ನೀವು ಮುಂದಿನ ದಿನಗಳಲ್ಲಿ ಚಿತ್ರದ ಸ್ಪೆಷಲ್ ಹಾಡಿಗೆ ಡ್ಯಾನ್ಸ್ ಮಾಡ್ತೀರಾ? ಎಂಬ ಪ್ರಶ್ನೆ ಸಾಯಿಗೆ ಕೇಳಲಾಗಿತ್ತು. ಅದಕ್ಕೆ ಉತ್ತರ ನೀಡಿರುವ ಸಾಯಿ ಪಲ್ಲವಿ ಅವರು "ನನಗೆ ಕಂಫರ್ಟ್ ಇದ್ದರೆ ಮಾಡುವೆ. ನಾನು ಡ್ಯಾನ್ಸ್ ಮಾಡ್ತೀನಿ, ಆದರೆ ಆಯ್ಕೆ ಮಾಡಿಕೊಳ್ಳುವ ಹಾಡು ನನ್ನ ಸಿನಿಮಾದಲ್ಲಿ ಒಂದು ರೀತಿ ಇದ್ರೆ, ನೀವು ಹೇಳಿದಂತೆ ಸ್ಪೆಷಲ್ ಹಾಡಿನಲ್ಲಿ ಬೇರೆ ತರ ಇರುತ್ತೆ, ಬಹುಶಃ ಸ್ಪೆಷಲ್ ಹಾಡಿಗೆ ಡ್ಯಾನ್ಸ್ ಮಾಡಲು ನನಗೆ ಕಂಫರ್ಟ್ ಇಲ್ಲ" ಎಂದಿದ್ದಾರೆ. 'ಕೋಟಿಗೊಬ್ಬ 3' ಸಿನಿಮಾದಲ್ಲಿ ನಟಿ ಆಶಿಕಾ ರಂಗನಾಥ್, 'ಚೆನ್ನೈ ಎಕ್ಸ್‌ಪ್ರೆಸ್' ಸಿನಿಮಾದಲ್ಲಿ ಪ್ರಿಯಾಮಣಿ ಎಂದು ಸಾಕಷ್ಟು ನಟಿಯರು ಸ್ಪೆಷಲ್ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಅದರಲ್ಲೂ ಇತ್ತೀಚೆಗೆ ಸ್ಟಾರ್ ನಟರಿಗೆ ನಾಯಕಿಯಾಗುತ್ತಿರುವವರು ಬೇರೆ ಸಿನಿಮಾದ ಸ್ಪೆಷಲ್ ಹಾಡಿಗೆ ಡ್ಯಾನ್ಸ್ ಮಾಡೋದು ಒಂದು ರೀತಿಯ ಟ್ರೆಂಡ್ ಆಗಿದೆ ಎನ್ನಬಹುದು. 'ಪುಷ್ಪ' ಸಿನಿಮಾ ಮೂಲಕ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಸಮಂತಾ ಅವರು ಐಟಂ ಡ್ಯಾನ್ಸ್ ಮಾಡಿದ್ದರು. ಆ ಡ್ಯಾನ್ಸ್ ನೋಡಿ ಅನೇಕರು ಅಚ್ಚರಿ ಪಟ್ಟಿದ್ದರು. ಸೆಕ್ಸಿ ಆಗಿರೋದು ನೆಕ್ಸ್ಟ್ ಲೆವೆಲ್ ಹಾರ್ಡ್ ವರ್ಕ್ ಎಂದು ಕೂಡ ಸಮಂತಾ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿ ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದುವರೆಗೂ ಕೂಡ ಸಾಯಿ ಪಲ್ಲವಿ ಸಿನಿಮಾಗಳಲ್ಲಿ ಅಂತಹ ಬೋಲ್ಡ್ ದೃಶ್ಯದಲ್ಲಿ ನಟಿಸಿಲ್ಲ, ಮೊಡವೆಯನ್ನು ಒಡವೆಯಾಗಿ ಇಟ್ಟುಕೊಂಡಿರುವ ಈ ನಟಿಯ ಸರಳತೆಗೆ ಅನೇಕರು ಕ್ಲೀನ್ ಬೋಲ್ಡ್ ಆಗಿದ್ದಾರೆ. ತನ್ನ ಮುಖದ ಮೇಲೆ ಮೊಡವೆ ಇದೆ, ಸಮಾಜಕ್ಕೆ ಸುಳ್ಳು ಸಂದೇಶ ನೀಡಬಾರದು ಎಂದು ಸಾಯಿ ಪಲ್ಲವಿ ಅವರು ಸೌಂದರ್ಯವರ್ಧಕ ಕ್ರೀಮ್‌ಗಳ ಜಾಹೀರಾತಿನ ಆಫರ್ ಕೂಡ ತಿರಸ್ಕಾರ ಮಾಡಿದ್ದರು. ಈ ಎಲ್ಲ ಗುಣಗಳಿಂದ ಸಾಯಿ ಪಲ್ಲವಿ ಪ್ರೇಕ್ಷಕರಿಗೆ ಹೆಚ್ಚು ಇಷ್ಟ ಆಗ್ತಾರೆ. 2005ರಿಂದ ಚಿತ್ರರಂಗದಲ್ಲಿರುವ ಸಾಯಿ ಪಲ್ಲವಿ ಅವಕಾಶ ಇದೆ, ಆಫರ್ ಬಂತು ಎಂದು ಸಿನಿಮಾ ಮಾಡದೆ, ಪಾತ್ರ -ಕಥೆ ನೋಡಿಕೊಂಡು ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ ಅವರು ನಟಿಸಿದ ಕೆಲ ಸಿನಿಮಾಗಳು ಹಿಟ್ ಲಿಸ್ಟ್‌ಗೆ ಸೇರಿವೆ ಎನ್ನಬಹುದು. 'ಫಿದಾ', 'ಮಿಡಲ್ ಕ್ಲಾಸ್ ಅಬ್ಬಾಯಿ', 'ಪ್ರೇಮಂ', 'ಲವ್ ಸ್ಟೋರಿ', 'Kali' ಚಿತ್ರಗಳು ಅವರಿಗೆ ಹೆಸರು ತಂದುಕೊಟ್ಟಿವೆ.