'ಪುಷ್ಪ' ಚಿತ್ರಕ್ಕೆ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಭರ್ಜರಿ ಗಿಫ್ಟ್ ನೀಡಿದ ನಿರ್ದೇಶಕ!

'ಆರ್ಯ', 'ಆರ್ಯ 2' ನಂತರ ನಿರ್ದೇಶಕ ಸುಕುಮಾರ್ ಅವರು 'ಪುಷ್ಪ' ಮೂಲಕ ಮೂರನೇ ಬಾರಿಗೆ ಅಲ್ಲು ಅರ್ಜುನ್‌ಗೆ ನಿರ್ದೇಶನ ಮಾಡಿದ್ದರು. ಸಿನಿಮಾ ದೊಡ್ಡ ಹಿಟ್ ಆಗಿದೆ. ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸದ್ದು ಮಾಡಿದೆ.

'ಪುಷ್ಪ' ಚಿತ್ರಕ್ಕೆ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಭರ್ಜರಿ ಗಿಫ್ಟ್ ನೀಡಿದ ನಿರ್ದೇಶಕ!
Linkup
ಅಲ್ಲು ಅರ್ಜುನ್ ಅಭಿನಯದ '' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಬಂಪರ್ ಬೆಳೆ ತೆಗೆದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿರುವ ಈ ಸಿನಿಮಾ ನಿರ್ಮಾಪಕರಿಗೆ ಭಾರಿ ಹಣವನ್ನೇ ತಂದುಕೊಟ್ಟಿದೆ. ಹಾಗೆಯೇ ನಿರ್ದೇಶಕ ಸುಕುಮಾರ್ ಅವರಿಗೂ ಮತ್ತೊಂದು ಬ್ರೇಕ್ ಸಿಕ್ಕಂತೆ ಆಗಿದೆ. ಈ ಮಧ್ಯೆ ಸುಕುಮಾರ್ ಅವರು ತಮ್ಮ ಇಡೀ ಸಿನಿಮಾ ತಂಡಕ್ಕೆ ಉಡುಗೊರೆ ನೀಡಿದ್ದಾರೆ. ಏನದು ಉಡುಗೊರೆ? ಮುಂದೆ ಓದಿ. ತಂಡದ ಸದಸ್ಯರಿಗೆ ತಲಾ 1 ಲಕ್ಷ ರೂ. ನೀಡಿದ ಸುಕ್ಕು ಒಂದು ಸಿನಿಮಾ ದೊಡ್ಡ ಲಾಭ ಮಾಡುತ್ತಿದ್ದಂತೆಯೇ, ನಿರ್ಮಾಪಕರು ತಂಡಕ್ಕೆ ಗಿಫ್ಟ್ ನೀಡುವುದು ಸಹಜ. ಇದೀಗ ನಿರ್ದೇಶಕ ಸುಕುಮಾರ್‌ ಕೂಡ ತಂಡಕ್ಕೆ ಗಿಫ್ಟ್ ನೀಡಿದ್ದಾರೆ. ಸಿನಿಮಾಕ್ಕೆ ಕೆಲಸ ಮಾಡಿದ ಸೆಟ್ ಬಾಯ್ಸ್, ಆರ್ಟ್ ಡಿಪಾರ್ಟ್‌ಮೆಂಟ್‌ನ ಸದಸ್ಯರಿಗೆ ಲೈಟ್ ಬಾಯ್ಸ್‌ಗೆ.. ಹೀಗೆ ಸಿನಿಮಾಗಾಗಿ ಹಗಲು ರಾತ್ರಿ ಎನ್ನದೇ ಕೆಲಸ ಮಾಡಿದ ತಂಡದ ಸದಸ್ಯರಿಗೆ ವೈಯಕ್ತಿಕವಾಗಿ ತಲಾ ಒಂದು ಲಕ್ಷ ರೂ. ನೀಡುವುದಾಗಿ ಸುಕುಮಾರ್ ಘೋಷಣೆ ಮಾಡಿದ್ದಾರೆ. ಮಂಗಳವಾರ (ಡಿ.28) ನಡೆದ ಥ್ಯಾಂಕ್ಸ್ ಮೀಟ್‌ನಲ್ಲಿ ಈ ವಿಚಾರವನ್ನು ಅವರು ತಿಳಿಸಿದ್ದಾರೆ. ಅಂದಹಾಗೆ, 'ಪುಷ್ಪ' ಸಿನಿಮಾವು ಬಹುತೇಕ ಅರಣ್ಯದಲ್ಲಿ ಶೂಟಿಂಗ್ ಮಾಡಲಾಗಿದೆ. ಹಾಗಾಗಿ, ಚಿತ್ರತಂಡದ ಸಹಕಾರ ಅಗತ್ಯವಾಗಿರುತ್ತದೆ. ದಟ್ಟ ಅರಣ್ಯದಲ್ಲಿ ಶೂಟಿಂಗ್ ಮಾಡಲು ಅನುಕೂಲವಾಗುವಂತೆ ಸಾಕಷ್ಟು ಜನ ತಂಡದ ಸದಸ್ಯರು ನೆರವಾಗಿರುತ್ತಾರೆ. ಅವರೆಲ್ಲರನ್ನೂ ನೆನಪು ಮಾಡಿಕೊಂಡಿರುವ ಸುಕುಮಾರ್, ಇಂಥದ್ದೊಂದು ಸಹಾಯ ಮಾಡಲು ಮುಂದಾಗಿದ್ಧಾರೆ. 275 ಕೋಟಿ ರೂ. ಗಳಿಸಿದ ಪುಷ್ಪ ಡಿ.17ರಂದು ತೆರೆಕಂಡ ಈ ಸಿನಿಮಾವು ಈವರೆಗೂ ಸುಮಾರು 275 ಕೋಟಿ ರೂ. ಗ್ರಾಸ್ ಕಲೆಕ್ಷನ್‌ ಮಾಡಿದೆ. ನಿರ್ಮಾಪಕರ ಪ್ರಕಾರ, ಇದು 350 ಕೋಟಿ ರೂ.ವರೆಗೂ ಹೋಗಲಿದೆಯಂತೆ. ಹಿಂದಿ ವರ್ಷನ್‌ನಿಂದಲೇ ಸುಮಾರು 40 ಕೋಟಿ ರೂ.ಗಳಷ್ಟು ಹಣ ಹರಿದುಬಂದಿದೆ. ಹಾಗೆಯೇ, ಕರ್ನಾಟಕದಿಂದ ಸುಮಾರು 20 ಕೋಟಿ ರೂ.ಗಳಷ್ಟು ಗಳಿಕೆಯಾಗಿದೆ ಎಂಬ ಮಾಹಿತಿ ಇದೆ. ಒಟ್ಟಾರೆಯಾಗಿ ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆಯು ಭರ್ಜರಿ ಲಾಭವನ್ನೇ ಪಡೆದುಕೊಂಡಿದೆ. ಸದ್ಯ ಎಲ್ಲರ ಗಮನ 'ಪುಷ್ಪ 2' ಮೇಲಿದೆ. ಪಾರ್ಟ್‌ 2 ಶೂಟಿಂಗ್ ಯಾವಾಗ ಶುರುವಾಗಲಿದೆ? ಯಾವಾಗ ರಿಲೀಸ್ ಆಗಲಿದೆ ಎಂಬುದರ ಬಗ್ಗೆ ಸದ್ಯಕ್ಕಂತೂ ಮಾಹಿತಿ ಇಲ್ಲ. ಸದ್ಯ ಚಿತ್ರತಂಡ 'ಪುಷ್ಪ' ಸಕ್ಸಸ್‌ ಅನ್ನು ಎಂಜಾಯ್ ಮಾಡುತ್ತಿದೆ.