ನಮ್ಮಿಂದ, ನಮ್ಮ ಅವಸರದಿಂದ ರಸ್ತೆ ಅಪಘಾತಗಳು ಹೆಚ್ಚುತ್ತಿವೆ: ನಟ ನೀನಾಸಂ ಸತೀಶ್

ಬೆಂಗಳೂರಿನ ಕೋರಮಂಗಲದಲ್ಲಿ ರಸ್ತೆ ಅಪಘಾತ ನಡೆದಿದೆ. ಕಾರಿನಲ್ಲಿದ್ದ 7 ಜನರು ಸಾವನ್ನಪ್ಪಿದ್ದಾರೆ. ನಟ ಸತೀಶ್ ನೀನಾಸಂ, ವಸಿಷ್ಠ ಸಿಂಹ, ರಾಗಿಣಿ ದ್ವೀವೇದಿ, ದುನಿಯಾ ವಿಜಯ್ ಅವರು ರಸ್ತೆ ಅಪಘಾತದ ಕುರಿತು ಜಾಗೃತಿಯ ಮಾತುಗಳನ್ನು ಆಡಿದ್ದಾರೆ.​

ನಮ್ಮಿಂದ, ನಮ್ಮ ಅವಸರದಿಂದ ರಸ್ತೆ ಅಪಘಾತಗಳು ಹೆಚ್ಚುತ್ತಿವೆ: ನಟ ನೀನಾಸಂ ಸತೀಶ್
Linkup
ನಿತ್ಯ ದೇಶದಲ್ಲಿ ರಸ್ತೆ ಅಪಘಾತಗಳು ಹೆಚ್ಚುತ್ತಿವೆ. ಬೆಂಗಳೂರಿನ ಕೋರಮಂಗಲದಲ್ಲಿ ರಾತ್ರಿ ಸುಮಾರು 1:30ರಲ್ಲಿ (ಆಗಸ್ಟ್ 31) ನಡೆದ ಐಷಾರಾಮಿ ಕಾರು ಭೀಕರ ಅಪಘಾತದಲ್ಲಿ 7 ಜನರು ಸಾವನಪ್ಪಿದ್ದಾರೆ . ನಿರ್ಲಕ್ಷ್ಯ, ವೇಗದ ಚಾಲನೆಯಿಂದ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ 7 ಜನರಲ್ಲಿ ಯಾರೂ ಸೀಟ್ ಬೆಲ್ಟ್ ಹಾಕಿರಲಿಲ್ಲ ಎಂದು ಹೇಳಲಾಗುತ್ತಿದೆ. ನಟ ಅವರು ರಸ್ತೆ ಅಪಘಾತದ ಕುರಿತು ಜಾಗೃತಿಯ ಮಾತುಗಳನ್ನು ಆಡಿದ್ದಾರೆ. ನೀನಾಸಂ ಸತೀಶ್ ಎಷ್ಟೇ ಎಚ್ಚರಿಕೆ ವಹಿಸಿದರೂ ಕೂಡ ಪ್ರತಿವರ್ಷ ರಸ್ತೆ ಅಪಘಾತದಲ್ಲಿ ಸಾವಿರಾರು ಜನರು ಸಾಯುತ್ತಿದ್ದಾರೆ. ಅದಕ್ಕೆ ಕಾರಣ ನಾವೇ, ನಮ್ಮ ಅವಸರ ಕಾರಣ. ಹಾಗಾಗಿ ಅವಸರ ಕಡಿಮೆ ಮಾಡಿಕೊಳ್ಳೋಣ. 2 ಚಕ್ರದ ವಾಹನ ಓಡಿಸುವಾಗ ಹೆಲ್ಮೆಟ್ ಹಾಕಿಕೊಳ್ಳೋಣ, ಕಾರ್ ಓಡಿಸುವಾಗ ಸೀಟ್ ಬೆಲ್ಟ್ ಹಾಕಿಕೊಳ್ಳೋಣ. ಇದರಿಂದ ಟ್ರಾಫಿಕ್ ನಿಯಮ ಪಾಲನೆ ಮಾಡುವುದರ ಜೊತೆಗೆ ರಸ್ತೆ ಅಪಘಾತದಿಂದ ಪಾರಾಗೋಣ. ವಸಿಷ್ಠ ಸಿಂಹ ಜೀವ ಇದ್ದರೆ ಮಾತ್ರ ಜೀವನ. ನಮ್ಮನ್ನು ನಂಬಿದವರು, ನಮ್ಮನ್ನು ಪ್ರೀತಿಸುವವರು ಮನೆಯಲ್ಲಿ ನಮಗೋಸ್ಕರ ಕಾಯುತ್ತಿರುತ್ತಾರೆ. ನಾವು ಸುರಕ್ಷಿತವಾಗಿರೋದು ಅವರಿಗೆ ನೀಡುವ ಭರವಸೆಯಾಗಿದೆ. ದಯವಿಟ್ಟು ಸುರಕ್ಷತೆಯಿಂದಿರಿ. ನಮ್ಮ ರಾಜ್ಯವನ್ನು ಅಪಘಾತ ಮುಕ್ತ ರಾಜ್ಯವನ್ನಾಗಿ ಮಾಡೋಣ. ನಾವು ಚಲಿಸುವಾಗ ನಮ್ಮ ತಪ್ಪಿನಿಂದ ಇನ್ನೊಬ್ಬರಿಗೆ ಸಮಸ್ಯೆ ಆಗಬಾರದು. ನಟಿ ರಾಗಿಣಿ ದ್ವೀವೇದಿ ರಾಜ್ಯವನ್ನು ಅಪಘಾತ ಮುಕ್ತ ರಾಜ್ಯವನ್ನಾಗಿಸಲು ಎಲ್ಲರೂ ಕೈಜೋಡಿಸೋಣ. ರಸ್ತೆಯಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸಿ ವಾಹನ ಚಲಾಯಿಸಬೇಕು. ಕಡ್ಡಾಯವಾಗಿ ಸೀಟ್ ಬೆಲ್ಟ್ ಮತ್ತು ಹೆಲ್ಮೆಟ್ ಧರಿಸುವುದರಿಂದ ಮುಂದೆ ಸಂಭವಿಸಬಹುದಾದ ಅಪಘಾತದಿಂದ ದೂರವಿರಬಹುದು ದುನಿಯಾ ವಿಜಯ್ 18 ವರ್ಷಕ್ಕಿಂತ ಕಡಿಮೆ ಇರುವ ವಯಸ್ಕರು ವಾಹನ ಚಲಾಯಿಸುವುದು ಅಪರಾಧ ಮತ್ತು ಇದರಿಂದ ರಸ್ತೆಗಳಲ್ಲಿ ಅಪಘಾತ ಸಂಭವಿಸಿ ಸಾರ್ವಜನಿಕರಿಗೆ ಪ್ರಾಣಾಪಾಯವೂ ಆಗಬಹುದು. ಆದ್ದರಿಂದ ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡಬಾರದು. ಅದಿತಿ ಪ್ರಭುದೇವ ವಾಹನ ಚಲಾಯಿಸುವಾಗ ನಿಮ್ಮ ಗಮನ ಸದಾ ರಸ್ತೆಯ ಮೇಲಿರಲಿ. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ, ಸುರಕ್ಷಿತವಾಗಿರಿ. ಕನ್ನಡ ಚಿತ್ರರಂಗದ ಖ್ಯಾತ ನಟಿ ಅದಿತಿ ಪ್ರಭುದೇವ ಅವರು ನಾಗರಿಕರಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸಲು ವಿನಂತಿ ಮಾಡಿದ್ದಾರೆ. ಏನಿದು ಘಟನೆ? "ಕೋರಮಂಗಲದ ಮಂಗಳ ಕಲ್ಯಾಣಮಂಟಪದ ಬಳಿ ಫುಟ್ಪಾತ್ ಮೇಲಿನ ಕಂಬಕ್ಕೆ ಕಾರು ಡಿಕ್ಕಿ ಹೊಡೆದಿದೆ. ಫುಟ್‌ಪಾತ್‌ ಹತ್ತಿ 2 ಬೊಲ್ಲಾರ್ಡ್ಸ್‌ಗೆ ಕಾರು ಡಿಕ್ಕಿಯಾಗಿದೆ. ಬಳಿಕ ಪಕ್ಕದ ಕಟ್ಟಡದ ಗೋಡೆಗೂ ಗುದ್ದಿದೆ. ನಂತರ ಕಂಬಕ್ಕೆ ಡಿಕ್ಕಿ ಹೊಡೆದಿದೆ, ಬಳಿಕ ಪಕ್ಕದ ಕಟ್ಟಡದ ಗೋಡೆಗೂ ಗುದ್ದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನ ಮುಂದಿನ ಸೀಟ್‌ನಲ್ಲಿ ಮೂವರು ಕುಳಿತಿದ್ದರು ಹಾಗೂ ಹಿಂಬದಿ ಸೀಟ್‌ನಲ್ಲಿ ನಾಲ್ವರು ಕುಳಿತಿದ್ದರು. ಸೀಟ್ ಬೆಲ್ಟ್ ಹಾಕದೆ ಇರೋದಕ್ಕೆ ಕಾರಿನಲ್ಲಿದ್ದ ಏರ್‌ಬ್ಯಾಗ್ ಸಹ ಓಪನ್ ಆಗಿಲ್ಲ" ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ.ಬಿ ಆರ್ ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.