'ನೋಡಿ ಸ್ವಾಮಿ ಇವನು ಇರೋದೆ ಹೀಗೆ' ಎನ್ನುತ್ತಿರುವ 'ಕವಲುದಾರಿ' ಖ್ಯಾತಿಯ ನಟ ರಿಷಿ!

ವಿಭಿನ್ನ ಪಾತ್ರ, ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ರಿಷಿ ಈಗ ಫುಲ್‌ ಬಿಝಿ. ಅವರೀಗ 'ನೋಡಿ ಸ್ವಾಮಿ ಇವನು ಇರೋದೆ ಹೀಗೆ' ಚಿತ್ರದಲ್ಲಿ ನಟಿಸುತ್ತಿದ್ದು ದೊಡ್ಡ ಎಕ್ಸ್‌ಪೆರಿಮೆಂಟಲ್‌ ಸಿನಿಮಾ ಇದು ಎಂದಿದ್ದಾರೆ ರಿಷಿ.

'ನೋಡಿ ಸ್ವಾಮಿ ಇವನು ಇರೋದೆ ಹೀಗೆ' ಎನ್ನುತ್ತಿರುವ 'ಕವಲುದಾರಿ' ಖ್ಯಾತಿಯ ನಟ ರಿಷಿ!
Linkup
ಪದ್ಮಾ ಶಿವಮೊಗ್ಗ ರಾಮನ ಅವತಾರ, ಸಕಲಕಲಾವಲ್ಲಭ ಮತ್ತಿತರ ಸಿನಿಮಾಗಳಲ್ಲಿ ನಟಿಸುತ್ತಿರುವ '' ಅನ್ನೋ ಇನ್ನೊಂದು ಸಿನಿಮಾದಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಫಸ್ಟ್‌ ಲುಕ್‌ನಲ್ಲಿ ರಿಷಿ ಅವತಾರ ಚಿತ್ರ ವಿಭಿನ್ನವಾಗಿದೆ ಎನ್ನುವುದನ್ನು ಹೇಳುತ್ತಿದೆ. 'ಈ ಚಿತ್ರ ತುಂಬಾ ಕ್ರೇಝಿಯಾಗಿದೆ ಎನ್ನಬಹುದು. ಕನ್ನಡ ಸಿನಿಮಾದಲ್ಲಿ ಬಹಳ ದೊಡ್ಡ ಎಕ್ಸ್‌ಪರಿಮೆಂಟಲ್‌ ಸಿನಿಮಾ ಎನ್ನಬಹುದು. '' ಸಿನಿಮಾವನ್ನೇ ಎಕ್ಸ್‌ಪರಿಮೆಂಟಲ್‌ ಸಿನಿಮಾ ಅಂತ ಕೆಲವರು ಕೇಳುತ್ತಿದ್ದರು. ನನ್ನ ಪ್ರಕಾರ ಅದು ಮೇನ್‌ಸ್ಟ್ರೀಮ್‌ ಸಿನಿಮಾ' ಎಂದಿದ್ದಾರೆ ರಿಷಿ. 'ನೋಡಿ ಸ್ವಾಮಿ ಇವನು ಇರೋದೆ ಹೀಗೆ' ಚಿತ್ರ ಡಿಪ್ರೆಷನ್‌ ಹಾಗೂ ಆತ್ಮಹತ್ಯೆ ಕುರಿತ ವಿಷಯಗಳನ್ನು ಕಥೆ ಹೊಂದಿದೆ. 'ಎಲ್ಲಾ ಕಡೆ ಪ್ಯಾನಿಕ್‌ ಅಟ್ಯಾಕ್‌, ಡಿಪ್ರೆಷನ್‌ ಜಾಸ್ತಿಯಾಗ್ತಿದೆ. ಇವತ್ತಿನ ದಿನದಲ್ಲಂತೂ ಇದು ಸಾಮಾನ್ಯ ಸಂಗತಿ. ಮೊದಲೆಲ್ಲ ಡಿಪ್ರೆಷನ್‌ ಮತ್ತು ಆಂಗ್ಸೈಟಿ ಬಗ್ಗೆ ಹೇಳಿಕೊಳ್ಳೋಕೆ ಜನರಿಗೆ ಗೊತ್ತಾಗುತ್ತಿರಲಿಲ್ಲ. ಸಿನಿಮಾದಲ್ಲಿಇದನ್ನು ತುಂಬಾ ಗಂಭೀರವಾಗಿ ಹೇಳುತ್ತಿಲ್ಲ. ಹಾಸ್ಯದ ಲೇಪನ ಇರುತ್ತೆ' ಎನ್ನುತ್ತಾರೆ ಅವರು. 'ಸಕಲಕಲಾವಲ್ಲಭ' ಚಿತ್ರದಲ್ಲಿ ರಿಷಿ ಇನ್ನೊಂದು ರೀತಿಯ ಪಾತ್ರದಲ್ಲಿ ಲೋಕಲ್‌ ಹುಡುಗನಾಗಿ ನಟಿಸುತ್ತಿದ್ದಾರೆ. 'ಈ ಚಿತ್ರದಲ್ಲಿ ಹೀರೊಗೆ ಮನೆಯಲ್ಲಿ ಪೊಲೀಸ್‌ ಆಗಬೇಕು ಎಂಬ ಒತ್ತಡ ಇರುತ್ತೆ. ಅವನು ಲೋಕಲ್‌ ಹುಡುಗ. ಸ್ನೇಹಿತರ ಜತೆ ಓಡಾಡಿಕೊಂಡು ಡಾನ್‌ ಥರ ಭಾವಿಸಿಕೊಂಡಿರುತ್ತಾನೆ. ಅವನ ಪ್ರೇಮಿ ಎಂಟ್ರಿಕೊಟ್ಟ ನಂತರ ಅವನನ್ನು ಎಲ್ಲೆಲ್ಲಿ ಕರೆದುಕೊಂಡು ಹೋಗುತ್ತೆ, ಏನಾಗುತ್ತೆ ಎನ್ನುವುದು ಸಿನಿಮಾದಲ್ಲಿದೆ. ಎಲ್ಲಾ ರೀತಿಯ ಕೆಲಸ ಮಾಡುತ್ತಿರೋದ್ರಿಂದ 'ಸಕಲಕಲಾವಲ್ಲಭ' ಎಂಬ ಹೆಸರನ್ನು ಇಡಲಾಗಿದೆ' ಎಂದಿದ್ದಾರೆ ರಿಷಿ. 'ಸಕಲಕಲಾವಲ್ಲಭ' ಚಿತ್ರದಲ್ಲಿ ರೆಬಾ ಮೋನಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ 'ಬಿಗಿಲ್‌' ಚಿತ್ರ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ 'ರತ್ನನ್‌ ಪ್ರಪಂಚ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ದೊಡ್ಡ ತಾರಾಗಣವಿದ್ದು, ಸಾಯಿಕುಮಾರ್‌ ವಿಲನ್‌ ಪಾತ್ರದಲ್ಲಿ ನಟಿಸಿದ್ದಾರೆ. ಶೋಭರಾಜ್‌, ಸಾಧು ಕೋಕಿಲಾ, ಅಚ್ಯುತ್‌, ಶಿವರಾಜ್‌ ಕೆ.ಆರ್‌. ಪೇಟೆ, ದಿನೇಶ್‌ ಮಂಗಳೂರು ಮತ್ತಿತರ ನಟರು ನಟಿಸಿದ್ದಾರೆ. 'ದೊಡ್ಡ ಸ್ಕೇಲ್‌ನಲ್ಲಿಆಗಿರುವ ಸಿನಿಮಾ ಇದು. ನನ್ನ ಪಾಲಿಗೆ ಬಿಗ್‌ ಬಜೆಟ್‌ ಸಿನಿಮಾ ಇದು. ನಿರ್ದೇಶಕ ಜೇಕಬ್‌ ವರ್ಗೀಸ್‌ ಬಹಳ ಚೆನ್ನಾಗಿ ಮಾಡಿದ್ದಾರೆ. 'ಪೃಥ್ವಿ' ಸಿನಿಮಾ ಸೇರಿದಂತೆ ಹಲವು ಜನಪ್ರಿಯ ಸಿನಿಮಾ ಮಾಡಿದ್ದಾರೆ. ಏನೇ ಕಷ್ಟ ಎದುರಾದರೂ ಸೆಟ್‌ನಲ್ಲಿ ಎಲ್ಲವನ್ನೂ ಸ್ಮೂತ್‌ ಆಗಿ ನಿಭಾಯಿಸುತ್ತಾರೆ. ಅವರಿಂದ ಬಹಳ ಕಲಿತೆ' ಎನ್ನುತ್ತಾರೆ ರಿಷಿ. ಕೋಟ್ಸ್‌ ನೋಡಿ ಸ್ವಾಮಿ ಇವನು ಇರೋದೆ ಹೀಗೆ ಚಿತ್ರ ಬ್ಲಾಕ್‌ ಕಾಮಿಡಿ ಜಾನರ್‌ನದು ಎನ್ನಬಹುದು. ಸಿನಿಮಾದಲ್ಲಿ ಕಥೆ ಬಹಳ ಸೀರಿಯಸ್‌ ಆಗಿ ಸಾಗುತ್ತಿರುತ್ತದೆ. ಆದರೆ, ನೋಡುವವರಿಗೆ ಅವನ ಕಷ್ಟ ಕಂಡಾಗ ಬಹಳ ನಗು ತರಿಸುತ್ತಿರುತ್ತದೆ. ಟ್ರೀಟ್‌ ಮಾಡಿರೋದೂ ಅದೇ ರೀತಿ. -ರಿಷಿ, ನಟ