'ನನ್ನ ಸಿನಿಮಾ ರಿಜೆಕ್ಟ್ ಮಾಡಿದ್ದಕ್ಕೆ ಥ್ಯಾಂಕ್ಸ್'- ನಟ ಚಿರಂಜೀವಿ ಮಾತು ಕೇಳಿ ಸಾಯಿ ಪಲ್ಲವಿ ಶಾಕ್!

ಮಲಯಾಳಂ ನಟಿ ಸಾಯಿ ಪಲ್ಲವಿಗೆ ಟಾಲಿವುಡ್‌ನಲ್ಲಿ ದೊಡ್ಡ ಬೇಡಿಕೆ ಇದೆ. ಇದೀಗ ಅವರಿಗೆ 'ಮೆಗಾ ಸ್ಟಾರ್' ಚಿರಂಜೀವಿ ಥ್ಯಾಂಕ್ಸ್ ಹೇಳಿದ ಘಟನೆಯೊಂದು ನಡೆದಿದೆ. ಅದಕ್ಕೆ ಕಾರಣವೇನು? ಈ ಸ್ಟೋರಿ ಓದಿ.

'ನನ್ನ ಸಿನಿಮಾ ರಿಜೆಕ್ಟ್ ಮಾಡಿದ್ದಕ್ಕೆ ಥ್ಯಾಂಕ್ಸ್'- ನಟ ಚಿರಂಜೀವಿ ಮಾತು ಕೇಳಿ ಸಾಯಿ ಪಲ್ಲವಿ ಶಾಕ್!
Linkup
ಸಾಮಾನ್ಯವಾಗಿ ಒಬ್ಬರ ನಟನ ಜೊತೆಗೆ ನಟಿಸಲು ಯಾರಾದ್ರೂ ನಟಿ ಹಿಂದೇಟು ಹಾಕಿದರೆ, ಅವರ ಆ ನಟ ಬಗ್ಗೆ ನೆಗೆಟಿವ್ ಮಾತನಾಡುವುದನ್ನು ಕಂಡಿದ್ದೇವೆ. ಆದರೆ, 'ಮೆಗಾ ಸ್ಟಾರ್‌' ಮಾತ್ರ ಅದಕ್ಕೆ ತದ್ವಿರುದ್ಧ. ತಮ್ಮ ನಾಯಕತ್ವದ ಸಿನಿಮಾವನ್ನೇ ರಿಜೆಕ್ಟ್ ಮಾಡಿದ ನಟಿ ಸಾಯಿ ಪಲ್ಲವಿಗೆ ಥ್ಯಾಂಕ್ಸ್ ಹೇಳಿದ್ದಾರೆ! ಈ ಮಾತನ್ನು ಕೇಳಿ ಕೂಡ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಇದೆಲ್ಲವೂ ನಡೆದಿದ್ದು ನಾಗ ಚೈತನ್ಯ-ಸಾಯಿ ಪಲ್ಲವಿ ಒಟ್ಟಿಗೆ ನಟಿಸಿರುವ 'ಲವ್ ಸ್ಟೋರಿ' ಸಿನಿಮಾದ ಪ್ರೀ-ರಿಲೀಸ್ ಇವೆಂಟ್‌ನಲ್ಲಿ! ಚಿರು ಸಿನಿಮಾ ರಿಜೆಕ್ಟ್ ಮಾಡಿದ್ದ ಸಾಯಿ 'ಲವ್ ಸ್ಟೋರಿ' ಇವೆಂಟ್‌ನಲ್ಲಿ ಎಲ್ಲರ ಬಗ್ಗೆ ಮಾತನಾಡಿದ ಚಿರು, ಸಾಯಿ ಪಲ್ಲವಿ ಬಗ್ಗೆ ಮಾತ್ರ ಕೊಂಚ ತಮಾಷೆಯಾಗಿಯೇ ಮಾತನಾಡಿದ್ದಾರೆ. 'ನನ್ನ ತಮ್ಮನ ಮಗ (ವರುಣ್ ತೇಜ್) ಸಾಯಿ ಪಲ್ಲವಿ ಜೊತೆಗೆ ನಟಿಸಿದ್ದ. ಆ ಸಿನಿಮಾದ ಹಾಡೊಂದನ್ನು ನನಗೆ ತೋರಿಸಿದ್ದ. ಆಗ ನಾನು ಅವನ ಡ್ಯಾನ್ಸ್ ನೋಡುವ ಬದಲು ಸಾಯಿ ಪಲ್ಲವಿ ಡ್ಯಾನ್ಸ್ ನೋಡಿ ಫಿದಾ ಆಗಿದ್ದೆ. ಅವನಿಗೂ ಅದನ್ನು ಹೇಳಿದ್ದೆ. ನಂತರ ನನ್ನೊಂದು ಸಿನಿಮಾದಲ್ಲಿ ತಂಗಿಯ ಪಾತ್ರಕ್ಕೆ ಸಾಯಿ ಪಲ್ಲವಿಯನ್ನು ಆಯ್ಕೆ ಮಾಡೋಣ ಎಂಬ ಮಾತು ಬಂತು. ಸಾಯಿ ಪಲ್ಲವಿ ಇದನ್ನು ರಿಜೆಕ್ಟ್‌ ಮಾಡಲಿ ಎಂದುಕೊಂಡಿದ್ದೆ. ಅದು ಹಾಗೆಯೇ ಆಯಿತು. ಅವರು ರಿಜೆಕ್ಟ್ ಮಾಡಿದ್ರು. ಅದಕ್ಕಾಗಿ ನಾನು ಥ್ಯಾಂಕ್ಸ್ ಹೇಳುತ್ತೇನೆ' ಎಂದರು ಚಿರು. ರಿಜೆಕ್ಟ್ ಮಾಡಲಿ ಎಂದು ಚಿರು ಕೋರಿಕೊಂಡಿದ್ದೇಕೆ? ತಂಗಿ ಪಾತ್ರದ ಆಫರ್ ಅನ್ನು ಸಾಯಿ ಪಲ್ಲವಿ ರಿಜೆಕ್ಟ್ ಮಾಡುವಂತೆ ಚಿರು ಕೋರಿಕೊಳ್ಳಲು ಕಾರಣವಿದೆ. 'ಅದ್ಭುತವಾಗಿ ಡ್ಯಾನ್ಸ್ ಮಾಡುವಂತಹ ಇಂಥ ಪ್ರತಿಭಾವಂತ ನಟಿಯ ಜೊತೆಗೆ ಒಂದು ಹಾಡಿನಲ್ಲಿ ಹೆಜ್ಜೆ ಹಾಕಬೇಕು. ಮಾಡಿದರೆ, ಒಂದು ರೊಮ್ಯಾಂಟಿಕ್ ಗೀತೆಗೆ ಅದ್ಭುತವಾಗಿ ಡ್ಯಾನ್ಸ್ ಮಾಡಬೇಕು. ತಂಗಿ ಪಾತ್ರ ಮಾಡಿದರೆ ಚೆನ್ನಾಗಿರುವುದಿಲ್ಲ' ಎಂದು ತಮಾಷೆ ಮಾಡಿದರು. ಆ ಕಾರಣಕ್ಕಾಗಿ ಸಾಯಿ ಪಲ್ಲವಿ ಸಿನಿಮಾ ರಿಜೆಕ್ಟ್ ಮಾಡಿದ್ದರೂ, ಅದಕ್ಕೆ ಚಿರು ಥ್ಯಾಂಕ್ಸ್ ಹೇಳಿದ್ದು. ಈ ಬಗ್ಗೆ ಪ್ರತಿಕ್ರಿಯಿಸಿದ ನಟಿ ಸಾಯಿ ಪಲ್ಲವಿ, 'ಅದು ರಿಮೇಕ್ ಸಿನಿಮಾ ಎಂಬ ಕಾರಣಕ್ಕೆ ರಿಜೆಕ್ಟ್ ಮಾಡಿದೆ. ಆದರೆ ನಿಮ್ಮ ಜೊತೆಗೆ ನಟಿಸಬೇಕು ಎಂಬುದು ನನ್ನ ಕನಸಾಗಿದೆ' ಎಂದರು. ಅಂದಹಾಗೆ, ಆ ಸಿನಿಮಾ ಯಾವುದು? 2015ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಬಂಪರ್ ಬೆಳೆ ತೆಗೆದಿದ್ದ ಅಜಿತ್‌ ಕುಮಾರ್‌ ನಟನೆಯ 'ವೇದಾಲಂ' ಸಿನಿಮಾವನ್ನು ಚಿರಂಜೀವಿ ರಿಮೇಕ್ ಮಾಡಲಿದ್ದಾರೆ. ಮೂಲ ಚಿತ್ರದಲ್ಲಿ ಅಣ್ಣ-ತಂಗಿ ಸೆಂಟಿಮೆಂಟ್ ಸಖತ್ ವರ್ಕೌಟ್ ಆಗಿತ್ತು. ಅಲ್ಲಿ ತಂಗಿಯಾಗಿ ಲಕ್ಷ್ಮಿ ಮೆನನ್ ಕಾಣಿಸಿಕೊಂಡಿದ್ದರು. ಇದೀಗ 'ವೇದಾಲಂ' ಅನ್ನು ತೆಲುಗಿಗೆ ರಿಮೇಕ್ ಮಾಡುತ್ತಿರುವುದರಿಂದ ಇಲ್ಲಿ ಚಿರು ಸಹೋದರಿ ಪಾತ್ರಕ್ಕೆ ಸಾಯಿ ಪಲ್ಲವಿಗೆ ಆಫರ್ ನೀಡಲಾಗಿತ್ತು. ಅವರು ರಿಜೆಕ್ಟ್ ಮಾಡಿದ್ದರಿಂದ, ಕೀರ್ತಿ ಸುರೇಶ್ ಹೆಸರು ಫೈನಲ್ ಆಗಿದೆ. ಪುನೀತ್ ರಾಜ್‌ಕುಮಾರ್ ನಟನೆಯ 'ವೀರ ಕನ್ನಡಿಗ' ಮೂಲಕ ನಿರ್ದೇಶಕರಾದ ಮೆಹೆರ್ ರಮೇಶ್, ಈಗ ಈ ಸಿನಿಮಾ ಮಾಡುತ್ತಿದ್ದಾರೆ. ಚಿತ್ರಕ್ಕೆ 'ಭೋಳಾ ಶಂಕರ್' ಎಂದು ಹೆಸರು ಇಡಲಾಗಿದೆ.