ದೇಶದ ಹಲವು ರಾಜ್ಯಗಳಲ್ಲಿ ಮಳೆ ಅಬ್ಬರ, 16 ಮಂದಿ ಬಲಿ; ಮುಂಬಯಿಗೆ 'ರೆಡ್‌ ಅಲರ್ಟ್‌'

ದೇಶದ ಹಲವು ರಾಜ್ಯಗಳಲ್ಲಿ ನೈಋುತ್ಯ ಮುಂಗಾರು ಅಬ್ಬರಿಸುತ್ತಿದ್ದು, ಸೋಮವಾರ ಮಳೆ ಸಂಬಂಧಿತ ಅವಘಡಗಳಿಂದ 16 ಜನ ಬಲಿಯಾಗಿದ್ದಾರೆ. ಇದೇ ವೇಳೆ ಮುಂಬಯಿ ಸೇರಿ ಕೊಂಕಣ ಪ್ರದೇಶದ ಹಲವು ಜಿಲ್ಲೆಗಳಲ್ಲಿ 'ರೆಡ್‌ ಅಲರ್ಟ್‌' ಘೋಷಣೆ ಮಾಡಲಾಗಿದೆ.

ದೇಶದ ಹಲವು ರಾಜ್ಯಗಳಲ್ಲಿ ಮಳೆ ಅಬ್ಬರ, 16 ಮಂದಿ ಬಲಿ; ಮುಂಬಯಿಗೆ 'ರೆಡ್‌ ಅಲರ್ಟ್‌'
Linkup
ಹೊಸದಿಲ್ಲಿ: ಹಲವು ರಾಜ್ಯಗಳಲ್ಲಿ ನೈಋುತ್ಯ ಮುಂಗಾರು ಅಬ್ಬರಿಸುತ್ತಿದ್ದು, ಸೋಮವಾರ ಒಂದೇ ದಿನ ಮಳೆ ಸಂಬಂಧಿತ ಅವಘಡಗಳಿಂದ 16 ಜನ ಬಲಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಎಂಟು, ಉತ್ತರ ಪ್ರದೇಶ, ಉತ್ತರಾಖಂಡದಲ್ಲಿ ತಲಾ ಮೂರು ಹಾಗೂ ದಿಲ್ಲಿ ಮತ್ತು ಹರಿಯಾಣದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಮಳೆ ಸಂಬಂಧಿ ಅನಾಹುತಗಳು ಸೋಮವಾರವೂ ಮುಂದುವರಿದಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ. ಅದರಲ್ಲೂ, ಠಾಣೆ ಜಿಲ್ಲೆಯ ಕಲ್ವಾ ಪ್ರದೇಶದ ಕೊಳೆಗೇರಿಯೊಂದರ ಮನೆ ಮೇಲೆ ದೊಡ್ಡ ಬಂಡೆ ಉರುಳಿ ಬಿದ್ದಿದ್ದು, ಇಬ್ಬರು ಅಪ್ರಾಪ್ತರು ಸೇರಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. ಇನ್ನು ರಾಯಗಢ ಜಿಲ್ಲೆಯಲ್ಲಿ ಮಳೆ ನೀರಿನಲ್ಲಿ ಮೂವರು ಕೊಚ್ಚಿ ಹೋಗಿದ್ದಾರೆ. ಮುಂದಿನ 24 ಗಂಟೆಗಳವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದ್ದು, ಮುಂಬಯಿ ಸೇರಿ ಕೊಂಕಣ ಪ್ರದೇಶದ ಹಲವು ಜಿಲ್ಲೆಗಳಲ್ಲಿ '' ಘೋಷಿಸಲಾಗಿದೆ. ಉತ್ತರಾಖಂಡದಲ್ಲಿ ಭಾನುವಾರ ರಾತ್ರಿ ಮೇಘಸ್ಫೋಟಗೊಂಡಿದ್ದು, ಉತ್ತರಕಾಶಿ ಜಿಲ್ಲೆಯಲ್ಲಿ ಒಂದೇ ಕುಟುಂಬದ ಮೂವರು ಅಸುನೀಗಿದ್ದಾರೆ. ಒಬ್ಬ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಉತ್ತರ ಪ್ರದೇಶದಲ್ಲೂ ವರುಣನ ಆರ್ಭಟ ಜೋರಾಗಿದ್ದು, ಸೀತಾಪುರ ಹಾಗೂ ಸಾಂಭಾಲ್‌ ಜಿಲ್ಲೆಗಳಲ್ಲಿ ಮನೆ ಕುಸಿದು ಒಟ್ಟು ಮೂವರು ಮೃತಪಟ್ಟಿದ್ದಾರೆ. ಸೀತಾಪುರ ಜಿಲ್ಲೆಯ ಅಂಗೇತಾ ಗ್ರಾಮದಲ್ಲಿ ಮನೆ ಕುಸಿದು ತಾಯಿ-ಮಗ ಮೃತಪಟ್ಟರೆ, ಸಾಂಭಾಲ್‌ ಜಿಲ್ಲೆಯಲ್ಲೂ ಮನೆ ಕುಸಿದು 14 ವರ್ಷದ ಬಾಲಕ ಮೃತಪಟ್ಟರೆ, ಮೂವರು ಗಾಯಗೊಂಡಿದ್ದಾರೆ. ಹರಿಯಾಣದ ಗುರುಗ್ರಾಮ ಜಿಲ್ಲೆಯಲ್ಲಿ ಮೂರು ಮಹಡಿಯ ಕಟ್ಟಡ ಕುಸಿತದಲ್ಲಿ ಮೃತರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದ್ದು, ಸೋಮವಾರ ಮತ್ತೊಂದು ಶವ ಪತ್ತೆಯಾಗಿದೆ. ದಿಲ್ಲಿಯಲ್ಲಿ ಸಹ ಭಾರಿ ಮಳೆಯಿಂದ ವ್ಯಕ್ತಿಯೊಬ್ಬರು ನೀರಿನಲ್ಲಿಕೊಚ್ಚಿ ಹೋಗಿದ್ದಾರೆ. ಮಹಾರಾಷ್ಟ್ರ, ದಿಲ್ಲಿಯಲ್ಲಿ ಭಾರಿ ಮಳೆಯ ಎಚ್ಚರಿಕೆ ಮಹಾರಾಷ್ಟ್ರ ಹಾಗೂ ದಿಲ್ಲಿಯಲ್ಲಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂಬಯಿ ಸೇರಿ ಹಲವು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ದಿಲ್ಲಿಯಲ್ಲಿ ಸೋಮವಾರ ಬೆಳಗ್ಗೆ 8.30ರ ವೇಳೆಗೆ 70 ಮಿ.ಮೀ. ಮಳೆಯಾಗಿದ್ದು, ಮುಂದಿನ 24 ಗಂಟೆ ಇದೇ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ.