ದರ್ಶನ್ 'ಐರಾವತ' ಸಿನಿಮಾ ನಾಯಕಿ ಊರ್ವಶಿ ರೌಟೇಲಾರ ಈ ಸೀರೆ ಲುಕ್‌ಗೆ ಖರ್ಚಾದ ಹಣ ಎಷ್ಟು?

'ಚಾಲೆಂಜಿಂಗ್ ಸ್ಟಾರ್' ದರ್ಶನ್ ನಟನೆಯ 'ಐರಾವತ' ಸಿನಿಮಾ ನಾಯಕಿ ಐರ್ವಶಿ ರೌಟೇಲಾ ಅವರು 4 ಲಕ್ಷ ರೂಪಾಯಿಗೂ ಅಧಿಕ ಬೆಲೆ ಬಾಳುವ ಸೀರೆ ಉಟ್ಟಿದ್ದಾರಂತೆ. ಆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ದರ್ಶನ್ 'ಐರಾವತ' ಸಿನಿಮಾ ನಾಯಕಿ ಊರ್ವಶಿ ರೌಟೇಲಾರ ಈ ಸೀರೆ ಲುಕ್‌ಗೆ ಖರ್ಚಾದ ಹಣ ಎಷ್ಟು?
Linkup
ಲಗ್ಷುರಿ ಫ್ಯಾಷನ್‌ ಆಯ್ಕೆ ಮೂಲಕ ಆಗಾಗ ಸುದ್ದಿಯಲ್ಲಿರುವ ಬಾಲಿವುಡ್‌ ನಟಿ ಇದೀಗ ಹೈ ಪ್ರೊಫೈಲ್‌ ಮದುವೆ ಸಮಾರಂಭವೊಂದಕ್ಕೆ ಬರೋಬ್ಬರಿ 4,25,000 ರೂ. ಬೆಲೆಯ ಗುಜರಾತಿ ಪಟೋಲಾ ಸೀರೆ ಧರಿಸಿ ಗಮನ ಸೆಳೆದಿದ್ದಾರೆ. ಇದಿಷ್ಟೇ ಅಲ್ಲ, ಆ ದಿನ ಅವರು ಧರಿಸಿದ ವಜ್ರದ ಆಭರಣಗಳ ಬೆಲೆಯೂ 24,50,000 ರೂ. ಎನ್ನಲಾಗಿದೆ. ಸೀರೆ, ಆಭರಣ, ಹೇರ್‌ ಸ್ಟೈಲ್‌, ಮೇಕಪ್‌, ಇತರ ಫ್ಯಾಷನ್‌ ಆ್ಯಕ್ಸೆಸರಿ ಸೇರಿದಂತೆ ಆ ಮದುವೆಗೆ ಅವರು ಒಟ್ಟು 58,75,000 ರೂ. ಬೆಲೆಯ ಕಾಸ್ಟ್ಯೂಮ್‌ ಧರಿಸಿದ್ದರಂತೆ! ಆ ಮದುವೆ ಕೂಡ ಅಂತಿಂಥ ಮದುವೆಯಲ್ಲ. ಹಿಂದಿ ಚಿತ್ರರಂಗದ ಹಿರಿಯ ನಟ ಮತ್ತು ರಾಜಕಾರಣಿ ಮನೋಜ್‌ ಕುಮಾರ್‌ ಅವರ ಮರಿಮೊಮ್ಮಗಳ ಮದುವೆ. ವಧುವಿನ ಮೆಹೆಂದಿ ಕಾರ್ಯಕ್ರಮಕ್ಕೆ ಈ ಸಾಂಪ್ರದಾಯಿಕ ಮತ್ತು ದುಬಾರಿ ಕಾಸ್ಟ್ಯೂಮ್‌ ಧರಿಸಿದ್ದ ಊರ್ವಶಿ ರೌಟೇಲಾ ಅವರ ಆ ವಿಶೇಷ ಸೀರೆಯನ್ನು ತಯಾರಿಸಲು ಸುಮಾರು 70 ದಿನಗಳು ಬೇಕಾದವು ಎಂದು ಅವರ ಸ್ಟೈಲಿಸ್ಟ್‌ ತುಷಾರ್‌ ಕಪೂರ್‌ ಹೇಳಿದ್ದಾರೆ. 'ಸೀರೆಯ ರೇಷ್ಮೆಯ ನೂಲುಗಳಿಗೆ ಬಣ್ಣ ಹಾಕಲು ಸುಮಾರು 70 ದಿನಗಳು ಮತ್ತು ಸೀರೆ ನೇಯಲು 25 ದಿನಗಳು ಬೇಕಾದವು. 600 ಗ್ರಾಂ ರೇಷ್ಮೆ ಬಳಕೆಯಾಗಿರುವ ಈ ಸೀರೆ ತಯಾರಿಕೆಗೆ 12 ಜನರು ಕೆಲಸ ಮಾಡಿದ್ದಾರೆ. ಇದಕ್ಕೆ ಬಳಕೆಯಾಗಿರುವ ವಸ್ತುಗಳಿಂದ ಸಾಮಾನ್ಯ ರೀತಿಯ ಸುಮಾರು 27 ಪಟೋಲಾ ಸೀರೆ ತಯಾರಿಸಬಹುದು' ಎಂದು ಅವರು ಹೇಳಿದ್ದಾರೆ. ಈಗಾಗಲೇ ಸಾಕಷ್ಟು ನಟಿಯರು ಬೆಲೆ ಬಾಳುವ ಸೀರೆಯುಟ್ಟು ಸುದ್ದಿಯಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋ, ವಿಡಿಯೋ ಹಾಕಿ ಸದ್ದು ಮಾಡುವ ಊರ್ವಶಿ ಆಗಾಗ ಕೆಲ ವಿಷಯಗಳಿಗೆ ಟ್ರೋಲ್ ಆಗುತ್ತಿರುತ್ತಾರೆ.