ತಾಲಿಬಾನ್ ಜತೆಗಿನ ಮಾತುಕತೆ ವಿಫಲವಾದರೆ, ಭಾರತದ ಸೇನೆಯ ನೆರವು ಕೋರಲು ಅಫ್ಘಾನಿಸ್ತಾನ ನಿರ್ಧಾರ

ಅಮೆರಿಕದ ಪಡೆಗಳು ಆಫ್ಘನ್ ನೆಲವನ್ನು ತೊರೆಯುತ್ತಿರುವುದರ ನಡುವೆಯೇ ತಾಲಿಬಾನ್ ಉಗ್ರರು ಮತ್ತೆ ಚಿಗಿತುಕೊಂಡಿದ್ದಾರೆ. ಹೀಗಾಗಿ ಅಲ್ಲಿನ ಸರಕಾರ ಮತ್ತು ಉಗ್ರರ ನಡುವೆ ಮಾತುಕತೆ ನಡೆಯುತ್ತಿದ್ದು, ಭಾರತದ ನೆರವು ಯಾಚಿಸುವ ಸಾಧ್ಯತೆ ಇದೆ.

ತಾಲಿಬಾನ್ ಜತೆಗಿನ ಮಾತುಕತೆ ವಿಫಲವಾದರೆ, ಭಾರತದ ಸೇನೆಯ ನೆರವು ಕೋರಲು ಅಫ್ಘಾನಿಸ್ತಾನ ನಿರ್ಧಾರ
Linkup
ಹೊಸದಿಲ್ಲಿ: ಅಮೆರಿಕವು ತನ್ನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿರುವ ಬೆನ್ನಲ್ಲೇ, ಅಫ್ಘಾನಿಸ್ತಾನದಲ್ಲಿ ಉಗ್ರರ ಆಕ್ರಮಣ ತೀವ್ರಗೊಂಡಿದೆ. ಈ ನಡುವೆ ಸರಕಾರ ಮತ್ತು ತಾಲಿಬಾನ್ ನಡುವೆ ಸಂಧಾನ ಮಾತುಕತೆಗಳು ಕೂಡ ಆರಂಭವಾಗಿವೆ. ಒಂದು ವೇಳೆ ಈ ಮಾತುಕತೆಗಳು ವಿಫಲವಾದರೆ, ಅಲ್ಲಿನ ಸರಕಾರ ಭಾರತದ ಸೇನೆಯ ನೆರವನ್ನು ಬೇಡುವ ಸಾಧ್ಯತೆ ಇದೆ. ತಾಲಿಬಾನ್ ಉಗ್ರರ ಉಪಟಳವನ್ನು ಎದುರಿಸಲು ಭಾರತೀಯ ಸೇನೆಯನ್ನು ಕಳುಹಿಸುವಂತೆ ಅಫ್ಘಾನಿಸ್ತಾನ ಕೋರದೆ ಇದ್ದರೂ, ತನ್ನ ಪಡೆಗಳಿಗೆ ಅಗತ್ಯ ತರಬೇತಿ ಹಾಗೂ ತಾಂತ್ರಿಕ ಸಹಾಯಗಳಂತಹ ನೆರವುಗಳನ್ನು ಕೋರಲಿದೆ ಎಂದು ಭಾರತದಲ್ಲಿನ ಅಫ್ಘಾನಿಸ್ತಾನದ ಹೇಳಿದ್ದಾರೆ. ದೇಶದಲ್ಲಿನ ಉಗ್ರರ ಹಿಡಿತ ಬಿಗಿಯಾಗುತ್ತಿರುವ ನಡುವೆ ತಾಲಿಬಾನ್ ಮತ್ತು ಅಫ್ಘಾನಿಸ್ತಾನ ಸರಕಾರದ ಪ್ರತಿನಿಧಿಗಳು ಮಾತುಕತೆ ಆರಂಭಿಸಿದ್ದಾರೆ. ಸುಮಾರು ಎರಡು ದಶಕಗಳಿಂದ ಆಫ್ಘನ್ ನೆಲದಲ್ಲಿ ನೆಲೆಯೂರಿದ್ದ ಅಮೆರಿಕದ ಪಡೆಗಳು ಆಗಸ್ಟ್ ವೇಳೆಗೆ ಸಂಪೂರ್ಣವಾಗಿ ತೆರವುಗೊಳ್ಳಲಿವೆ. ಆದರೆ, ದೋಹಾದಲ್ಲಿ ನಡೆದ ಕೆಲವು ಶಾಂತಿ ಮಾತುಕತೆಗಳು ಬಹುತೇಕ ವಿಫಲವಾಗಿದ್ದು, ತಾಲಿಬಾನ್ ಈಗ ಸಂಪೂರ್ಣ ಸೇನಾ ವಿಜಯ ಘೋಷಣೆ ಮಾಡುವ ಸಾಧ್ಯತೆ ಇದೆ. 'ತಾಲಿಬಾನ್ ಜತೆಗಿನ ಪ್ರಕ್ರಿಯೆಯಲ್ಲಿ ನಾವು ಸೂಕ್ತ ನಿರ್ಧಾರಕ್ಕೆ ಬರಲು ಸಾಧ್ಯವಾಗದೆ ಇದ್ದರೆ, ಭಾರತದ ಸೇನಾ ನೆರವು ಕೋರುವ ಸಮಯ ಬಂದರೂ ಬರಬಹುದು. ಮುಂದಿನ ವರ್ಷಗಳಲ್ಲಿ ಮತ್ತಷ್ಟು ಸೇನಾ ನೆರವು ಬೇಕಾಗಬಹುದು' ಎಂದು ಅಫ್ಘಾನಿಸ್ತಾನದ ರಾಯಭಾರಿ ಫರೀದ್ ಮಾಂಮುಂಡ್ಜೇ ಹೇಳಿದ್ದಾರೆ. 'ನಾವು ಅಫ್ಘಾನಿಸ್ತಾನಕ್ಕೆ ಭಾರತಡ ಪಡೆಗಳನ್ನು ಕಳಿಸುವಂತೆ ಕೋರುತ್ತಿಲ್ಲ. ನಮ್ಮ ಯುದ್ಧದಲ್ಲಿ ಹೋರಾಡಲು ಅಫ್ಘಾನಿಸ್ತಾನದಲ್ಲಿ ಅವರು ಹೆಜ್ಜೆ ಗುರುತು ಮೂಡಿಸುವುದು ಈಗಿನ ಸಂದರ್ಭದಲ್ಲಿ ಅಗತ್ಯವಿಲ್ಲ' ಎಂದಿದ್ದಾರೆ.