ಕಾರಿನಲ್ಲಿ ರೇಪ್‌ ಮಾಡಲು ಸಾಧ್ಯವೇ? ಅದಕ್ಕೆ ಅಲ್ಲಿ ಅಷ್ಟು ಜಾಗವಿದ್ಯಾ?: ಗುಜರಾತ್‌ ಪೊಲೀಸರ ವಿಚಿತ್ರ ಪತ್ರ!

''ಇಂತದ್ದೊಂದು ಕೇಸ್‌ ಬಂದಿರುವುದು ಇದೇ ಮೊದಲು. ಸಾಮಾನ್ಯವಾಗಿ ವಾಹನದ ಫಿಟ್ನೆಸ್‌, ಬ್ರೇಕ್‌ ಸಿಸ್ಟಮ್‌, ರಿಜಿಸ್ಪ್ರೇಷನ್‌ ದಾಖಲಾತಿ, ಮಾಲೀಕರ ಮಾಹಿತಿ ಮತ್ತು ಚಾಲಕರ ಲೈಸೆನ್ಸ್‌ ಪರಿಶೀಲಿಸಿ ಮಾಹಿತಿ ಕೊಡುವ ಕೆಲಸವನ್ನಷ್ಟೇ ನಾವು ಇದುವರೆಗೆ ಮಾಡಿದ್ದೆವು. ಇದೇ ಮೊದಲ ಬಾರಿ, ಕಾರಿನಲ್ಲಿ ರೇಪ್‌ ಮಾಡುವಷ್ಟು ಜಾಗ ಇದೆಯೋ ಇಲ್ಲವೋ ಎನ್ನುವ ಕುರಿತು ದೃಢೀಕರಣ ಪತ್ರ ಕೊಡಬೇಕಾಗಿದೆ. ಇದು ನಮ್ಮ ಪಾಲಿಗೆ ಹೊಸ ಸವಾಲು,'' ಎಂದು ಆರ್‌ಟಿಒ ಕಚೇರಿಯ ಅಧಿಕಾರಿಗಳು ತಮ್ಮ ಪೀಕಲಾಟವನ್ನು ಹೇಳಿಕೊಂಡಿದ್ದಾರೆ.

ಕಾರಿನಲ್ಲಿ ರೇಪ್‌ ಮಾಡಲು ಸಾಧ್ಯವೇ? ಅದಕ್ಕೆ ಅಲ್ಲಿ ಅಷ್ಟು ಜಾಗವಿದ್ಯಾ?: ಗುಜರಾತ್‌ ಪೊಲೀಸರ ವಿಚಿತ್ರ ಪತ್ರ!
Linkup
ವಡೋದರಾ: ''ಎಸ್‌ಯುವಿ ವಾಹನದ ಒಳಗೆ ಎಸಗಲು ಸಾಕಾಗುವಷ್ಟು ಜಾಗ ಇರಲು ಸಾಧ್ಯವೇ? ಈ ಬಗ್ಗೆ ಖಚಿತಪಡಿಸಿ,'' ಎನ್ನುವ ವಿಚಿತ್ರ ಕೋರಿಕೆಯ ಪತ್ರವೊಂದನ್ನು ವಡೋದರ ಸ್ಥಳೀಯ ಕ್ರೈಮ್‌ ಬ್ರಾಂಚ್‌ ಪೊಲೀಸರು ಕಚೇರಿಗೆ ಕಳಿಸಿದ್ದು, ಚರ್ಚೆಗೆ ಕಾರಣವಾಗಿದೆ. ಸ್ಥಳೀಯ ಪ್ರಭಾವಿ ಒಬ್ಬರ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಕ್ರೈಂ ಬ್ರಾಂಚ್‌ ಪೊಲೀಸರಿಗೆ ಅದಕ್ಕೆ ಪೂರಕವಾದ ದಾಖಲೆಗಳನ್ನು ಹೊಂದಿಸುವ ಸವಾಲು ಎದುರಾಗಿದೆ. ಏಪ್ರಿಲ್‌ 27ರ ರಾತ್ರಿ, ಕಳ್ಳಬಟ್ಟಿ ದಂಧೆಕೋರ ಭವೇಶ್‌ ಪಟೇಲ್‌ ತನ್ನ ಫಾರ್ಚುನರ್‌ ಕಾರಿನಲ್ಲಿ ಮಹಿಳೆಯೊಬ್ಬರನ್ನು ಬಂಧಿಸಿ ಅತ್ಯಾಚಾರ ಎಸಗಿದ್ದರು ಎನ್ನುವ ಆರೋಪ ಇದೆ. ಈ ಬಗ್ಗೆ ಸಂತ್ರಸ್ತೆ ಏ.30ರಂದು ಪೊಲೀಸರಿಗೆ ದೂರು ನೀಡಿದ್ದರು. ಮೇ 2ರಂದು ಆರೋಪಿಯನ್ನು ಜೈಪುರದಲ್ಲಿ ಬಂಧಿಸಲಾಗಿದೆ. ಈಗ ಆತನ ವಿರುದ್ಧ ಸಾಕ್ಷ್ಯಾಧಾರರ ಕಲೆ ಹಾಕುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಕೋರ್ಟ್‌ಗೆ ಸಾಧಾರಣ ಪುರಾವೆಗಳನ್ನು ಒದಗಿಸಿದರೆ, ಆರೋಪಿ ಪಾರಾಗಿ ಹೋಗಬಹುದು ಎನ್ನುವ ಭೀತಿಯಿಂದ ಪೊಲೀಸರು, ತೀವ್ರ ಕಸರತ್ತು ನಡೆಸಿದ್ದಾರೆ. ಮುಖ್ಯವಾಗಿ ಕಾರಿನ ತಾಂತ್ರಿಕ ವಿವರ ಮತ್ತು ಸ್ಥಳಾವಕಾಶ ಪರಿಶೀಲಿಸಿ 'ಫಿಟ್‌' ಮಾಡಲು ತಯಾರಿ ನಡೆಸಿದ್ದಾರೆ. ಎಸ್‌ಯುವಿಯಲ್ಲಿ ಚಾಲಕನ ಸೀಟನ್ನು ಅನ್‌ಲಾಕ್‌ ಮಾಡಿದರೆ ಹಾಸಿಗೆಯಂತೆ ಉದ್ದ ಚಾಚಿಕೊಳ್ಳುತ್ತದೆ. ಅದರಲ್ಲಿ ರೇಪ್‌ ಮಾಡಲು ಸಾಧ್ಯವಾಗುವಷ್ಟು ಸ್ಥಳಾವಕಾಶ ಲಭಿಸುತ್ತದಲ್ಲವೇ? ಜತೆಗೆ ಕಾರು ನಿಲ್ಲಿಸಿ ಹೇಯ ಕೃತ್ಯ ಎಸಗುವಾಗ ಮಹಿಳೆ ಬಾಗಿಲು ತೆಗೆದುಕೊಂಡು ಪರಾರಿಯಾಗದಂತೆ ತಡೆಯಲು ಸೆಂಟರ್‌ಲಾಕ್‌ ಬಳಸಲಾಗಿತ್ತು. ಅದು ಕೂಡ ಎಷ್ಟು ಭದ್ರ ಎನ್ನುವುದನ್ನು ಖಚಿತಪಡಿಸಿ ಎಂದು ಪೊಲೀಸರು ಆರ್‌ಟಿಒ ಅಧಿಕಾರಿಗಳನ್ನು ಕೇಳಿದ್ದಾರೆ. ಅಪರಾಧ ಕೃತ್ಯಕ್ಕೆ ಬಳಸಿದ ಎಸ್‌ಯುವಿಯನ್ನು ಪರಿಶೀಲಿಸುತ್ತಿರುವ ಆರ್‌ಟಿಒ ಅಧಿಕಾರಿಗಳು, ಸೀಟಿನ ಉದ್ದ, ಅಗಲ ಮತ್ತು ಗಟ್ಟಿತನವನ್ನು ದೃಢೀಕರಿಸಿದ್ದಾರೆ. ''ಇಂತದ್ದೊಂದು ಕೇಸ್‌ ಬಂದಿರುವುದು ಇದೇ ಮೊದಲು. ಸಾಮಾನ್ಯವಾಗಿ ವಾಹನದ ಫಿಟ್ನೆಸ್‌, ಬ್ರೇಕ್‌ ಸಿಸ್ಟಮ್‌, ರಿಜಿಸ್ಪ್ರೇಷನ್‌ ದಾಖಲಾತಿ, ಮಾಲೀಕರ ಮಾಹಿತಿ ಮತ್ತು ಚಾಲಕರ ಲೈಸೆನ್ಸ್‌ ಪರಿಶೀಲಿಸಿ ಮಾಹಿತಿ ಕೊಡುವ ಕೆಲಸವನ್ನಷ್ಟೇ ನಾವು ಇದುವರೆಗೆ ಮಾಡಿದ್ದೆವು. ಇದೇ ಮೊದಲ ಬಾರಿ, ಕಾರಿನಲ್ಲಿ ರೇಪ್‌ ಮಾಡುವಷ್ಟು ಜಾಗ ಇದೆಯೋ ಇಲ್ಲವೋ ಎನ್ನುವ ಕುರಿತು ದೃಢೀಕರಣ ಪತ್ರ ಕೊಡಬೇಕಾಗಿದೆ. ಇದು ನಮ್ಮ ಪಾಲಿಗೆ ಹೊಸ ಸವಾಲು,'' ಎಂದು ಆರ್‌ಟಿಒ ಕಚೇರಿಯ ಅಧಿಕಾರಿಗಳು ತಮ್ಮ ಪೀಕಲಾಟವನ್ನು ಹೇಳಿಕೊಂಡಿದ್ದಾರೆ.