ತಮಿಳುನಾಡಿನಲ್ಲಿ ಮುಂದುವರಿದ ಮಳೆ: ಏಳು ಜಿಲ್ಲೆಗಳಲ್ಲಿ ಸೋಮವಾರ ಶಾಲೆಗಳಿಗೆ ರಜೆ

ತಮಿಳುನಾಡಿನ ಅನೇಕ ಭಾಗಗಳಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಸೋಮವಾರ ಕೂಡ ಚೆನ್ನೈ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ವಿಪರೀಯ ಮಳೆ ಅಬ್ಬರಿಸಲಿದೆ ಎಂದು ಐಎಂಡಿ ತಿಳಿಸಿದೆ. ಒಟ್ಟು ಏಳು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ತಮಿಳುನಾಡಿನಲ್ಲಿ ಮುಂದುವರಿದ ಮಳೆ: ಏಳು ಜಿಲ್ಲೆಗಳಲ್ಲಿ ಸೋಮವಾರ ಶಾಲೆಗಳಿಗೆ ರಜೆ
Linkup
ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಪರಿಣಾಮ , ಕರ್ನಾಟಕ, ಆಂಧ್ರಪ್ರದೇಶ ಮತ್ತು ಪುದುಚೆರಿಗಳಲ್ಲಿ ಮಳೆಯ ಭೀತಿ ಮುಂದುವರಿದಿದೆ. ಸೋಮವಾರ ಭಾರಿಯಿಂದ ವಿಪರೀತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ನ. 29ರಂದು ಕೂಡ ಏಳು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಲಾಗಿದೆ. ಶುಕ್ರವಾರ ಮತ್ತು ಶನಿವಾರ 22 ಜಿಲ್ಲೆಗಳಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಚೆನ್ನೈ, ತಿರುನೆಲ್ವೇಲಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಸೋಮವಾರ ವಿಪರೀತ ಸುರಿಯಲಿದೆ. ರಾಮನಾಥಪುರಂ ಮತ್ತು ತೂತುಕುಡಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೂಚನೆ ನೀಡಿದೆ. ಭಾನುವಾರ ಅನೇಕ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಲಾಗಿತ್ತು. ಆದರೆ ನಿರೀಕ್ಷಿಸಿದಷ್ಟು ಮಳೆಯಾಗಿಲ್ಲ. ಚೆನ್ನೈನಲ್ಲಿ ಸಂಜೆ 5.30ರವರೆಗೆ 6.5 ಮಿಮೀ ವರೆಗೆ ಮಳೆಯಾಗಿದೆ. ಕನ್ಯಾಕುಮಾರಿಯಲ್ಲಿ 4 ಮಿಮೀ, ನಾಗಪಟ್ಟಿನಂನಲ್ಲಿ 17 ಮಿಮೀ, ತೂತುಕುಡಿಯಲ್ಲಿ 0.5 ಮಿಮೀ, ತಿರುಚೆಂಡೂರ್‌ನಲ್ಲಿ 11 ಮಿಮೀ ಹಾಗೂ ಕೊಡೈಕೆನಾಲ್‌ನಲ್ಲಿ 15 ಮಿಮೀ ಮಳೆಯಾಗಿದೆ. ಕುಡ್ಡಲೋರ್ ಮತ್ತು ಪುದುಚೆರಿಯಲ್ಲಿ ಕ್ರಮವಾಗಿ 7 ಸೆಂಮೀ ಮತ್ತು 6.6 ಸೆಂಮೀ ಮಳೆ ಸುರಿದಿದೆ. ಮತ್ತು ಕಾರೈಕಲ್‌ನಲ್ಲಿ ಸೋಮವಾರ ಮತ್ತು ಮಂಗಳವಾರ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ, ತಿರುವಳ್ಳೂರ್, ರಾಣಿಪೆಟ್ಟೈ, ವೆಲ್ಲೋರ್, ತಿರುವಣ್ಣಾಮಲೈ, ಕಲ್ಲುಕುರಿಚಿ, ಕುಡ್ಡಲೋರ್, ದಿಂಡಿಗಲ್, ಥೇಣಿ, ರಾಮನಾಥಪುರಂ, ತೂತುಕುಡಿ, ಕನ್ಯಾಕುಮಾರಿ, ತಿರುನೆಲ್ವೇಲಿ, ತೆಂಕಸಿ, ಕೊಯಮತ್ತೂರು ಮತ್ತು ತಿರುಪ್ಪೂರ್ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ ನೀಡಲಾಗಿದೆ. ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಗಣಪತಿ ನಗರ, ತಿರುಮುಲ್ಲವೈವೊಯಲ್ ಹಾಗೂ ಚೆನ್ನೈ ಸುತ್ತಮುತ್ತಲಿನ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ನಿರಂತರ ಮಳೆಯು ಚೆನ್ನೈನ 108 ಸ್ಥಳಗಳಲ್ಲಿ 392 ಬೀದಿಗಳನ್ನು ಮುಳುಗಿಸಿದೆ.