ಕೋವಿಡ್ 3ನೇ ಅಲೆ ವೇಳೆ ಮಕ್ಕಳೇ ಟಾರ್ಗೆಟ್ ಆಗುವ ಸಾಧ್ಯತೆ ಕಡಿಮೆ: ಏಮ್ಸ್‌ - ಡಬ್ಲ್ಯೂಎಚ್‌ಒ ಸರ್ವೆ

ಈಗಾಗಲೇ ರಾಜ್ಯದಲ್ಲೂ 3ನೇ ಅಲೆಗೆ ಸಿದ್ದತೆ ನಡೆದಿದ್ದು, ಮಕ್ಕಳಿಗೆ ಪೌಷ್ಠಿಕ ಆಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಉಚಿತವಾಗಿ ಹಾಲಿನ ಪುಡಿ ಹಂಚಿಕೆ ಮಾಡುತ್ತಿದೆ. ಮಕ್ಕಳಿಗಾಗಿಯೇ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಆರೋಗ್ಯ ಇಲಾಖೆ ಬಹುತೇಕ ಸಿದ್ದತೆ ಪೂರ್ಣಗೊಳಿಸಿದೆ.

ಕೋವಿಡ್ 3ನೇ ಅಲೆ ವೇಳೆ ಮಕ್ಕಳೇ ಟಾರ್ಗೆಟ್ ಆಗುವ ಸಾಧ್ಯತೆ ಕಡಿಮೆ: ಏಮ್ಸ್‌ - ಡಬ್ಲ್ಯೂಎಚ್‌ಒ ಸರ್ವೆ
Linkup
: ಕೊರೊನಾ ವೈರಸ್ ಬಗ್ಗೆ ಈಗಾಗಲೇ ದೇಶಾದ್ಯಂತ ಆತಂಕ ಮನೆ ಮಾಡಿದೆ. ಕೋವಿಡ್ ಮೊದಲ ಅಲೆಗಿಂತಲೂ 2ನೇ ಅಲೆ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿ ಮರಣ ಮೃದಂಗ ಬಾರಿಸಿದ ಹಿನ್ನೆಲೆಯಲ್ಲಿ, ಸಹಜವಾಗಿಯೇ 3ನೇ ಅಲೆ ಬಗ್ಗೆ ವೈದ್ಯಲೋಕ ಹಾಗೂ ಜನತೆ ಆತಂಕದಲ್ಲಿದೆ. ಆದ್ರೆ, ಈ ಆತಂಕವನ್ನು ದೂರ ಮಾಡುವ ಕೊಂಚ ಮಟ್ಟಿನ ಸಮಾಧಾನಕರ ಸುದ್ದಿ ಇದೀಗ ಹೊರಬಿದ್ದಿದೆ. ಮಕ್ಕಳಿಗೆ ಕಾಟ ಕೊಡಲ್ಲ 3ನೇ ಅಲೆ..! ಕೊರೊನಾ ವೈರಸ್ 3ನೇ ಅಲೆಯಲ್ಲಿ ಮಕ್ಕಳೇ ಟಾರ್ಗೆಟ್‌ ಎಂಬ ಭೀತಿ ಎಲ್ಲೆಡೆ ಹರಡಿತ್ತು. ವೈದ್ಯರಂಗ ಕೂಡಾ ಮಕ್ಕಳ ರಕ್ಷಣೆ ನಿಟ್ಟಿನಲ್ಲಿ ಈಗಾಗಲೇ ಸರ್ವ ಕ್ರಮ ಕೈಗೊಂಡು ಸಮರ ಸನ್ನದ್ಧವಾಗಿದೆ. ಆದ್ರೆ, ಕೋವಿಡ್ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರೋದು ಕಡಿಮೆ ಎನ್ನಲಾಗ್ತಿದೆ. ಈ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಏಮ್ಸ್‌ ನಡೆಸಿದ ಸರ್ವೆಯಲ್ಲಿ ಸಮಾಧಾನಕರ ಫಲಿತಾಂಶ ಹೊರಬಿದ್ದಿದೆ. 3ನೇ ಅಲೆ ವೇಳೆ ಮಕ್ಕಳೇ ಟಾರ್ಗೆಟ್ ಎಂಬ ವಾದವನ್ನು ಒಪ್ಪಲಾಗದು ಎಂದು ಸರ್ವೆ ಹೇಳಿದೆ. 3ನೇ ಅಲೆಯಲ್ಲಿ ಮಕ್ಕಳೇ ಟಾರ್ಗೆಟ್ ಆಗೋ ಸಾಧ್ಯತೆ ಕಡಿಮೆ ಎಂದು ಅಭಿಪ್ರಾಯಪಟ್ಟಿದೆ. ಈ ಹಿಂದೆ ಕೂಡಾ ದಿಲ್ಲಿ ಏಮ್ಸ್‌ ನಿರ್ದೇಶಕ ರಣದೀಪ್ ಗುಲೇರಿಯಾ ಅವರು, ಕೊರೊನಾ 3ನೇ ಅಲೆಯಲ್ಲಿ ಟಾರ್ಗೆಟ್ ಆಗುವ ಸಾಧ್ಯತೆ ಕಡಿಮೆ ಎಂದಿದ್ದರು. ಮಕ್ಕಳೇ ಸೋಂಕಿನ ಪ್ರಮುಖ ಟಾರ್ಗೆಟ್ ಆಗುತ್ತಾರೆ ಎಂಬ ಕುರಿತಾಗಿ ಯಾವುದೇ ಸಾಕ್ಷ್ಯ ಅಥವಾ ಸುಳಿವು ಸಿಕ್ಕಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು. ಹಾಗೆ ನೋಡಿದ್ರೆ, ಕೊರೊನಾ 2ನೇ ಅಲೆ ವೇಳೆ ಸಾಕಷ್ಟು ಮಕ್ಕಳು ಸೋಂಕಿತರಾಗಿ ಗುಣಮುಖರಾದ ಬಳಿಕವೂ ಹಲವು ಆರೋಗ್ಯ ಸಮಸ್ಯೆಗಳು ಎದುರಾಗಿದ್ದವು. ಡಯಾಬಿಟೀಸ್ ಟೈಪ್ 1 ಇದ್ದ ಮಕ್ಕಳಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿತ್ತು. ಬಹುತೇಕ ಮಕ್ಕಳು ಕವಾಸಕಿ ಸಿಂಡ್ರೋಮ್‌ಗೆ ಬಲಿಯಾಗಿದ್ದರು. ಅಪೌಷ್ಠಿಕ ಮಕ್ಕಳಲ್ಲಿ ಕವಾಸಕಿ ರೋಗ ಬಾಧಿಸಿತ್ತು. ಈಗಾಗಲೇ ರಾಜ್ಯದಲ್ಲೂ 3ನೇ ಅಲೆಗೆ ಸಿದ್ದತೆ ನಡೆದಿದ್ದು, ಮಕ್ಕಳಿಗೆ ಪೌಷ್ಠಿಕ ಆಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಉಚಿತವಾಗಿ ಹಾಲಿನ ಪುಡಿ ಹಂಚಿಕೆ ಮಾಡುತ್ತಿದೆ. ಮಕ್ಕಳಿಗಾಗಿಯೇ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಆರೋಗ್ಯ ಇಲಾಖೆ ಬಹುತೇಕ ಸಿದ್ದತೆ ಪೂರ್ಣಗೊಳಿಸಿದೆ. ಇನ್ನೊಂದೆಡೆ, ಮಕ್ಕಳಿಗೂ ಕೊರೊನಾ ವೈರಸ್ ನಿರೋಧಕ ಲಸಿಕೆ ಕೊಡಲು ರಾಜ್ಯದಲ್ಲೂ ಪ್ರಯೋಗಗಳು ನಡೆದಿವೆ. ಇವೆಲ್ಲದರ ನಡುವೆ ಹಾಗೂ ಏಮ್ಸ್‌ನ ಸರ್ವೆ ಒಂದು ಸಮಾಧಾನಕರ ಸುದ್ದಿ ನೀಡಿದ್ದು, ಪೋಷಕರು ಕೊಂಚ ಮಟ್ಟಿಗೆ ನಿಟ್ಟುಸಿರುಬಿಡಬಹುದಾಗಿದೆ.