ಕೋವಿಡ್‌ ಪೂರ್ವ ಸ್ಥಿತಿಗೆ ಶೇ.8-10 ಜಿಡಿಪಿ ಅಗತ್ಯ - ತಜ್ಞರ ಅಂದಾಜು

ಭಾರತದ ಆರ್ಥಿಕತೆಯು ಕೊರೊನಾ ಪೂರ್ವ ಮಟ್ಟಕ್ಕೆ ತಲುಪಲು ವಾರ್ಷಿಕ ಶೇ. 8 - 10ರ ಜಿಡಿಪಿ ಬೆಳವಣಿಗೆ ಅಗತ್ಯ ಎಂದು ತಜ್ಞರು ಹೇಳಿದ್ದಾರೆ. ದೇಶ ಕೋವಿಡ್‌ ಪೂರ್ವ ಆರ್ಥಿಕ ಪ್ರಗತಿಯ ಮಟ್ಟವನ್ನು ಎಂದು ಮುಟ್ಟಲಿದೆ ಎಂಬ ಪ್ರಶ್ನೆ ಕಾಡುತ್ತಿದೆ.

ಕೋವಿಡ್‌ ಪೂರ್ವ ಸ್ಥಿತಿಗೆ ಶೇ.8-10 ಜಿಡಿಪಿ ಅಗತ್ಯ - ತಜ್ಞರ ಅಂದಾಜು
Linkup
ಹೊಸದಿಲ್ಲಿ: ಭಾರತದ ಆರ್ಥಿಕತೆಯು ಕೋವಿಡ್‌-19 ಪೂರ್ವ ಮಟ್ಟಕ್ಕೆ ತಲುಪಲು ವಾರ್ಷಿಕ ಶೇಕಡಾ 8 - 10ರ ಜಿಡಿಪಿ ಬೆಳವಣಿಗೆ ಅಗತ್ಯ ಎಂದು ತಜ್ಞರು ಹೇಳಿದ್ದಾರೆ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ 2021-22ರಲ್ಲಿ ಶೇ. 9.5ರ ಜಿಡಿಪಿ ಪ್ರಗತಿಯನ್ನು ಅಂದಾಜಿಸಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್‌ ಭಾರತದ ಜಿಡಿಪಿಯನ್ನು ಈ ಹಿಂದಿನ ಶೇ.12.5ರಿಂದ ಶೇ.9.5ಕ್ಕೆ ಕಡಿತಗೊಳಿಸಿದೆ. ಈ ಹಂತದಲ್ಲಿ ಆರ್ಥಿಕತೆಯು ಕೋವಿಡ್‌ ಪೂರ್ವ ಮಟ್ಟಕ್ಕೆ ತಲುಪಲಿದೆ. ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್‌ ಅವರು, ಪ್ರಸಕ್ತ ಸಾಲಿನಲ್ಲಿ ಶೇ.10.5ರ ಬೆಳವಣಿಗೆ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಹೀಗಿದ್ದರೂ, ಭಾರತ ಕೋವಿಡ್‌ ಪೂರ್ವ ಆರ್ಥಿಕ ಪ್ರಗತಿಯ ಮಟ್ಟವನ್ನು ಎಂದು ಮುಟ್ಟಲಿದೆ ಎಂಬ ಪ್ರಶ್ನೆ ಇದೆ. ಕೆಲವು ಕ್ಷೇತ್ರಗಳು ಈಗಲೇ ಕೋವಿಡ್‌ ಪೂರ್ವ ಮಟ್ಟಕ್ಕೆ ಚೇತರಿಸಿವೆ. ಹೀಗಿದ್ದರೂ ಒಟ್ಟಾರೆಯಾಗಿ ಚೇತರಿಕೆ ಯಾವಾಗ ಎಂಬುದು ಮುಖ್ಯ ಎನ್ನುತ್ತಾರೆ ಎಸ್‌ಬಿಐನ ಮುಖ್ಯ ಆರ್ಥಿಕ ತಜ್ಞರಾದ ಸೌಮ್ಯ ಕಾಂತಿ ಘೋಷ್‌.