ಕೊರೊನಾರ್ಭಟ: ಇಡೀ ದೇಶದಲ್ಲೇ ಕರ್ನಾಟಕ ನಂಬರ್ 1: ಸಕ್ರಿಯ ಪ್ರಕರಣ ನಮ್ಮಲ್ಲೇ ಹೆಚ್ಚು..!

ಕೊರೊನಾ ಸೋಂಕಿತರು ಹಾಗೂ ವೈರಸ್‌ಗೆ ಬಲಿಯಾದವರು ಸಾರ್ವಜನಿಕವಾಗಿ ಕೇವಲ ಅಂಕಿಅಂಶಗಳು ಮಾತ್ರ. ಆದರೆ ಅವರ ಕುಟುಂಬಕ್ಕೆ ತುಂಬಲಾರದ ನಷ್ಟಗಳು. ಕೊರೊನಾ ಸೋಂಕಿಗೆ ತುತ್ತಾಗಿ ಪಡುವ ಹಿಂಸೆ ಕೂಡಾ ವೈಯಕ್ತಿಕವಾದದ್ದೇ.

ಕೊರೊನಾರ್ಭಟ: ಇಡೀ ದೇಶದಲ್ಲೇ ಕರ್ನಾಟಕ ನಂಬರ್ 1: ಸಕ್ರಿಯ ಪ್ರಕರಣ ನಮ್ಮಲ್ಲೇ ಹೆಚ್ಚು..!
Linkup
: ವಿಚಾರವಾಗಿ ಭಾರತದ ಎಲ್ಲಾ ರಾಜ್ಯಗಳನ್ನೂ ಮೀರಿಸಿ ಕರುನಾಡು ಸಾಧನೆ ಮೆರೆದಿದೆ..! ಸಕ್ರಿಯ ಪ್ರಕರಣಗಳ ಲೆಕ್ಕಾಚಾರದಲ್ಲಿ ನಂಬರ್‌ 1 ಸ್ಥಾನದಲ್ಲಿ ನಿಂತಿದೆ. ಕರ್ನಾಟಕದಲ್ಲಿ ಇದೀಗ 5,71,006 ಕೊರೊನಾ ವೈರಸ್ ಸೋಂಕಿತರು ಇದ್ದಾರೆ. ದೇಶದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಸೋಂಕಿತರು ಯಾವ ರಾಜ್ಯದಲ್ಲೂ ಇಲ್ಲ. 2ನೇ ಸ್ಥಾನದಲ್ಲಿ ಇರುವ ಮಹಾರಾಷ್ಟ್ರದಲ್ಲಿ ಕರ್ನಾಟಕಕ್ಕಿಂತಾ ಕೊಂಚ ಕಡಿಮೆ ಸೋಂಕಿತರು ಇದ್ದಾರೆ. ಮಹಾರಾಷ್ಟ್ರವು ಸದ್ಯ ಒಟ್ಟು 5,56,896 ಸಕ್ರಿಯ ಪ್ರಕರಣಗಳನ್ನು ಹೊಂದಿದೆ. ಮೂರನೇ ಸ್ಥಾನದಲ್ಲಿ ಕೇರಳ ಇದೆ. ಕೇರಳದಲ್ಲಿ 4,19,725 ಸಕ್ರಿಯ ಪ್ರಕರಣಗಳಿವೆ. ಇನ್ನುಳಿದಂತೆ ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ತಲಾ 2 ಲಕ್ಷಕ್ಕೂ ಹೆಚ್ಚು ಪ್ರಕರಣಗಳಿವೆ. ಆಂಧ್ರ ಪ್ರದೇಶ, ತಮಿಳುನಾಡು, ಗುಜರಾತ್, ಪಶ್ಚಿಮ ಬಂಗಾಳ, ಛತ್ತೀಸ್‌ಗಡ, ಹರಿಯಾಣ ಹಾಗೂ ಮಧ್ಯಪ್ರದೇಶ ರಾಜ್ಯಗಳು ತಲಾ 1 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿವೆ. ಹಾಗೆ ನೋಡಿದ್ರೆ ಕೊರೊನಾರ್ಭಟದಿಂದ ತತ್ತರಿಸಿದ್ದ ದಿಲ್ಲಿಯಲ್ಲಿ ಇದೀಗ ಸೋಂಕು ನಿಯಂತ್ರಣದಲ್ಲಿದ್ದು, ಆ ರಾಜ್ಯವು ಟಾಪ್ 10 ಪಟ್ಟಿಯಲ್ಲಿ ಇಲ್ಲ. ಒಟ್ಟಾರೆ ಮಹಾರಾಷ್ಟ್ರವೇ ಮುಂದು..!: ಕರ್ನಾಟಕ ರಾಜ್ಯವು ಸಕ್ರಿಯ ಪ್ರಕರಣಗಳ ಪೈಕಿ ಮುಂದಿದ್ದರೂ ಕೂಡಾ ಒಟ್ಟಾರೆ ಪ್ರಕರಣಗಳ ಪೈಕಿ ಮಹಾರಾಷ್ಟ್ರವೇ ನಂಬರ್ ಒನ್ ಸ್ಥಾನ ಕಾಯ್ದುಕೊಂಡಿದೆ. ಮಹಾರಾಷ್ಟ್ರದಲ್ಲಿ ಈವರೆಗೆ ಒಟ್ಟು 51,38,814 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ ಈವರೆಗೆ ದಾಖಲಾಗಿರುವ ಪ್ರಕರಣಗಳು 19,73,683. ಮೊದಲ ಸ್ಥಾನಕ್ಕೂ, 2ನೇ ಸ್ಥಾನಕ್ಕೂ ಭಾರೀ ಅಂತರ ಇರೋದು ನಿಚ್ಳವಾಗಿ ಕಂಡು ಬರುತ್ತದೆ. ಇನ್ನು 3ನೇ ಸ್ಥಾನದಲ್ಲಿ ಇರುವ ಕೇರಳದಲ್ಲಿ 19,30,116 ಪ್ರಕರಣಗಳು ಈವರೆಗೆ ದೃಢಪಟ್ಟಿವೆ. ನಂತರದ ಸ್ಥಾನಗಳಲ್ಲಿ ಉತ್ತರ ಪ್ರದೇಶ, ತಮಿಳುನಾಡು, ದಿಲ್ಲಿ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳಿವೆ. ಇನ್ನು ಕೊರೊನಾಗೆ ಬಲಿಯಾದವರ ಪೈಕಿ ಮಹಾರಾಷ್ಟ್ರಕ್ಕೇ ಅಗ್ರಸ್ಥಾನ. ಈವರೆಗೆ ಮಹಾರಾಷ್ಟ್ರದಲ್ಲಿ 75 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ದಿಲ್ಲಿಯಲ್ಲಿ 19 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಕರ್ನಾಟಕ 3ನೇ ಸ್ಥಾನದಲ್ಲಿದ್ದು, ನಮ್ಮಲ್ಲಿ ಕೊರೊನಾಗೆ 18,776 ಮಂದಿ ಜೀವ ಬಿಟ್ಟಿದ್ದಾರೆ. ನಂತರದ ಸ್ಥಾನಗಳಲ್ಲಿ ತಮಿಳುನಾಡು, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿವೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ, ಕೊರೊನಾ ಸೋಂಕಿತರು ಹಾಗೂ ವೈರಸ್‌ಗೆ ಬಲಿಯಾದವರು ಸಾರ್ವಜನಿಕವಾಗಿ ಕೇವಲ ಅಂಕಿಅಂಶಗಳು ಮಾತ್ರ. ಆದರೆ ಅವರ ಕುಟುಂಬಕ್ಕೆ ತುಂಬಲಾರದ ನಷ್ಟಗಳು. ಕೊರೊನಾ ಸೋಂಕಿಗೆ ತುತ್ತಾಗಿ ಪಡುವ ಹಿಂಸೆ ಕೂಡಾ ವೈಯಕ್ತಿಕವಾದದ್ದೇ. ಹೀಗಾಗಿ, ಸೋಂಕಿನ ವಿರುದ್ಧ ರಕ್ಷಣೆ ಪಡೆಯಲು ಲಸಿಕೆ ಪಡೆಯಬೇಕಿದೆ. ಮಾಸ್ಕ್, ಸಾಮಾಜಿಕ ಅಂತರ ಹಾಗೂ ಕೈತೊಳೆಯುವಿಕೆಯನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.