ಒಂದು ವೇಳೆ ನಾನು ಸತ್ತರೆ... ಆಸ್ತಿಯನ್ನು ಇಬ್ಬರು ತಂಗಿಯರಿಗೆ ಹಂಚಿ ಎಂದಿದ್ದ ನಟಿ ಪಾರುಲ್ ಯಾದವ್

ನಟಿ ಪಾರುಲ್ ಯಾದವ್ ಅವರು ತಾನು ಒಂದು ವೇಳೆ ಸತ್ತರೆ ತನ್ನ ಆಸ್ತಿಯನ್ನು ಇಬ್ಬರು ತಂಗಿಯಂದಿರಿಗೆ ಹಂಚಿ ಎಂದು ಆತ್ಮೀಯರಿಗೆ ಇಮೇಲ್ ಕಳಿಸಿ ಹೇಳಿದ್ದರಂತೆ. ಯಾಕೆ ಪಾರುಲ್ ಈ ಮಾತನ್ನು ಹೇಳಿದ್ದರು? ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಒಂದು ವೇಳೆ ನಾನು ಸತ್ತರೆ... ಆಸ್ತಿಯನ್ನು ಇಬ್ಬರು ತಂಗಿಯರಿಗೆ ಹಂಚಿ ಎಂದಿದ್ದ ನಟಿ ಪಾರುಲ್ ಯಾದವ್
Linkup
"ನಾನು ಒಂದು ವೇಳೆ ಸತ್ತರೆ ನನ್ನ ಆಸ್ತಿ ಇಬ್ಬರು ತಂಗಿಯರಿಗೆ ಹಂಚಿಕೆ ಆಗಬೇಕು" ಎಂದು ನಟಿ ಅವರು ಆತ್ಮೀಯರಿಗೆ ಇಮೇಲ್ ಕಳಿಸಿದ್ದರಂತೆ. ಹೌದು, ಖ್ಯಾತ ನಟಿ ಪಾರುಲ್ ಯಾದವ್ ಈ ಒಂದು ಯೋಚನೆ ಮಾಡಿದ್ದೆ ಎಂದು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಭೀಕರವಾಗಿದ್ದ ಕೊರೊನಾ ಎರಡನೇ ಅಲೆ ಕೊರೊನಾ ಎರಡನೇ ಅಲೆ ಎಷ್ಟು ಭೀಕರವಾಗಿತ್ತು ಎಂದು ಎಲ್ಲರಿಗೂ ಗೊತ್ತಿದೆ. ಸಿಕ್ಕಾಪಟ್ಟೆ ಸಾವು-ನೋವು ಕೇಳಿ ನೋಡಿ ದೇಶದಲ್ಲಿ ಎಲ್ಲೆಡೆ ನೆಗೆಟಿವಿಟಿ ತುಂಬಿತ್ತು. ಆರಾಮಾಗಿ ಓಡಾಡಿಕೊಂಡಿದ್ದ ವೃದ್ಧರು, ಯುವ ಜನರು ಕೂಡ ಕೊರೊನಾಗೆ ಬಲಿಯಾಗಿದ್ದರು. ಎಷ್ಟೋ ಕುಟುಂಬಗಳು ಅವರ ಮನೆಯ ಪ್ರೀತಿಪಾತ್ರರಾದ ಸದಸ್ಯರನ್ನು ಕಳೆದುಕೊಂಡಿವೆ. ಚಿತ್ರರಂಗದಲ್ಲಿನ ಸಾಕಷ್ಟು ಕಲಾವಿದರು, ತಂತ್ರಜ್ಞರು ಅಸು ನೀಗಿದ್ದಾರೆ. ಇನ್ನು ಎಷ್ಟೋ ನಟ-ನಟಿಯರು ಕೊರೊನಾದಿಂದ ಬಚಾವ್ ಆಗಿ, ನಾವು ದೃಢ ಮನಸ್ಸಿನಿಂದ ಕೊರೊನಾವನ್ನು ಹಿಮ್ಮೆಟ್ಟಿಸಬಹುದು ಎಂದು ಸಂದೇಶ ನೀಡಿದ್ದರು. ನಟಿ ಪಾರುಲ್ ಯಾದವ್ ಕುಟುಂಬ ಕೂಡ ಕೊರೊನಾದಿಂದ ಸಾಕಷ್ಟು ಕಷ್ಟಪಟ್ಟಿದೆ. ಏಳು ಜನರಿಗೆ ಕೊರೊನಾ ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ಪಾರುಲ್ ಯಾದವ್ "ಮೊದಲ ಲಾಕ್‌ಡೌನ್‌ನಲ್ಲಿ ನನಗೆ ಅಷ್ಟೇನೂ ಬೇಜಾರಾಗಿರಲಿಲ್ಲ. ಆದಷ್ಟು ಬೇಗ ಕಷ್ಟದ ಸ್ಥಿತಿಯಿಂದ ಹೊರಗೆ ಬರಲಿದ್ದೇವೆ ಎಂಬ ಆಶಾಭಾವನೆಯಿತ್ತು. ಕೊರೊನಾ ಎರಡನೇ ಅಲೆ ಬಂದಾಗ ಆತ್ಮೀಯರು, ಸ್ನೇಹಿತರು ಸೇರಿದಂತೆ ಸಾಕಷ್ಟು ಜನರು ಸಾಯಲು ಆರಂಭಿಸಿದರು. ಇದನ್ನೆಲ್ಲ ನೋಡಿ ನಾನು ಡಿಪ್ರೆಶನ್ ಹಂತ ತಲುಪಿದ್ದೆ. ಕಳೆದ ಏಪ್ರಿಲ್ 22ಕ್ಕೆ ನನಗೆ ಕೊರೊನಾ ಬಂತು. ಸೋಂಕಿಗೆ ತುತ್ತಾದವರೊಬ್ಬರು ಮನೆಗೆ ಬಂದಿದ್ದರು, ಆಮೇಲೆ ನನಗೆ ಅದರಿಂದಲೇ ಕೊರೊನಾ ಬಂದಿದ್ದು ಗೊತ್ತಾಯ್ತು. ನನ್ನ ಕುಟುಂಬದ 7 ಜನರಿಗೆ ಕೊರೊನಾ ಬಂತು. ಎರಡು ಬಾರಿ ಕ್ಯಾನ್ಸರ್‌ಗೆ ತುತ್ತಾಗಿ ಬದುಕಿದ್ದ ನನ್ನ ತಾಯಿ ಅಡುಗೆ ಮಾಡುತ್ತಿದ್ದರು. ನಾನು ಮೂರನೇ ಫ್ಲೋರ್‌ನಲ್ಲಿ ಇದ್ದುದರಿಂದ ನನಗೆ ಯಾರಾದರೂ ಅಡುಗೆ ಕಳಿಸುತ್ತಿದ್ದರು" ಎಂದು ಹೇಳಿಕೊಂಡಿದ್ದಾರೆ. ಸಾಯ್ತೀನಿ ಅಂತ ಅಂದುಕೊಂಡಿದ್ದೆ: ಪಾರುಲ್ ಯಾದವ್ "ನನಗೆ ಕೊರೊನಾ ಸೋಂಕಿನ ಎಲ್ಲ ಲಕ್ಷಣಗಳು ಇದ್ದವು. 12 ದಿನಗಳ ಕಾಲ 103 ಡಿಗ್ರಿ ಜ್ವರ ಇತ್ತು. ವೈದ್ಯರಿಗೆ ಫೋನ್ ಮಾಡಿ ನಾನು ಇದರಿಂದ ಹೊರಗೆ ಬರುವೆ ಎಂಬ ನಂಬಿಕೆಯಿಲ್ಲ ಅಂತ ಹೇಳಿದ್ದೆ. ಹೀಗಾಗಿ ನಾನು ಸತ್ತರೆ ನನ್ನ ಆಸ್ತಿ ಇಬ್ಬರು ತಂಗಿಯಂದಿರಿಗೆ ಸರಿಯಾಗಿ ಹಂಚಿಕೆ ಆಗಬೇಕು ಎಂದು ನನ್ನ ಆತ್ಮೀಯರಿಗೆ ಇಮೇಲ್ ಕಳಿಸಿದ್ದೆ. ಅದನ್ನು ಈಗ ನೆನಪಿಸಿಕೊಂಡರೆ ನಗು ಬರತ್ತೆ" ಎಂದು ಪಾರುಲ್ ಹೇಳಿದ್ದಾರೆ. ಜಿಮ್‌ಗೆ ಹೋಗುತ್ತ, ಆರೋಗ್ಯಕರ ಆಹಾರ ಸೇವಿಸುವ ಪಾರುಲ್‌ಗೆ ಕೊರೊನಾ ಸೋಂಕು ತಗುಲಿತ್ತು. ಕೊರೊನಾದಿಂದ ಬಚಾವ್ ಆದಮೇಲೆ ಪಾರುಲ್‌ರ ಯೋಚನಾ ಲಹರಿ ಬದಲಾಗಿದೆಯಂತೆ. ಸಿಂಗಲ್ ಆಗಿರುವ ಪಾರುಲ್ ಅವರ ಸುತ್ತಲಿರುವ ಜನರನ್ನು ನೋಡಿ ಖುಷಿಪಡುತ್ತಿದ್ದಾರಂತೆ. ಮನೆಯಲ್ಲಿ ಕುಟುಂಬದ ಜೊತೆ ಕೂತು ಟಿವಿ ನೋಡುವುದು ನನ್ನ ಪಾಲಿಗೆ ವೈಭೋಗಯುತ ಜೀವನ ಎಂದು ಪಾರುಲ್ ಹೇಳಿದ್ದಾರೆ.