'ನಮ್ಮ ಕುಟುಂಬಕ್ಕೆ ಸ್ವರ್ಗದ ಬಾಗಿಲು ತೆರೆದ ಯುವರಾಜ ನನ್ನ ಮಗ'- ನಟಿ ಮೇಘನಾ ರಾಜ್ ಸರ್ಜಾ

ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ದಂಪತಿಯ ಪ್ರೀತಿಯ ಮಗನಿಗೆ ರಾಯನ್ ರಾಜ್ ಸರ್ಜಾ ಅಂತ ಹೆಸರು ಇಟ್ಟಿದ್ದಾರೆ. ನಾಮಕರಣ ಶಾಸ್ತ್ರದ ಬಳಿಕ ಮೇಘನಾ ರಾಜ್ ಸರ್ಜಾ, ಧ್ರುವ ಸರ್ಜಾ, ಸುಂದರ್ ರಾಜ್ ಮಾಧ್ಯಮಗಳ ಎದುರು ಮಾತನಾಡಿದ್ದಾರೆ.

'ನಮ್ಮ ಕುಟುಂಬಕ್ಕೆ ಸ್ವರ್ಗದ ಬಾಗಿಲು ತೆರೆದ ಯುವರಾಜ ನನ್ನ ಮಗ'- ನಟಿ ಮೇಘನಾ ರಾಜ್ ಸರ್ಜಾ
Linkup
ಚಿರಂಜೀವಿ ಸರ್ಜಾ ಮತ್ತು ದಂಪತಿಯ ಮುದ್ದು ಮಗನಿಗೆ ಇಂದು (ಸೆ.3) ನಾಮಕರಣ ಮಾಡಲಾಗಿದೆ. ಮಗನಿಗೆ 'ರಾಯನ್ ರಾಜ್ ಸರ್ಜಾ' ಎಂದು ನಾಮಕರಣ ಮಾಡಿದ್ದಾರೆ. ನಾಮಕರಣ ಶಾಸ್ತ್ರ ಮುಗಿದ ಮೇಲೆ ಮಾಧ್ಯಮಗಳ ಎದುರು ಸರ್ಜಾ ಮತ್ತು ಸುಂದರ್ ರಾಜ್ ಕುಟುಂಬದವರು ಮಾತನಾಡಿದ್ದಾರೆ. ಈ ವೇಳೆ ಪ್ರತಿಕ್ರಿಯೆ ನೀಡಿದ ನಟಿ ಮೇಘನಾ ರಾಜ್, 'ಚಿರು ನಮ್ಮೆಲ್ಲರಿಗೂ 'ರಾಜ'. ಅವನಿಗೆ ಹುಟ್ಟಿರುವ ಇವನು ಯುವರಾಜ. ಸ್ವರ್ಗದ ಬಾಗಿಲನ್ನು ತೆರೆದುಕೊಟ್ಟ ಯುವರಾಜ ನನ್ನ ಮಗ. ಹಾಗಾಗಿ, ಈ ಯುವರಾಜನಿಗೆ 'ರಾಯನ್ ರಾಜ್ ಸರ್ಜಾ' ಹೆಸರಿಡಲು ಇಷ್ಟಪಟ್ಟೆ. ಅದಕ್ಕೆ ಎಲ್ಲರೂ ಒಪ್ಪಿಕೊಂಡರು, ಎಲ್ಲರೂ ಇಷ್ಟಪಟ್ಟರು' ಎಂದು ತಿಳಿಸಿದ್ದಾರೆ. 'ರಾಯನ್‌' ಅನ್ನೋ ಹೆಸರು ನಂಗಿಷ್ಟವಾಗಿತ್ತು'ಮಗ ಹುಟ್ಟಿದಾಗಿನಿಂದಲೂ ಎಲ್ಲರೂ ಕೇಳುತ್ತಿದ್ದ ಪ್ರಶ್ನೆ, 'ನಾಮಕರಣ ಯಾವಾಗ? ಹೆಸರೇನು' ಅಂತ. ಆದರೆ ನಂಗೂ ಆಗ ಗೊತ್ತಿರಲಿಲ್ಲ, ಏನು ಹೆಸರಿಡಬೇಕು. ಹೆರಿಗೆ ಬೇಗ ಆಗೋಯ್ತು, ಆದರೆ 11 ತಿಂಗಳಾದ್ರು ಹೆಸರು ಇಡೋಕೆ ಆಗ್ತಿಲ್ಲ ನೋಡು ಅಂತ ಅಮ್ಮನ ಹತ್ರ ತಮಾಷೆ ಮಾಡ್ತಾ ಇದ್ದೆ. ಈಗ ಎಲ್ಲರೂ ಸೇರಿ ಒಂದು ಹೆಸರು ಇಟ್ಟಿದ್ದೇವೆ. 'ರಾಯನ್‌' ಅನ್ನೋ ಹೆಸರು ಮೊದಲಿನಿಂದಲೂ ನನ್ನ ಮನಸ್ಸಿನಲ್ಲಿ ಇತ್ತು' ಎಂದು ಮೇಘನಾ ತಿಳಿಸಿದ್ದಾರೆ. ರಾಯನ್ ಅಂದರೆ ಸಂಸ್ಕೃತದಲ್ಲಿ ಯುವರಾಜ ಅಂತ ಅರ್ಥ'ನಮ್ಮ ಅಣ್ಣನ ಮಗನಿಗೆ ರಾಯನ್ ರಾಜ್ ಸರ್ಜಾ ಅಂತ ಹೆಸರಿಟ್ಟಿದ್ದೇವೆ. ರಾಜ್-ಸರ್ಜಾ ಅಂದಾಗಲೇ ಗೊತ್ತಾಗುತ್ತದೆ, ಎರಡು ಕುಟುಂಬಗಳೂ ಸದಾ ಒಂದಾಗಿರುತ್ತವೆ ಅಂತ. ಈ ಯೂಟ್ಯೂಬ್‌ನಲ್ಲಿ ಏನೇನೋ ನೆಗೆಟಿವ್ ವಿಚಾರಗಳನ್ನು ಹಾಕಿದ್ದಾರೆ. ಆ ರೀತಿ ನೆಗೆಟಿವ್ ಮಾಡೋದಕ್ಕೆ ಹೋಗಬೇಡಿ. ನಮ್ಮ ನಡುವೆ ಯಾವುದೇ ಹೊಂದಾಣಿಕೆ ಕೊರತೆ ಇಲ್ಲ. ಈ ಸಂದರ್ಭದಲ್ಲಿ ನಮ್ಮ ಅಂಕಲ್, ಅಣ್ಣನನ್ನು ನೆನಪು ಮಾಡಿಕೊಳ್ಳುತ್ತೇನೆ. ರಾಯನ್‌ಗೆ ನಾವೆಲ್ಲರೂ ಸಪೋರ್ಟ್‌ ಆಗಿದ್ದೇವೆ. ರಾಯನ್ ರಾಜ್ ಸರ್ಜಾ ಎಂದರೆ, ಸಂಸ್ಕೃತದಲ್ಲಿ ಯುವರಾಜ ಅಂತ ಅರ್ಥ' ಎಂದು ಧ್ರುವ ಸರ್ಜಾ ತಿಳಿಸಿದ್ದಾರೆ. ಎರಡು ಕುಟುಂಬದ ಕೊಂಡಿಯಂತೆ ರಾಯನ್ ಇರ್ತಾನೆ'ಚಿರು ಹೋದಮೇಲಿಂದ ನಮ್ಮ ಕುಟುಂಬಕ್ಕೆ ತುಂಬ ನೆರವಾದವರು ಅವನ ಸ್ನೇಹಿತರು. ಪನ್ನಗ ಭರಣ ಮತ್ತು ತಂಡ ನಮಗೆ ತುಂಬ ಸಪೋರ್ಟ್ ಮಾಡಿದ್ದಾರೆ. ಚಿರು ಹೋದಮೇಲೆ ಚಿತ್ರರಂಗ ಕೂಡ ನಮಗೆ ಸಪೋರ್ಟ್ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಏನೇನೋ ನ್ಯೂಸ್ ಹಾಕುತ್ತಾರೆ. ಆ ಥರ ಏನಿಲ್ಲ. ಪಾಸಿಟಿವಿಟಿ ಹಂಚೋಣ. ಧ್ರುವ ಸರ್ಜಾ ಮತ್ತು ಅರ್ಜುನ್ ಸರ್ಜಾ ಅವರು ನಮ್ಮ ಮೊಮ್ಮಗನಿಗೆ ಎರಡು ಕಣ್ಣುಗಳಂತೆ ಇದ್ದಾರೆ. ಒಂದು ಕಡೆ ಕಳೆದುಕೊಂಡ ಮೇಲೆ ಮತ್ತೊಂದು ಕಡೆ ನೆಮ್ಮದಿಯನ್ನು ದೇವರು ನೀಡುತ್ತಾನೆ. ಚಿರು ಮರುಜನ್ಮವಾಗಿ ರಾಯನ್ ರೂಪದಲ್ಲಿ ಬಂದಿದ್ದಾನೆ. ಎರಡು ಕುಟುಂಬಗಳಿಗೆ ಕೊಂಡಿಯಂತೆ ರಾಯನ್ ಇದ್ದಾನೆ' ಎಂದು ಸುಂದರ್ ರಾಜ್ ಹೇಳಿದ್ದಾರೆ.