ಐದನೇ ಬಾರಿಗೆ ತೆರೆಮೇಲೆ ಒಟ್ಟಿಗೆ ನಟಿಸಲು ಸಜ್ಜಾದ ಸಮಂತಾ- ಅಕ್ಕಿನೇನಿ ನಾಗ ಚೈತನ್ಯ!

ತಾರಾ ದಂಪತಿ ನಾಗ ಚೈತನ್ಯ ಮತ್ತು ಸಮಂತಾ ಅಕ್ಕಿನೇನಿ ಮೊದಲು ಒಟ್ಟಿಗೆ ಬಣ್ಣ ಹಚ್ಚಿದ್ದು 2010ರಲ್ಲಿ ತೆರೆಕಂಡಿದ್ದ 'ಯೇ ಮಾಯಾ ಚೇಸಾವೆ' ಸಿನಿಮಾದ ಮೂಲಕ. ಆನಂತರ ಒಟ್ಟು 4 ಬಾರಿ ತೆರೆಹಂಚಿಕೊಂಡಿದ್ದಾರೆ. ಈಗ ಐದನೇ ಬಾರಿಗೆ ಜೊತೆಯಾಗಲು ರೆಡಿ ಆಗಿದ್ದಾರೆ.

ಐದನೇ ಬಾರಿಗೆ ತೆರೆಮೇಲೆ ಒಟ್ಟಿಗೆ ನಟಿಸಲು ಸಜ್ಜಾದ ಸಮಂತಾ- ಅಕ್ಕಿನೇನಿ ನಾಗ ಚೈತನ್ಯ!
Linkup
ತೆಲುಗಿನ ಕ್ಯೂಟ್ ಕಪಲ್ ಎಂದೇ ಗುರುತಿಸಿಕೊಂಡಿರುವವರು ಅಕ್ಕಿನೇನಿ ಮತ್ತು . ಹಲವು ವರ್ಷಗಳ ಕಾಲ ಪ್ರೀತಿಸಿ, ಆನಂತರ ಮದುವೆಯಾಗಿದ್ದರು ಸಮಂತಾ ಮತ್ತು ಚೈತನ್ಯ. ಮದುವೆ ಆಗುವುದಕ್ಕೂ ಮುನ್ನ 3 ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದ ಇವರಿಬ್ಬರು, ಮದುವೆಯ ನಂತರವೂ ಒಂದು ಸಿನಿಮಾವನ್ನು ಜೊತೆಯಾಗಿ ಮಾಡಿದ್ದರು. ಈಗ ಮತ್ತೊಂದು ಸಿನಿಮಾದಲ್ಲೂ ಒಟ್ಟಿಗೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಐದನೇ ಬಾರಿಗೆ ಸಮಂತಾ-ಚೈತನ್ಯ ಜೋಡಿ ಅಕ್ಕಿನೇನಿ ನಾಗ ಚೈತನ್ಯ ಮತ್ತು ಸಮಂತಾ ಅವರನ್ನು ಮತ್ತೊಮ್ಮೆ ಜೋಡಿಯಾಗಿಸುವುದಕ್ಕೆ ಈ ಬಾರಿ ಸಜ್ಜಾಗಿರುವುದು ನಿರ್ದೇಶಕ ಕಲ್ಯಾಣ್ ಕೃಷ್ಣ. ಈ ಹಿಂದೆ ಜೊತೆಗೆ 'ಸೊಗ್ಗಾಡೆ ಚಿನ್ನಿ ನಾಯನಾ' ಎಂಬ ಹಿಟ್ ಸಿನಿಮಾ ಮಾಡಿದ್ದ ಕಲ್ಯಾಣ್ ಕೃಷ್ಣ, ಆನಂತರ ಚೈತನ್ಯ ಜೊತೆಗೆ 'ರಾರಾಂಡೋಯ್ ವೆದುಕ ಚೂದ್ದಂ' ಸಿನಿಮಾ ಮಾಡಿದ್ದರು. ಅದು ಕೂಡ ಹಿಟ್ ಆಗಿತ್ತು. ಇದೀಗ ಅವರು 'ಸೊಗ್ಗಾಡೆ ಚಿನ್ನಿ ನಾಯನಾ' ಸೀಕ್ವೆಲ್ ಮಾಡೋಕೆ ರೆಡಿ ಆಗಿದ್ದಾರೆ. ಅದರಲ್ಲಿ ಸಮಂತಾ-ಚೈತನ್ಯ ಕೂಡ ಇರಲಿದ್ದಾರೆ. ಬಂಗಾರರಾಜು ಜೊತೆಗೆ ಚೈತನ್ಯ-ಸಮಂತಾ 'ಸೊಗ್ಗಾಡೆ ಚಿನ್ನಿ ನಾಯನಾ' ಚಿತ್ರದ ಸೀಕ್ವೆಲ್‌ಗೆ 'ಬಂಗಾರರಾಜು' ಎಂದು ಟೈಟಲ್ ಇಡಲಾಗಿದೆ. ಪಾರ್ಟ್ ಒಂದರಲ್ಲಿ ನಾಗಾರ್ಜುನ ಪಾತ್ರದ ಹೆಸರು ಇದಾಗಿತ್ತು. ಮೊದಲ ಭಾಗದಲ್ಲಿ ಜೋಡಿಯಾಗಿದ್ದ ನಾಗಾರ್ಜುನ ಮತ್ತು ರಮ್ಯಾಕೃಷ್ಣ 'ಬಂಗಾರರಾಜು' ಚಿತ್ರದಲ್ಲೂ ಇರಲಿದ್ದಾರೆ. ಅವರ ಜೊತೆಗೆ ನಾಗಚೈತನ್ಯ ಮತ್ತು ಸಮಂತಾ ಕೂಡ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬಂದಿದೆ. ಅಂದಹಾಗೆ, ಸಮಂತಾ ಮತ್ತು ನಾಗ ಚೈತನ್ಯ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದು 2010ರಲ್ಲಿ ತೆರೆಕಂಡ 'ಯೇ ಮಾಯಾ ಚೇಸಾವೆ' ಸಿನಿಮಾದಲ್ಲಿ. ಆ ಸಿನಿಮಾ ಚೈತನ್ಯಗೆ 2ನೇ ಸಿನಿಮಾವಾಗಿದ್ದರೆ, ಸಮಂತಾಗೆ ಮೊದಲ ಸಿನಿಮಾವಾಗಿತ್ತು. ಆಗಿನಿಂದಲೇ ಇಬ್ಬರ ನಡುವೆ ಪ್ರೀತಿ ಇತ್ತು. ಆ ಬಳಿಕ 'ಮನಂ', 'ಆಟೋನಗರ್ ಸೂರ್ಯ' ಸಿನಿಮಾಗಳಲ್ಲೂ ನಟಿಸಿದರು. 2017ರಲ್ಲಿ ಅದ್ದೂರಿಯಾಗಿ ವಿವಾಹವಾದ ಈ ಜೋಡಿ, 2019ರಲ್ಲಿ 'ಮಜಿಲಿ' ಸಿನಿಮಾದಲ್ಲೂ ಒಟ್ಟಿಗೆ ಬಣ್ಣ ಹಚ್ಚಿತ್ತು. ಇದೀಗ ಮತ್ತೊಮ್ಮೆ ಬಂಗಾರರಾಜು ಮೂಲಕ ತೆರೆಮೇಲೆ ಒಂದಾಗಲು ರೆಡಿ ಆಗಿದೆ.