ಎಲ್‌ ಸಾಲ್ವೆಡಾರ್‌ನಲ್ಲಿ ಬಿಟ್‌ಕಾಯಿನ್‌ ವಿರುದ್ಧ ಬಂಡೆದ್ದ ಜನತೆ: ವ್ಯಾಪಕ ಪ್ರತಿಭಟನೆ

ಕ್ರಿಪ್ಟೋಕರೆನ್ಸಿಗೆ ಕಾನೂನುಬದ್ಧ ಮಾನ್ಯತೆ ನೀಡಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ಎಲ್‌ ಸಾಲ್ವೆಡಾರ್‌ ರಾಷ್ಟ್ರದಲ್ಲಿ ವಾರ ಕಳೆಯುವ ಮುನ್ನವೇ ಪ್ರತಿಭಟನೆಯ ಕಿಚ್ಚು ಹೊತ್ತಿಕೊಂಡಿದೆ.

ಎಲ್‌ ಸಾಲ್ವೆಡಾರ್‌ನಲ್ಲಿ ಬಿಟ್‌ಕಾಯಿನ್‌ ವಿರುದ್ಧ ಬಂಡೆದ್ದ ಜನತೆ: ವ್ಯಾಪಕ ಪ್ರತಿಭಟನೆ
Linkup
ಸ್ಯಾನ್‌ ಸಾಲ್ವಡಾರ್‌: ಕ್ರಿಪ್ಟೋಕರೆನ್ಸಿಗೆ ಕಾನೂನುಬದ್ಧ ಮಾನ್ಯತೆ ನೀಡಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ರಾಷ್ಟ್ರದಲ್ಲಿ ವಾರ ಕಳೆಯುವ ಮುನ್ನವೇ ಪ್ರತಿಭಟನೆಯ ಕಿಚ್ಚು ಹೊತ್ತಿಕೊಂಡಿದೆ. ಎಲ್ ಸಾಲ್ವಡಾರ್ನಲ್ಲಿ ಸಾವಿರಾರು ಪ್ರತಿಭಟನಾಕಾರರು ಬಿಟ್‌ಕಾಯಿನ್‌ಗೆ ಅಧಿಕೃತ ಮಾನ್ಯತೆ ನೀಡಿರುವುದನ್ನು ವಿರೋಧಿಸಿ ಬೀದಿಗಿಳಿದಿದ್ದಾರೆ, ಬಿಟ್ ಕಾಯಿನ್‌ಅನ್ನು ಕಾನೂನುಬದ್ಧಗೊಳಿಸಿದ್ದಕ್ಕೆ ಕ್ರೋಧ ವ್ಯಕ್ತಪಡಿಸಿದ್ದಾರೆ. ಬಿಟ್‌ಕಾಯಿನ್‌ಗೆ ಕಳೆದ ವಾರವಷ್ಟೇ ಎಲ್‌ಸಾಲ್ವೆಡಾರ್‌ನಲ್ಲಿ ಅಧಿಕೃತ ಮಾನ್ಯತೆ ನೀಡಲಾಗಿತ್ತು. ಇದಾದ ಕೂಡಲೇ ಕ್ರಿಪ್ಟೋ ವಹಿವಾಟು ಒಂದೇ ಬಾರಿಗೆ ಹೆಚ್ಚಳ ಕಂಡ ಪರಿಣಾಮ ಬೆಲೆಯಲ್ಲಿ ದಿಢೀರ್‌ ಕುಸಿತ ಕಂಡಿತ್ತು. ಎಲ್‌ ಸಾಲ್ವೆಡಾರ್‌ ಅಧ್ಯಕ್ಷ ನಯೀಬ್ ಬುಕೆಲೆ ಅವರು ಬಿಟ್‌ಕಾಯಿನ್‌ನಿಂದ ಹಲವು ಉಪಯೋಗಗಳಿವೆ ಎಂದಿದ್ದರು. ವಿದೇಶದಲ್ಲಿ ಕೆಲಸ ಮಾಡುವ ಸಾಲ್ವೆಡಾರ್‌ ಪ್ರಜೆಗಳು ತಾವು ದುಡಿದ ಹಣವನ್ನು ತಮ್ಮ ಕುಟುಂಬಕ್ಕೆ ಕಳುಹಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದರು. ಆದರೆ, ಪ್ರತಿಭಟನಾಕಾರರ ವಾದ ಬೇರೆಯೇ ಇದೆ. ಕ್ರಿಪ್ಟೋಕರೆನ್ಸಿಯು ಬಡ ಲ್ಯಾಟಿನ್ ಅಮೆರಿಕನ್ ದೇಶವಾದ ಎಲ್‌ ಸಾಲ್ವೆಡಾರ್‌ಗೆ ಆರ್ಥಿಕ ಅಸ್ಥಿರತೆ ಮತ್ತು ಹಣದುಬ್ಬರಕ್ಕೆ ಕಾರಣವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಕೆಲವು ಪ್ರತಿಭಟನಾಕಾರರಂತೂ ಹೊಚ್ಚಹೊಸ ಬಿಟ್‌ಕಾಯಿನ್ ಯಂತ್ರಕ್ಕೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬುಕೆಲೆ ಒಬ್ಬ ಸರ್ವಾಧಿಕಾರಿ (ಡಿಕ್ಟೇಟರ್) ಎಂದು ಬರೆದಿರುವ ನಾಮಫಲಕಗಳನ್ನು ಹಿಡಿದು ನಡೆಸಿದ್ದಾರೆ. ಪ್ರತಿಭಟನಾಕಾರರು, ದೇಶದ 200ನೇ ಸ್ವಾತಂತ್ರ್ಯ ದಿನದಂದು ರಾಜಧಾನಿ ಸ್ಯಾನ್ ಸಾಲ್ವಡಾರ್ ನಲ್ಲಿ ಒಟ್ಟುಗೂಡಿ ಪ್ರತಿಭಟನೆ ನಡಿಸಿದ್ದಾರೆ, "ಬಿಟ್ ಕಾಯಿನ್ ಬೇಡ" ಮತ್ತು "ಸಂವಿಧಾನವನ್ನು ಗೌರವಿಸುತ್ತೇವೆ" ಎಂದು ಬರೆದಿರುವ ನಾಮಫಲಕಗಳನ್ನು ಪ್ರದರ್ಶಿಸುವ ಮೂಲಕ ಕ್ರಿಪ್ಟೋಕರೆನ್ಸಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಎಲ್ ಸಾಲ್ವಡಾರ್ ದೇಶ ಕಳೆದ ವಾರವಷ್ಟೇ ಕಾನೂನುಬದ್ಧ ಮಾನ್ಯತೆ ನೀಡಿದ ಮೊದಲ ದೇಶ ಎನಿಸಿಕೊಂಡಿತ್ತು. ಇದಾದ ನಂತರ ಬಿಟ್‌ಕಾಯಿನ್‌ ಬೆಲೆಯಲ್ಲಿ ಇಷ್ಟೆಲ್ಲ ದಿಢೀರ್‌ ಬೆಳವಣಿಗೆ ಕಂಡಿದೆ. ಆದರೆ ಕಾನೂನುಬದ್ದ ಮಾನ್ಯತೆ ನೀಡಿದ ಆರಂಭದಲ್ಲಿ ಮುಗ್ಗರಿಸಿತ್ತು. ಬಿಟ್‌ಕಾಯಿನ್‌ ವಹಿವಾಟಿಗೆ ಬಳಸುವ ಡಿಜಿಟಲ್ ವ್ಯಾಲೆಟ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ಎಲ್ ಸಾಲ್ವಡಾರ್ ಅಧ್ಯಕ್ಷ ನಯೀಬ್ ಬುಕೆಲೆ ತಿಳಿಸಿದ್ದರು.