![](https://vijaykarnataka.com/photo/82216804/photo-82216804.jpg)
ಈಚೆಗೆ ತೆಲುಗಿನಲ್ಲಿ ತೆರೆಕಂಡ '' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದೆ. ಇಂತಹ ಕೊರೊನಾದ ಆತಂಕದ ನಡವೆಯೂ 'ಉಪ್ಪೆನ' ದಾಖಲೆ ಸಾಮಾನ್ಯದ್ದೇನಲ್ಲ. ಅಚ್ಚರಿ ಎಂದರೆ, ಈ ಚಿತ್ರದ ನಿರ್ದೇಶಕ ಅವರಿಗೆ ಇದು ಚೊಚ್ಚಲ ಸಿನಿಮಾ. ಆದರೆ, ಮೊದಲ ಸಿನಿಮಾದಲ್ಲೇ ಅವರು ದಾಖಲೆ ಬರೆದಿದ್ದಾರೆ. ಇದರ ಪರಿಣಾಮ, ಅವರ 2ನೇ ಸಿನಿಮಾಗೆ ದಾಖಲೆ ಪ್ರಮಾಣದ ಸಂಭಾವನೆ ಪಡೆಯುತ್ತಿದ್ದಾರೆ!
2ನೇ ಸಿನಿಮಾಕ್ಕೆ 10 ಕೋಟಿ ಸಂಭಾವನ ಪಡೆದ ಬುಚ್ಚಿ'ಉಪ್ಪೆನ' ಸಿನಿಮಾವನ್ನು ನಿರ್ಮಾಣ ಮಾಡಿದ್ದು ತೆಲುಗಿನ ಬಿಗ್ ಬ್ಯಾನರ್ ಮೈತ್ರಿ ಮೂವೀ ಮೇಕರ್ಸ್. ಅವರ ಜೊತೆಗೆ ಬುಚ್ಚಿ ಗುರು, ನಿರ್ದೇಶಕ ಸುಕುಮಾರ್ ಕೂಡ ಬಂಡವಾಳ ಹೂಡಿದ್ದರು. 'ಉಪ್ಪೆನ' ಚಿತ್ರಕ್ಕೆ ಖರ್ಚಾಗಿದ್ದು 20+ ಕೋಟಿ ರೂ.! ಆದರೆ, ಬಾಕ್ಸ್ ಆಫೀಸ್ನಲ್ಲಿ ಅಂದಾಜು 100 ಕೋಟಿ ರೂ.ವರೆಗೂ ಈ ಸಿನಿಮಾ ಗಳಿಕೆ ಮಾಡಿದೆ. ಇದರಿಂದ ನಿರ್ದೇಶಕ ಬುಚ್ಚಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಹಾಗಾಗಿ, 2ನೇ ಸಿನಿಮಾವನ್ನೂ ಕೂಡ ನಮ್ಮ ಜೊತೆಗೆ ಮಾಡುವಂತೆ ಮೈತ್ರಿ ಸಂಸ್ಥೆ ದುಂಬಾಲು ಬಿದ್ದಿದೆಯಂತೆ. ಅದಕ್ಕಾಗಿ ಬರೋಬ್ಬರಿ 10 ಕೋಟಿ ರೂ. ಸಂಭಾವನೆ ನೀಡಿದೆ ಎಂಬ ಮಾಹಿತಿ ಸಿಕ್ಕಿದೆ. ತನ್ನ ಎರಡನೇ ಸಿನಿಮಾಕ್ಕೇ ಈ ಪ್ರಮಾಣದ ಸಂಭಾವನೆ ಪಡೆದ ನಿರ್ದೇಶಕ ಎಂಬ ಖ್ಯಾತಿ ಈಗ ಬುಚ್ಚಿ ಬಾಬು ಸನಾಗೆ ಸಿಕ್ಕಿದೆ.
ಜೂ. ಎನ್ಟಿಆರ್ಗೆ ಬುಚ್ಚಿ ಡೈರೆಕ್ಷನ್ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ಯಂಗ್ ಟೈಗರ್ ಜೂ. ಎನ್ಟಿಆರ್ ಜೊತೆಗೆ ಬುಚ್ಚಿ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಮೈತ್ರಿ ಮೂವೀ ಮೇಕರ್ಸ್ ಬಳಿ ಎನ್ಟಿಆರ್ ಕಾಲ್ಶೀಟ್ ಇದ್ದು, ಬುಚ್ಚಿಗೆ ಉತ್ತಮ ಕಥೆ ಮಾಡುವುದಕ್ಕೆ ಸೂಚಿಸಿದ್ದಾರೆ ಎನ್ನಲಾಗಿದೆ. ಒಂದುವೇಳೆ ಎನ್ಟಿಆರ್ ಜೊತೆ ಸಿನಿಮಾ ಸಾಧ್ಯವಾಗದಿದ್ದರೂ, ಅದೇ ಬ್ಯಾನರ್ನಲ್ಲಿ ಬೇರೆ ಯಾರಾದರೂ ನಟರಿಗೆ ಬುಚ್ಚಿ ಬಾಬು ಸನಾ ನಿರ್ದೇಶನ ಮಾಡುವುದು ಖಚಿತ ಎಂಬ ಮಾಹಿತಿ ಇದೆ.
ಬುಚ್ಚಿಗೆ ಬೆನ್ನಲ್ಲೇ ದುಬಾರಿ ಕಾರ್ ನೀಡಿದ್ದ ನಿರ್ಮಾಪಕರು
'ಉಪ್ಪೆನ' ದಾಖಲೆಯ ಗೆಲುವು ಕಾಣುತ್ತಿದ್ದಂತೆಯೇ, ನಿರ್ದೇಶಕ ಬುಚ್ಚಿಗೆ 75 ಲಕ್ಷ ರೂ. ಬೆಲೆಯ ಬೆನ್ಜ್ ಕಾರನ್ನು ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ ನೀಡಿತ್ತು. 'ಉಪ್ಪೆನ'ದಲ್ಲಿ ನಾಯಕರಾಗಿ ವೈಷ್ಣವ್ ತೇಜ್, ನಾಯಕಿಯಾಗಿ ಕೃತಿ ಶೆಟ್ಟಿ ನಟಿಸಿದ್ದರು. ಅವರಿಗೂ ಇದು ಚೊಚ್ಚಲ ಸಿನಿಮಾವಾಗಿತ್ತು. ವೈಷ್ಣವ್ಗೆ ಈ ಸಿನಿಮಾಕ್ಕಾಗಿ 1 ಕೋಟಿ ರೂ.ವರೆಗೂ ಸಂಭಾವನೆ ಸಿಕ್ಕಿದ್ದರೆ, ನಾಯಕಿ ಕೃತಿ 25 ಲಕ್ಷ ರೂ.ಗಳನ್ನು ನೀಡಲಾಗಿದೆಯಂತೆ!