ಕೋವಿಡ್19 ಪಾಸಿಟಿವ್: ಮಾನಸಿಕ ಹಿಂಸೆಯನ್ನು ಸಹಿಸುವುದೇ ಕಷ್ಟ ಎಂದ ಅನು ಪ್ರಭಾಕರ್

ಕೋವಿಡ್-19 ಪಾಸಿಟಿವ್ ದೃಢಪಟ್ಟಿರುವುದರಿಂದ ಅನು ಪ್ರಭಾಕರ್ ಮುಖರ್ಜಿ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. ಕೊರೊನಾ ವೈರಸ್ ಸೋಂಕಿನಿಂದ ತಾವು ಎದುರಿಸುತ್ತಿರುವ ಮಾನಸಿಕ ಸಂಕಟವನ್ನು ಅನು ಪ್ರಭಾಕರ್ ಬಿಚ್ಚಿಟ್ಟಿದ್ದಾರೆ.

ಕೋವಿಡ್19 ಪಾಸಿಟಿವ್: ಮಾನಸಿಕ ಹಿಂಸೆಯನ್ನು ಸಹಿಸುವುದೇ ಕಷ್ಟ ಎಂದ ಅನು ಪ್ರಭಾಕರ್
Linkup
ಕನ್ನಡ ನಟಿ ಮುಖರ್ಜಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಕೋವಿಡ್-19 ಪಾಸಿಟಿವ್ ದೃಢಪಟ್ಟಿರುವುದರಿಂದ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. ಕೊರೊನಾ ವೈರಸ್ ಸೋಂಕಿನಿಂದ ಐಸೊಲೇಟ್‌ಆಗಿ ತಾವು ಎದುರಿಸುತ್ತಿರುವ ಮಾನಸಿಕ ಸಂಕಟವನ್ನು ಅನು ಪ್ರಭಾಕರ್ ಬಿಚ್ಚಿಟ್ಟಿದ್ದಾರೆ. ಅನು ಪ್ರಭಾಕರ್ ಏನಂತಾರೆ? ''ಏಪ್ರಿಲ್ 15ರಂದು ವಾಸನೆ ಮತ್ತು ರುಚಿ ಗ್ರಹಿಕೆಯ ಶಕ್ತಿ ಕಳೆದುಕೊಂಡೆ. ಸಂಜೆ ಹೊತ್ತಿಗೆ ವೈದ್ಯೆಯಾಗಿರುವ ನನ್ನ ಸಹೋದರಿಯನ್ನು ಸಂಪರ್ಕಿಸಿದೆ. ಕೂಡಲೆ ಐಸೊಲೇಟ್ ಆಗುವಂತೆ ನನಗೆ ತಿಳಿಸಿದರು. ಮಾರನೇ ದಿನ ಪರೀಕ್ಷೆಗೆ ಒಳಗಾದೆ. ನಂತರ ನನಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿತು. ಪಾಸಿಟಿವ್ ಎಂದು ತಿಳಿದ ಕೂಡಲೆ ನನಗೆ ಭಯವಾಯ್ತು. ಎರಡುವರೆ ವರ್ಷದ ಮಗಳು ಮತ್ತು ವಯಸ್ಸಾದ ಅತ್ತೆ ಮನೆಯಲ್ಲಿದ್ದಾರೆ. ಎಲ್ಲರೂ ಪರೀಕ್ಷೆ ಮಾಡಿಸಿಕೊಂಡರು. ಅದೃಷ್ಟವಶಾತ್ ವರದಿಯಲ್ಲಿ ಎಲ್ಲರಿಗೂ ನೆಗೆಟಿವ್ ಬಂದಿದೆ. ಯಾವಾಗಲೂ ನನ್ನನ್ನೇ ಕರೆಯುವ ಮಗಳಿನಿಂದ ದೂರವಿರುವುದು ನನಗೆ ತುಂಬಾ ಕಷ್ಟವಾಗುತ್ತಿದೆ'' ಎಂದಿದ್ದಾರೆ ಅನು ಪ್ರಭಾಕರ್. ''ಕೊರೊನಾದಿಂದ ಐಸೊಲೇಟ್‌ ಆದ್ಮೇಲೆ ಉಂಟಾಗುವ ಮಾನಸಿಕ ಹಿಂಸೆಯನ್ನು ಸಹಿಸುವುದು ಬಹಳ ಕಷ್ಟ. ಕೆಟ್ಟ ಆಲೋಚನೆಗಳು ಬರುತ್ತಲೇ ಇರುತ್ತವೆ. ಈ ಸಮಯದಲ್ಲಿ ನಾವು ಮಾನಸಿಕವಾಗಿ ದೃಢವಾಗಿರುವುದು ತುಂಬಾ ಮುಖ್ಯ. ಊಟ ಮಾಡಿಸಲು, ಮಲಗಿಸಲು ಮಗಳು ನನ್ನನ್ನ ಕರೆಯುತ್ತಲೇ ಇರುತ್ತಾಳೆ. ನಾನು ಹೋಗದೇ ಇದ್ದಾಗ ಅಳುತ್ತಾಳೆ. ಆದರೂ ನನ್ನಿಂದ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ'' ಎಂದು ಸಂಕಟದಿಂದ ಹೇಳಿದ್ದಾರೆ ಅನು ಪ್ರಭಾಕರ್. ಜಾಗೃತಿ ವಿಡಿಯೋ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಅನು ಪ್ರಭಾಕರ್ ಮುಖರ್ಜಿ ವಿಡಿಯೋಗಳನ್ನು ಮಾಡುತ್ತಿದ್ದಾರೆ. ''ರೋಗ ಲಕ್ಷಣಗಳು ಕಾಣಿಸಿಕೊಂಡ ನಂತರ ಉದಾಸೀನ ಮಾಡಬೇಡಿ. ಕೂಡಲೆ ಪರೀಕ್ಷೆಗೆ ಒಳಗಾಗಿ. ಬೇಗ ಜಾಗೃತಿ ವಹಿಸಿದರೆ, ಬೇಗ ಗುಣಮುಖರಾಗಲು ಸಾಧ್ಯ'' ಎಂದು ವಿಡಿಯೋಗಳ ಮೂಲಕ ಅನು ಪ್ರಭಾಕರ್ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.