ಕೊರೊನಾ ಮಹಾಮಾರಿಯಿಂದ ಪತಿ-ಪುತ್ರ ಇಬ್ಬರನ್ನೂ ಕಳೆದುಕೊಂಡ 'ಕಿಲಾಡಿ ಕಿಟ್ಟು' ಖ್ಯಾತಿಯ ನಟಿ ಕವಿತಾ

ಮಹಾಮಾರಿ ಕೋವಿಡ್‌ಗೆ ನಟಿ ಕವಿತಾ ಅವರ ಪತಿ ಮತ್ತು ಪುತ್ರ ಬಲಿಯಾಗಿದ್ದಾರೆ. ಕೈ ಹಿಡಿದ ಪತಿ ದಶರಥ ರಾಜ್ ಮತ್ತು ಹೆತ್ತ ಮಗ ಸಂಜಯ್ ರೂಪ್ ಅವರನ್ನು ಕಳೆದುಕೊಂಡ ನಟಿ ಕವಿತಾ ದುಃಖದ ಮಡುವಿನಲ್ಲಿದ್ದಾರೆ.

ಕೊರೊನಾ ಮಹಾಮಾರಿಯಿಂದ ಪತಿ-ಪುತ್ರ ಇಬ್ಬರನ್ನೂ ಕಳೆದುಕೊಂಡ 'ಕಿಲಾಡಿ ಕಿಟ್ಟು' ಖ್ಯಾತಿಯ ನಟಿ ಕವಿತಾ
Linkup
ಮಾರಣಾಂತಿಕ ಕೊರೊನಾ ವೈರಸ್‌ನಿಂದ ಖ್ಯಾತ ನಟಿ ಬದುಕು ಅಕ್ಷರಶಃ ಕತ್ತಲಾಗಿದೆ. ಮಹಾಮಾರಿ ಕೋವಿಡ್‌ಗೆ ನಟಿ ಕವಿತಾ ಅವರ ಪತಿ ಮತ್ತು ಪುತ್ರ ಬಲಿಯಾಗಿದ್ದಾರೆ. ಕೈ ಹಿಡಿದ ಪತಿ ದಶರಥ ರಾಜ್ ಮತ್ತು ಹೆತ್ತ ಮಗ ಸಂಜಯ್ ರೂಪ್ ಅವರನ್ನು ಕಳೆದುಕೊಂಡ ನಟಿ ಕವಿತಾ ದುಃಖದ ಮಡುವಿನಲ್ಲಿದ್ದಾರೆ. 15 ದಿನಗಳ ಹಿಂದೆ ಕೊನೆಯುಸಿರೆಳೆದಿದ್ದ ಪುತ್ರ ನಟಿ ಕವಿತಾ ಕುಟುಂಬಕ್ಕೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ಪುತ್ರ ಸಂಜಯ್ ರೂಪ್ ಮೊದಲು ಇಸೊಲೇಷನ್‌ನಲ್ಲಿದ್ದರು. ಬಳಿಕ ಆರೋಗ್ಯ ಸ್ಥಿತಿ ಕ್ಷೀಣಿಸಿದ ಪರಿಣಾಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಸಂಜಯ್ ರೂಪ್ ಚೇತರಿಸಿಕೊಳ್ಳಲಿಲ್ಲ. ಕಳೆದ ಜೂನ್ 15 ರಂದು ಸಂಜಯ್ ರೂಪ್ ಕೊನೆಯುಸಿರೆಳೆದರು. ಇಂದು ಪತಿ ನಿಧನ ನಟಿ ಕವಿತಾ ಅವರ ಪತಿ ದಶರಥ ರಾಜ್ ಕೂಡ ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದರು. ದಶರಥ ರಾಜ್ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ದಶರಥ ರಾಜ್ ನಿಧನರಾಗಿದ್ದಾರೆ. ಅನೇಕ ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಕವಿತಾ ದಕ್ಷಿಣ ಭಾರತದ ಚಿತ್ರರಂಗದ ಜನಪ್ರಿಯ ನಟಿ ಕವಿತಾ. ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡದ ಅನೇಕ ಸಿನಿಮಾಗಳಲ್ಲಿ ಕವಿತಾ ಅಭಿನಯಿಸಿದ್ದಾರೆ. ತಮ್ಮ 11ನೇ ವರ್ಷ ವಯಸ್ಸಿನಲ್ಲಿಯೇ ನಟಿ ಕವಿತಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. 1976ರಲ್ಲಿ ತೆರೆಕಂಡ 'ಓ ಮಂಜು' ನಟಿ ಕವಿತಾ ಅಭಿನಯದ ಚೊಚ್ಚಲ ಚಿತ್ರ. 'ಸಿರಿ ಸಿರಿ ಮುವ್ವ', 'ಯುಗಳಗೀತಂ', 'ಮೀನಾಕ್ಷಿ', ಕನ್ನಡದ 'ಸಹೋದರರ ಸವಾಲ್', 'ಕಿಲಾಡಿ ಕಿಟ್ಟು' ಸೇರಿದಂತೆ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕವಿತಾ ನಟಿಸಿದ್ದಾರೆ. ಕೆಲ ಸೀರಿಯಲ್‌ಗಳಲ್ಲೂ ಕವಿತಾ ಕಾಣಿಸಿಕೊಳ್ಳುತ್ತಿದ್ದಾರೆ.