ಉದ್ಯೋಗಿಗಳಿಗೆ ಸಿಗಲಿದೆ ವಾರದಲ್ಲಿ 3 ದಿನ ರಜೆ! ವೇತನ ಸ್ವರೂಪವೂ ಬದಲು!

ಕೇಂದ್ರ ಸರ್ಕಾರವು ನೂತನ ವೇತನ ಸಂಹಿತೆಯನ್ನು ಶೀಘ್ರವೇ ಪೂರ್ಣಗೊಳಿಸಲಿದ್ದು, ಇದೇ ವರ್ಷದ ಅಕ್ಟೋಬರ್‌ನಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ. ಈ ಮಸೂದೆಯಡಿ ಉದ್ಯೋಗಿಗಳ ರಜಾದಿನಗಳು, ಸಂಬಳ ಮತ್ತು ಕೆಲಸದ ಸಮಯದ ಕುರಿತು ಹಲವು ಬದಲಾವಣೆ ತರಲಾಗಿದೆ.

ಉದ್ಯೋಗಿಗಳಿಗೆ ಸಿಗಲಿದೆ ವಾರದಲ್ಲಿ 3 ದಿನ ರಜೆ! ವೇತನ ಸ್ವರೂಪವೂ ಬದಲು!
Linkup
ಹೊಸದಿಲ್ಲಿ: ಕೇಂದ್ರ ಸರ್ಕಾರವು ನೂತನ ಸಂಹಿತೆಯನ್ನು ಶೀಘ್ರವೇ ಪೂರ್ಣಗೊಳಿಸಲಿದ್ದು, ಇದೇ ವರ್ಷದ ಅಕ್ಟೋಬರ್‌ನಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ. ಈ ಮಸೂದೆಯಡಿ ಉದ್ಯೋಗಿಗಳ ರಜಾದಿನಗಳು, ಸಂಬಳ ಮತ್ತು ಕೆಲಸದ ಸಮಯದ ಕುರಿತು ಹಲವು ಬದಲಾವಣೆ ತರಲಾಗಿದೆ. ಹೊಸ ವೇತನ ಸಂಹಿತೆಯಡಿ ನೌಕರರ ಕೆಲಸದ ಸಮಯವನ್ನು 9 ಗಂಟೆಯಿಂದ 12 ಗಂಟೆಗೆ ಹೆಚ್ಚಿಸುವ ಪ್ರಸ್ತಾವನೆ ಇದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪ್ರಕಾರ, ಒಂದು ವಾರದಲ್ಲಿ 48 ಗಂಟೆಗಳ ಕೆಲಸದ ನಿಯಮ ಅನ್ವಯವಾಗುತ್ತದೆ. ದಿನದಲ್ಲಿ 12 ಗಂಟೆ ಕೆಲಸ ಮತ್ತು ವಾರದಲ್ಲಿ 3 ದಿನಗಳ ರಜೆ ನಿಯಮವನ್ನು ಕೆಲವು ಸಂಘಟನಗಳು ಪ್ರಶ್ನಿಸಿದ್ದವು. ಇದಕ್ಕೆ ಸರಕಾರ ಪ್ರತಿಕ್ರಿಯಿಸಿ, ಒಂದು ವಾರದಲ್ಲಿ 48 ಗಂಟೆಗಳ ಕೆಲಸದ ನಿಯಮದಡಿ, ಒಬ್ಬ ಉದ್ಯೋಗಿ ದಿನದಲ್ಲಿ 8 ಗಂಟೆಗಳ ಕಾಲ ಕೆಲಸ ಮಾಡಿದರೆ, ವಾರಕ್ಕೆ ಒಂದು ದಿನ ರಜೆ ಸಿಗಲಿದೆ. ದಿನದಲ್ಲಿ 12 ಗಂಟೆ ಕೆಲಸ ಮಾಡಿದರೆ, ಆ ಉದ್ಯೋಗಿಗೆ ವಾರದಲ್ಲಿ 3 ದಿನ ರಜೆ ನೀಡಬೇಕಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ವೇತನದ ಸ್ವರೂಪ ಕೂಡ ಬದಲಾಗಲಿದೆ: ಹೊಸ ವೇಜ್ ಕೋಡ್ ಜಾರಿಗೆ ಬಂದ ಮೇಲೆ ಟೇಕ್ ಹೋಂ ಸ್ಯಾಲರಿ (take home ) ಕಡಿಮೆಯಾಗಬಹುದು. ಹೊಸ ವೇಜ್ ಕೋಡ್ ಬಂದ ಮೇಲೆ ಬೇಸಿಕ್ ಸ್ಯಾಲರಿಯು ಒಟ್ಟು ವೇತನದ ಶೇ.50ರಷ್ಟಿರಲಿದೆ. ಪ್ರಸ್ತುತ ಕಂಪನಿಗಳು ಹಣ ಉಳಿಸುವ ದೃಷ್ಟಿಯಿಂದ ಅತ್ಯಂತ ಕಡಿಮೆ ಬೇಸಿಕ್ ಸ್ಯಾಲರಿ ನೀಡುತ್ತಿವೆ. ಭತ್ಯೆಗಳನ್ನು ಹೆಚ್ಚಿಗೆ ನೀಡುತ್ತಿವೆ. ಪಿಎಫ್, ಗ್ರಾಜ್ಯುಟಿ ಹೆಚ್ಚಾಗಲಿದೆ: ಬೇಸಿಕ್ ವೇತನ ಹೆಚ್ಚಾದಾಗ ನೌಕರರ ಪಿಎಫ್ () ಹೆಚ್ಚು ಕಟ್ ಆಗಲಿದೆ. ಅಂದರೆ, ಅವರ ಭವಿಷ್ಯ ಹೆಚ್ಚು ಸುರಕ್ಷಿತವಾಗಲಿದೆ. ಪಿಎಫ್ ಜೊತೆಗೆ ಗ್ರ್ಯಾಚ್ಯುಯಿಟಿ ಕಟ್ ಆಗುವ ಪ್ರಮಾಣ ಕೂಡ ಹೆಚ್ಚಾಗಲಿದೆ. ಹೊಸ ವೇಜ್ ಕೋಡ್ ಬಂದಾಗ ನಿಮ್ಮ ಟೇಕ್ ಹೋಂ ಸ್ಯಾಲರಿ ಕಡಿಮೆಯಾಗಬಹುದು. ಆದರೆ, ರಿಟೈರ್‌ಮೆಂಟ್ ಲಾಭ ಅಧಿಕವಾಗಲಿದೆ. ಅಸಂಘಟಿತ ವರ್ಗದ ಕಾರ್ಮಿಕರಿಗೂ ಈ ವೇಜ್ ಕೋಡ್ ಅನ್ವಯವಾಗಲಿದೆ. ಗಳಿಕೆ ರಜೆ ಹೆಚ್ಚಾಗಲಿದೆ: ಇದೇ ವೇಳೆ, ನೌಕರರ ಗಳಿಕೆ ರಜೆ (Earned Leave) ಹೆಚ್ಚಾಗಲಿದೆ. ಗರಿಷ್ಠ 300 ಇಎಲ್‌ಗಳನ್ನು ನಗದು ಮಾಡಿಕೊಳ್ಳಲು (ರಜೆಗಳ ಬದಲಿಗೆ ಸಂಬಳ ಪಡೆಯುವುದು) ಅವಕಾಶ ಸಿಗಲಿದೆ. ಈ ಸಂಬಂಧ ಕಾರ್ಮಿಕ ಸಚಿವಾಲಯ, ಲೇಬರ್ ಯೂನಿಯನ್ (Labour union) ಹಾಗೂ ಉದ್ಯೋಗ ಜಗತ್ತಿನ ಪ್ರತಿನಿಧಿಗಳ ನಡುವೆ ಮಾತುಕತೆ ನಡೆದಿದೆ. ಇದರಲ್ಲಿ ಕಾರ್ಮಿಕರ ಗಳಿಕೆ ರಜೆ ಮಿತಿಯನ್ನು 240ದಿನಗಳಿಂದ 300 ದಿನಗಳಿಗೆ ಹೆಚ್ಚಿಸುವ ಬೇಡಿಕೆ ಮಂಡಿಸಲಾಗಿತ್ತು. ಅಂದರೆ, ನಿವೃತ್ತಿಯ ಸಮಯದಲ್ಲಿ ಗಳಿಕೆ ರಜೆ ನಗದೀಕರಣ ಮಿತಿಯನ್ನು 240ರಿಂದ 300ಕ್ಕೆ ಹೆಚ್ಚಿಸಲಾಗುತ್ತಿದೆ. ಕನಿಷ್ಠ ವೇತನ ಅನ್ವಯವಾಗಲಿದೆ: ಮೊದಲ ಸಲ ದೇಶದ ಎಲ್ಲ ಕಾರ್ಮಿಕರಿಗೂ ಕನಿಷ್ಠ ವೇತನ ಸಿಗಲಿದೆ. ಪ್ರವಾಸಿ ಕಾರ್ಮಿಕರಿಗೆ ಕೂಡ ಹೊಸ ಯೋಜನೆ ಜಾರಿಗೆ ಬರಲಿದೆ. ಎಲ್ಲ ಕಾರ್ಮಿಕರ ಸಾಮಾಜಿಕ ಸುರಕ್ಷೆಗಾಗಿ ಪ್ರಾವಿಡೆಂಟ್ ಫಂಡ್ (PF) ಜಾರಿಗೆ ಬರಲಿದೆ. ಸಂಘಟಿತ ಮತ್ತು ಅಸಂಘಟಿತ ಕ್ಷೇತ್ರದ ಎಲ್ಲ ಕಾರ್ಮಿಕರಿಗೂ ಇಎಸ್ಐ ಸಿಗಲಿದೆ. ಎಲ್ಲ ಕೆಲಸ ವ್ಯವಹಾರಗಳಲ್ಲಿ ಮಹಿಳೆಯರು ಪಾಲ್ಗೊಳ್ಳಬಹುದು. ಅವರಿಗೆ ನೈಟ್ ಶಿಫ್ಟ್ (Night shift) ಮಾಡಲು ಅನುಮತಿ ನೀಡಲಾಗಿದೆ.