ಹೆಚ್ಚಿದ ಪ್ರಯಾಣಿಕರ ದಟ್ಟಣೆ; ಯಶವಂತಪುರ ಮೆಟ್ರೊ ನಿಲ್ದಾಣದ ಆವರಣ ವಿಸ್ತರಣೆ
ಹೆಚ್ಚಿದ ಪ್ರಯಾಣಿಕರ ದಟ್ಟಣೆ; ಯಶವಂತಪುರ ಮೆಟ್ರೊ ನಿಲ್ದಾಣದ ಆವರಣ ವಿಸ್ತರಣೆ
ಪ್ರಯಾಣಿಕರ ಸಂಚಾರ ಸ್ಥಳವನ್ನು ಸುಮಾರು 1,000 ಚದರ ಅಡಿಗಳಷ್ಟು ಹೆಚ್ಚಿಸುವ ನಿರೀಕ್ಷೆಯಿದೆ. ಎಂಎಸ್ ಸ್ಟ್ರಕ್ಟರಲ್ ಸ್ಟೀಲ್ ಫ್ಯಾಬ್ರಿಕೇಶನ್ ಮೂಲಕ ಮುಖ್ಯ ರಸ್ತೆಯ ಎರಡೂ ಕಡೆಗಳಲ್ಲಿ ನಿಲ್ದಾಣದ ಆವರಣವನ್ನು ವಿಸ್ತರಿಸಲು ಬಿಎಂಆರ್ಸಿಎಲ್ ಯೋಜಿಸಿದೆ. ಎಂಎಸ್ ಸ್ಟ್ರಕ್ಟರಲ್ ಸ್ಟೀಲ್ ಫ್ಯಾಬ್ರಿಕೇಶನ್ ನಿರ್ಮಿಸುವಲ್ಲಿ ಪರಿಣತಿ ಹೊಂದಿರುವ ಕಂಪನಿಗಳು ಬಿಡ್ನಲ್ಲಿ ಪಾಲ್ಗೊಳ್ಳುವಂತೆ ಬುಧವಾರ ಬಿಎಂಆರ್ಸಿಎಲ್ ಟೆಂಡರ್ ಕರೆದಿದೆ. 75 ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿ ಪೂರ್ಣಗೊಳ್ಳುವ ಅಂದಾಜಿದೆ.
ಬೆಂಗಳೂರು: ಮೆಜೆಸ್ಟಿಕ್ ನಂತರ ಅತಿ ಹೆಚ್ಚು ಜನಸಂದಣಿ ಹೊಂದಿರುವ ಮೆಟ್ರೊ ರೈಲು ನಿಲ್ದಾಣದ ಆವರಣವನ್ನು ವಿಸ್ತರಿಸಲು ಮೆಟ್ರೊ ರೈಲು ಕಾರ್ಪೊರೇಶನ್ ಲಿಮಿಟೆಡ್ () ತೀರ್ಮಾನಿಸಿದೆ.
ಏಳು ವರ್ಷಗಳ ಹಿಂದೆ ಯಶವಂತಪುರ ಮೆಟ್ರೊ ರೈಲು ನಿಲ್ದಾಣವನ್ನು ನಿರ್ಮಿಸಲಾಗಿತ್ತು. ಸದ್ಯ ಈಗಿರುವ ಮೆಟ್ರೊ ನಿಲ್ದಾಣ ಕಿರಿದಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆಯ ಎರಡೂ ಕಡೆಗಳಲ್ಲಿ ಮೆಟ್ರೊ ನಿಲ್ದಾಣದ ಆವರಣವನ್ನು ವಿಸ್ತರಿಸಲು ಉದ್ದೇಶಿಸಲಾಗಿದೆ. ನಮ್ಮ ಮೆಟ್ರೊ ಮೊದಲನೇ ಹಂತದ ಯೋಜನೆಯ ಅಡಿಯಲ್ಲಿ ಆವರಣ ವಿಸ್ತಾರಗೊಳ್ಳುತ್ತಿರುವ ಮೊದಲ ನಿಲ್ದಾಣ ಯಶವಂತಪುರ ಮೆಟ್ರೊ ರೈಲು ನಿಲ್ದಾಣವಾಗಲಿದೆ. ಕಾಮಗಾರಿ ಪೂರ್ಣಗೊಂಡ ನಂತರ ದೊಡ್ಡ ಸಂಖ್ಯೆಯ ಪ್ರಯಾಣಿಕರು ಒಮ್ಮೆಲೇ ಮೆಟ್ರೊ ನಿಲ್ದಾಣ ಬಳಸಬಹುದಾಗಿದೆ.
ಎಂಎಸ್ ಸ್ಟ್ರಕ್ಟರಲ್ ಸ್ಟೀಲ್ ಫ್ಯಾಬ್ರಿಕೇಶನ್ ಮೂಲಕ ಮುಖ್ಯ ರಸ್ತೆಯ ಎರಡೂ ಕಡೆಗಳಲ್ಲಿ ನಿಲ್ದಾಣದ ಆವರಣವನ್ನು ವಿಸ್ತರಿಸಲು ಬಿಎಂಆರ್ಸಿಎಲ್ ಯೋಜಿಸಿದೆ. ಪ್ರಯಾಣಿಕರ ಸಂಚಾರ ಸ್ಥಳವನ್ನು ಸುಮಾರು 1,000 ಚದರ ಅಡಿಗಳಷ್ಟು ಹೆಚ್ಚಿಸುವ ನಿರೀಕ್ಷೆಯಿದೆ. ‘ಯಶವಂತಪುರ ರೈಲು ನಿಲ್ದಾಣಕ್ಕೆ ಅಂತರ್ರಾಜ್ಯ ಮತ್ತು ಅಂತರ್ ಜಿಲ್ಲಾ ರೈಲುಗಳು ಬಂದಾಗಲೆಲ್ಲ ಮೆಟ್ರೊ ನಿಲ್ದಾಣದಲ್ಲಿ ದಟ್ಟಣೆ ಉಂಟಾಗುತ್ತದೆ. ಟಿಕೆಟ್ ಖರೀದಿಸಲು ಸರದಿಯಲ್ಲಿ ನಿಲ್ಲಲು ಸಹ ಪ್ರಯಾಣಿಕರಿಗೆ ಸ್ಥಳಾವಕಾಶ ಇರುವುದಿಲ್ಲ. ಹೀಗಾಗಿ ನಿಲ್ದಾಣದ ಆವರಣವನ್ನು ವಿಸ್ತರಿಸಲು ನಿರ್ಧರಿಸಲಾಯಿತು. ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ’ ಎಂದು ಬಿಎಂಆರ್ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದರು.
ಎಂಎಸ್ ಸ್ಟ್ರಕ್ಟರಲ್ ಸ್ಟೀಲ್ ಫ್ಯಾಬ್ರಿಕೇಶನ್ ನಿರ್ಮಿಸುವಲ್ಲಿ ಪರಿಣತಿ ಹೊಂದಿರುವ ಕಂಪನಿಗಳು ಬಿಡ್ನಲ್ಲಿ ಪಾಲ್ಗೊಳ್ಳುವಂತೆ ಬುಧವಾರ ಬಿಎಂಆರ್ಸಿಎಲ್ ಟೆಂಡರ್ ಕರೆದಿದೆ. 75 ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿ ಪೂರ್ಣಗೊಳ್ಳುವ ಅಂದಾಜಿದೆ. ಇನ್ನೊಂದೆಡೆ, ಯಶವಂತಪುರ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ 6 ರಲ್ಲಿ ಸದ್ಯ ಅಸ್ತಿತ್ವದಲ್ಲಿರುವ ಸೇತುವೆಗೆ ಮೆಟ್ರೊ ನಿಲ್ದಾಣದ ಎರಡು ಕಾನ್ಕೋರ್ಸ್ ಪ್ರದೇಶವನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಫುಟ್ ಓವರ್ ಬ್ರಿಡ್ಜ್ (ಎಫ್ಒಬಿ) ನಿರ್ಮಿಸುವ ಕಾಮಗಾರಿಯನ್ನು ಬಿಎಂಆರ್ಸಿಎಲ್ ಕೈಗೆತ್ತಿಕೊಂಡಿದೆ. ಈ ಕುರಿತ ಬಿಡ್ಗಳನ್ನು ಅಂತಿಮಗೊಳಿಸುವ ಕಾರ್ಯದಲ್ಲಿ ಬಿಎಂಆರ್ಸಿಎಲ್ ನಿರತವಾಗಿದೆ.