ಭಾರತದಲ್ಲಿ 2030ಕ್ಕೆ ಇ-ಕಾಮರ್ಸ್‌ ಮಾರುಕಟ್ಟೆ 2.96 ಲಕ್ಷ ಕೋಟಿ ರೂ.ಗೆ ವೃದ್ಧಿ

2019ರಲ್ಲಿ ಸುಮಾರು 29,600 ಕೋಟಿ ರೂ. ಮೌಲ್ಯವಿದ್ದ ಭಾರತದ ಇ-ಕಾಮರ್ಸ್‌ ಮಾರುಕಟ್ಟೆ ಮುಂಬರುವ ವರ್ಷಗಳಲ್ಲಿ ಭಾರಿ ಬೆಳವಣಿಗೆ ದಾಖಲಿಸಲಿದೆ ಎಂದು ವರದಿಯೊಂದು ತಿಳಿಸಿದ್ದು, 2030ರ ವೇಳೆಗೆ ಸುಮಾರು 2.96 ಲಕ್ಷ ಕೋಟಿ ರೂ. ಏರಿಕೆಯಾಗಬಹುದು ಎಂದಿದೆ.

ಭಾರತದಲ್ಲಿ 2030ಕ್ಕೆ ಇ-ಕಾಮರ್ಸ್‌ ಮಾರುಕಟ್ಟೆ 2.96 ಲಕ್ಷ ಕೋಟಿ ರೂ.ಗೆ ವೃದ್ಧಿ
Linkup
ಹೊಸದಿಲ್ಲಿ: ಭಾರತದಲ್ಲಿ ಇ-ಕಾಮರ್ಸ್‌ ಮಾರುಕಟ್ಟೆಯ ಮೌಲ್ಯ 2030ರ ವೇಳೆಗೆ 40 ಶತಕೋಟಿ ಡಾಲರ್‌ಗೆ (ಸುಮಾರು 2.96 ಲಕ್ಷ ಕೋಟಿ ರೂ.) ಏರಿಕೆಯಾಗಬಹುದು ಎಂದು ಕಿಯಾರ್ನೆ ಏಜೆನ್ಸಿ ತಿಳಿಸಿದೆ. 2019ರಲ್ಲಿ 4 ಶತಕೋಟಿ ಡಾಲರ್‌ (ಸುಮಾರು 29,600 ಕೋಟಿ ರೂ.) ಮೌಲ್ಯವಿದ್ದ ದೇಶದ ಇ-ಕಾಮರ್ಸ್‌ ಮಾರುಕಟ್ಟೆ ಮುಂಬರುವ ವರ್ಷಗಳಲ್ಲಿ ಭಾರಿ ಬೆಳವಣಿಗೆ ದಾಖಲಿಸಲಿದೆ ಎಂದು ವರದಿಯು ಅಂದಾಜಿಸಿದೆ. ಕಾರಣವೇನು? ಭಾರತದಲ್ಲಿ ಇ-ಕಾಮರ್ಸ್‌ ನಗರ ಪ್ರದೇಶಗಳಿಗೆ ಸೀಮಿತವಾಗಿರದೆ, ಎರಡನೇ ಸ್ತರದ ನಗರಗಳನ್ನು ದಾಟಿ ಮೂರು ಮತ್ತು ನಾಲ್ಕನೇ ಸ್ತರದ ಪಟ್ಟಣಗಳಿಗೂ ವಿಸ್ತರಿಸುತ್ತಿದೆ. ಜನರೂ ಆನ್‌ಲೈನ್‌ ಮೂಲಕ ಉತ್ಪನ್ನಗಳ ಖರೀದಿಗೆ ಒಲವು ವ್ಯಕ್ತಪಡಿಸುತ್ತಿದ್ದಾರೆ. ಇದು ಭಾರತದ ರಿಟೇಲ್‌ ಮಾರುಕಟ್ಟೆಯಲ್ಲಿ ಭಾರಿ ಬದಲಾವಣೆಗೆ ಕಾರಣವಾಗುತ್ತಿದೆ. ಲೈಫ್‌ಸ್ಟೈಲ್‌ ರಿಟೇಲ್‌, ಅಪಾರೆಲ್‌, ಪಾದರಕ್ಷೆ, ಫ್ಯಾಷನ್‌ ಆಕ್ಸೆಸರೀಸ್‌, ಕಾಸ್ಮೆಟಿಕ್ಸ್‌ ವಲಯದಲ್ಲಿ ಆನ್‌ಲೈನ್‌ ವಹಿವಾಟು ಗಣನೀಯವಾಗಿ ವೃದ್ಧಿಸುತ್ತಿದೆ ಎಂದು ಕಿಯಾರ್ನೆ ಪಾರ್ಟ್ನರ್‌ನ ಸಿದ್ಧಾರ್ಥ್‌ ಜೈನ್‌ ತಿಳಿಸಿದ್ದಾರೆ.