'ಸಂಪೂರ್ಣ' ಅನ್‌ಲಾಕ್‌ಗೆ ಮುನ್ನವೇ ಬೆಂಗಳೂರಲ್ಲಿ ಸಂಭ್ರಮ..! ವೀಕೆಂಡ್ ಕರ್ಫ್ಯೂ ಫ್ಲಾಪ್..?

ಮಾಸ್ಕ್ ಹಾಗೂ ಸಾಮಾಜಿಕ ಅಂತರಗಳನ್ನು ಜನರು ಗಾಳಿಗೆ ​​ತೂರುತ್ತಿದ್ದಾರೆ. ಲಸಿಕೆಗಾಗಿ ಸೇರುವ ಸಾವಿರಾರು ಮಂದಿ ಯಾವುದೇ ಸಾಮಾಜಿಕ ಅಂತರ ಪಾಲಿಸದೆ ಗುಂಪು ಗೂಡುತ್ತಿದ್ದಾರೆ. ಲಸಿಕೆಗಾಗಿ ನೂಕುನುಗ್ಗಲು ಸೃಷ್ಟಿಯಾಗಿದೆ..!

'ಸಂಪೂರ್ಣ' ಅನ್‌ಲಾಕ್‌ಗೆ ಮುನ್ನವೇ ಬೆಂಗಳೂರಲ್ಲಿ ಸಂಭ್ರಮ..! ವೀಕೆಂಡ್ ಕರ್ಫ್ಯೂ ಫ್ಲಾಪ್..?
Linkup
: ಸೋಮವಾರದಿಂದ ರಾಜಧಾನಿ ಸೇರಿದಂತೆ ಬಹುತೇಕ ಜಿಲ್ಲೆಗಳು ಸಂಪೂರ್ಣ ಅನ್‌ಲಾಕ್‌ನತ್ತ ಜಾರಲಿವೆ. ಆದ್ರೆ, ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಇದ್ದರೂ ಕೂಡಾ ಜನಸಂಚಾರ, ವ್ಯಾಪಾರ ವಹಿವಾಟು ಎಂದಿನಂತೆಯೇ ಇತ್ತು..! ಹೊಸ ರೂಲ್ಸ್‌ ಏನು..? ಜುಲೈ 5ರಿಂದ ಬೆಳಗ್ಗೆ 5 ರಿಂದ ರಾತ್ರಿ 9ರವರೆಗೂ ಎಲ್ಲಾ ಚಟುವಟಿಕೆಗಳಿಗೂ ಅವಕಾಶ ಇದೆ. ಥಿಯೇಟರ್, ಪಬ್, ಶಾಲೆ, ಸಭೆ-ಸಮಾರಂಭ ಬಿಟ್ಟರೆ ಎಲ್ಲವೂ ..! ವೀಕೆಂಡ್ ಕರ್ಫ್ಯೂ ಕೂಡಾ ಜುಲೈ 4 ಭಾನುವಾರಕ್ಕೇ ಅಂತ್ಯ. ಮುಂದಿನ ವೀಕೆಂಡ್‌ಗಳಲ್ಲಿ ಯಾವುದೇ ಕರ್ಫ್ಯೂ ಇರೋದಿಲ್ಲ. ಹಾಗೆ ನೋಡಿದ್ರೆ ಜುಲೈ 4 ಭಾನುವಾರ ವೀಕೆಂಡ್ ಕರ್ಫ್ಯೂನ ಕೊನೆಯ ದಿನ..! ಆದ್ರೆ, ಬೆಂಗಳೂರು ನಗರದಲ್ಲಿ ಎಲ್ಲಿಯೂ ಕೂಡಾ ವೀಕೆಂಡ್ ಕರ್ಫ್ಯೂ ಸುಳಿವೇ ಇರಲಿಲ್ಲ..! ವಾಹನಗಳ ಸಂಚಾರ ಎಂದಿನಂತೆಯೇ ಇತ್ತು. ಸಾಮಾನ್ಯ ಭಾನುವಾರಗಳಲ್ಲಿ ಇದ್ದಷ್ಟೇ ಟ್ರಾಫಿಕ್ ವೀಕೆಂಡ್ ಕರ್ಫ್ಯೂ ದಿನವೂ ಕಂಡು ಬಂತು.. ಹೊಟೇಲ್‌ಗಳು, ಅಂಗಡಿ ಮಳಿಗೆಗಳು ಎಂದಿನಂತೆಯೇ ತೆರೆದಿದ್ದವು. ಪೊಲೀಸರೂ ಕೂಡಾ ಜನರನ್ನು ನಿಯಂತ್ರಿಸಲು ಸಾಧ್ಯವಾಗದೆ ಸುಸ್ತಾದವರಂತೆ ಕಂಡುಬಂದರು. ಇನ್ನು ಸೋಮವಾರದಿಂದ ಮಾಲ್‌ಗಳು, ದೇಗುಲಗಳೂ ತೆರೆಯುವ ಕಾರಣ, ಜನರನ್ನು ಕಂಟ್ರೋಲ್ ಮಾಡೋದೇ ಕಷ್ಟವಾಗಬಹುದು. ವೀಕೆಂಡ್ ಕರ್ಫ್ಯೂ ಇರುವಾಗಲೇ ಇಷ್ಟೊಂದು ಜನದಟ್ಟಣೆ ಇರುವಾಗ 'ಅನ್‌ಲಾಕ್' ವೇಳೆ ಬೆಂಗಳೂರು ಮೊದಲಿನಂತಾಗದೆ ಇರೋದಿಲ್ಲ..! ಎಂದಿನ ಜನಜಂಗುಳಿಯ ಬೆಂಗಳೂರು ಮೊದಲಿನಂತೆಯೇ ಇರಬೇಕು ಅನ್ನೋದು ಎಲ್ಲರ ಇಚ್ಛೆ..! ಆದ್ರೆ, ಕೋವಿಡ್ ಬಿಡಬೇಕಲ್ಲಾ..! ಹೊಸ ಪ್ರಕರಣಗಳು ಇಂದಿಗೂ ಪ್ರತಿದಿನ 2 ಸಾವಿರದಷ್ಟು ವರದಿಯಾಗುತ್ತಿವೆ. ಕೊರೊನಾ ಡೆಲ್ಟಾ ಪ್ಲಸ್‌ನಿಂದ 3ನೇ ಅಲೆಯ ಭೀತಿಯೂ ಇದೆ..! ಹೀಗಿರುವಾಗ ಅನ್‌ಲಾಕ್ ವೇಳೆಯೂ ಜನರು ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಮಾಡಬೇಕಾದ್ದು ಕಡ್ಡಾಯ.. ಆದ್ರೆ, ಮಾಸ್ಕ್ ಹಾಗೂ ಸಾಮಾಜಿಕ ಅಂತರಗಳನ್ನು ಜನರು ಗಾಳಿಗೆ ತೂರುತ್ತಿದ್ದಾರೆ. ಲಸಿಕೆಗಾಗಿ ಸೇರುವ ಸಾವಿರಾರು ಮಂದಿ ಯಾವುದೇ ಸಾಮಾಜಿಕ ಅಂತರ ಪಾಲಿಸದೆ ಗುಂಪು ಗೂಡುತ್ತಿದ್ದಾರೆ. ಲಸಿಕೆಗಾಗಿ ನೂಕುನುಗ್ಗಲು ಸೃಷ್ಟಿಯಾಗಿರುವ ಇಂಥಾ ಸನ್ನಿವೇಶದಲ್ಲಿ ಲಸಿಕಾ ಕೇಂದ್ರಗಳೇ ಕೋವಿಡ್ ಹಂಚಿಕಾ ಕೇಂದ್ರಗಳಾಬಹುದೇ ಎಂಬ ಆತಂಕವೂ ಸೃಷ್ಟಿಯಾಗಿದೆ..!