ಸೆನ್ಸೆಕ್ಸ್‌ 678 ಅಂಕ ಪತನ, ಷೇರು ಪೇಟೆಯಲ್ಲಿ ಸತತ ಎರಡನೇ ದಿನ ಭಾರಿ ಸೂಚ್ಯಂಕ ಕುಸಿತ

ಸೆನ್ಸೆಕ್ಸ್‌ ಶುಕ್ರವಾರ 678 ಅಂಕ ಪತನಕ್ಕೀಡಾಗಿ 59,306 ಅಂಕಗಳಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಈ ಮೂಲಕ ಕೇವಲ ಎರಡು ದಿನಗಳ ಅಂತರದಲ್ಲಿ 1,837 ಅಂಕ ಪತನಕ್ಕೀಡಾಯಿತು. ನಿಫ್ಟಿ 185 ಅಂಕ ಕಳೆದುಕೊಂಡು 17,671ಕ್ಕೆ ಸ್ಥಿರವಾಯಿತು.

ಸೆನ್ಸೆಕ್ಸ್‌ 678 ಅಂಕ ಪತನ, ಷೇರು ಪೇಟೆಯಲ್ಲಿ ಸತತ ಎರಡನೇ ದಿನ ಭಾರಿ ಸೂಚ್ಯಂಕ ಕುಸಿತ
Linkup
ಮುಂಬಯಿ: ಬಾಂಬೆ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಶುಕ್ರವಾರ 678 ಅಂಕ ಪತನಕ್ಕೀಡಾಯಿತು. ಸೂಚ್ಯಂಕ 59,306ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. 185 ಅಂಕ ಕಳೆದುಕೊಂಡು 17,671ಕ್ಕೆ ಸ್ಥಿರವಾಯಿತು. ರಿಲಯನ್ಸ್‌ ಇಂಡಸ್ಟ್ರೀಸ್‌, ಇನ್ಫೋಸಿಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಟೆಕ್‌ ಮಹೀಂದ್ರಾ, ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಷೇರುಗಳು ಭಾರಿ ನಷ್ಟಕ್ಕೀಡಾದವು. ಮತ್ತೊಂದು ಕಡೆ ಅಲ್ಟ್ರಾಟೆಕ್‌ ಸಿಮೆಂಟ್‌, ಮಾರುತಿ, ಟೈಟನ್‌, ಡಾ. ರೆಡ್ಡೀಸ್‌ ಷೇರು ದರ ಕುಸಿಯಿತು. ಈ ನಡುವೆ ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಶುಕ್ರವಾರ 83.85 ಡಾಲರ್‌ಗೆ ಕುಸಿಯಿತು. ಈ ಮೂಲಕ ಸತತ ಎರಡನೇ ದಿನ ಕಚ್ಚಾ ತೈಲ ದರ ಇಳಿಕೆಯಾದಂತಾಗಿದೆ. ಸೆನ್ಸೆಕ್ಸ್‌ ಗುರುವಾರ ಒಂದೇ ದಿನ 1,159 ಅಂಕಗಳ ಭಾರಿ ಕುಸಿತಕ್ಕೀಡಾಗಿತ್ತು. ಇದು ಕಳೆದ ಏಪ್ರಿಲ್‌ 12ರ ನಂತರದ ಬೃಹತ್‌ ಕುಸಿತ ಇದಾಗಿತ್ತು. ಇದೀಗ ಶುಕ್ರವಾರವೂ 678 ಅಂಕ ಕಳೆದುಕೊಂಡಿದ್ದು, ಕೇವಲ ಎರಡು ದಿನಗಳ ಅಂತರದಲ್ಲಿ 1,837 ಅಂಕ ಪತನಕ್ಕೀಡಾಯಿತು. ಕಳೆದ ಜುಲೈ - ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಹಲವು ಕಂಪನಿಗಳು ನಿರೀಕ್ಷೆಗಿಂತ ಕಡಿಮೆ ನಿವ್ವಳ ಲಾಭ ಗಳಿಸಿದ ಹಿನ್ನೆಲೆಯಲ್ಲಿ ಹೂಡಿಕೆದಾರರು ಉತ್ಸಾಹ ಕಳೆದುಕೊಂಡಿರುವುದು ಹಾಗೂ ಕೆಲ ದಿನಗಳಿಂದೀಚೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತೀಯ ಷೇರು ಪೇಟೆಯಿಂದ ತಮ್ಮ ಹೂಡಿಕೆ ಹಿಂತೆಗೆದುಕೊಳ್ಳುತ್ತಿರುವುದು ಈ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಹೂಡಿಕೆದಾರರು ಗುರುವಾರ ಸುಮಾರು 4.5 ಲಕ್ಷ ಕೋಟಿ ರೂ.ಗಳನ್ನು ಕಳೆದುಕೊಂಡರು. ಶುಕ್ರವಾರವೂ ತೀವ್ರ ನಷ್ಟ ಅನುಭವಿಸಿದರು. ಏಷ್ಯಾದ ಇತರ ಪ್ರಮುಖ ಷೇರು ಮಾರುಕಟ್ಟೆಗಳೂ ಶುಕ್ರವಾರ ಕೂಡ ಕುಸಿತ ಕಂಡವು. ಶಾಂಘೈ, ಹಾಂಕಾಂಗ್‌, ಸಿಯೋಲ್‌ ಮತ್ತು ಟೋಕಿಯೊ ಷೇರು ಮಾರುಕಟ್ಟೆ ಸೂಚ್ಯಂಕಗಳು ಇಳಿಕೆ ದಾಖಲಿಸಿದವು. ಯುರೋಪ್‌ನಲ್ಲಿಯೂ ಸೂಚ್ಯಂಕಗಳು ಕೆಳಗೆ ಇಳಿಯಿತು.