ಸೆಂಟ್ರಲ್ ವಿಸ್ಟಾ ಯೋಜನೆ ವಿರುದ್ಧದ ಅರ್ಜಿ ಕಾನೂನು ಪ್ರಕ್ರಿಯೆಯ ದುರುಪಯೋಗ: ಕೇಂದ್ರ ಸರ್ಕಾರ

ದೆಹಲಿಯಲ್ಲಿ ನಡೆಯುತ್ತಿರುವ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ವಿರೋಧ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ, ಈ ಅರ್ಜಿಯು ಕಾನೂನು ಪ್ರಕ್ರಿಯೆಯ ನಿಂದನೆಯಾಗಿದೆ ಎಂದು ಹೇಳಿದೆ.

ಸೆಂಟ್ರಲ್ ವಿಸ್ಟಾ ಯೋಜನೆ ವಿರುದ್ಧದ ಅರ್ಜಿ ಕಾನೂನು ಪ್ರಕ್ರಿಯೆಯ ದುರುಪಯೋಗ: ಕೇಂದ್ರ ಸರ್ಕಾರ
Linkup
ಹೊಸದಿಲ್ಲಿ: ಸೆಂಟ್ರಲ್ ವಿಸ್ಟಾ ಯೋಜನೆ ವಿರುದ್ಧ ಸಲ್ಲಿಸಿರುವ ಅರ್ಜಿಯು ಕಾನೂನು ಪ್ರಕ್ರಿಯೆ ಸಂಪೂರ್ಣ ದುರುಪಯೋಗ ಮತ್ತು ಯೋಜನೆಗೆ ಅಡ್ಡಿಪಡಿಸುವ ಮತ್ತೊಂದು ಪ್ರಯತ್ನವಾಗಿದೆ ಎಂದು ಎದುರು ವಾದಿಸಿರುವ , ಆ ಅರ್ಜಿಯನ್ನು ದಂಡದೊಂದಿಗೆ ವಜಾಗೊಳಿಸಬೇಕು ಎಂದು ಮನವಿ ಮಾಡಿದೆ. ದೆಹಲಿಯಲ್ಲಿ ಲಾಕ್‌ಡೌನ್ ವೇಳೆ ನಿರ್ಮಾಣ ಚಟುವಟಿಕೆಗಳು ನಡೆಯಬೇಕಾದರೆ ಕೆಲಸಗಾರರು ಸ್ಥಳದಲ್ಲಿಯೇ ವಾಸಿಸಬೇಕು ಎಂಬ ನಿಯಮವಿದೆ. ಆದರೆ ಇಲ್ಲಿ ಆ ನಿಯಮ ಪಾಲನೆಯಾಗುತ್ತಿಲ್ಲ ಎಂಬ ಆರೋಪಗಳನ್ನು ಸರ್ಕಾರ ತಳ್ಳಿಹಾಕಿದೆ. ಸೆಂಟ್ರಲ್ ವಿಸ್ಟಾ ಯೋಜನೆಗಾಗಿ ಕೆಲಸ ಮಾಡುತ್ತಿರುವ ನೂರಾರು ಕಾರ್ಮಿಕರು ಕೋವಿಡ್ ಸೋಂಕಿಗೆ ಒಳಗಾಗಿರುವುದರಿಂದ ಅದನ್ನು ಮೊಟಕುಗೊಳಿಸಬೇಕು ಎಂದು ಅನ್ಯಾ ಮಲ್ಹೋತ್ರಾ ಮತ್ತು ಸೊಹೈಲ್ ಹಶ್ಮಿ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಉಲ್ಲೇಖಿಸಿರುವಂತೆ ಯೋಜನೆಯು '' (ಸಂಸತ್, ನಾರ್ತ್ ಬ್ಲಾಕ್, ಸೌತ್ ಬ್ಲಾಕ್‌ಗಳ ನವೀಕರಣ, ಕೇಂದ್ರ ಸರ್ಕಾರದ ಹೊಸ ಕಚೇರಿಗಳ ನಿರ್ಮಾಣ) ಅಲ್ಲ. ಆದರೆ ಇದು ಗಣರಾಜ್ಯೋತ್ಸವ ಪಥಸಂಚಲನ ನಡೆಯುವ ಸೆಂಟ್ರಲ್ ವಿಸ್ಟಾ ಮಾರ್ಗ ಅಥವಾ ರಾಜಪಥದ ಮರು ಅಭಿವೃದ್ಧಿಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ರಾಜಪಥದಲ್ಲಿನ ಯೋಜನೆಯು ಶೌಚಗೃಹಗಳು, ಪಾದಚಾರಿ ಮಾರ್ಗ, ಪಾರ್ಕಿಂಗ್ ಸ್ಥಳಗಳು, ನಾಲ್ಕು ಪಾದಚಾರಿ ಅಂಡರ್ ಪಾಸ್‌ಗಳ ನಿರ್ಮಾಣ ಹಾಗೂ ಕಾಲುವೆಗಳು, ಸೇತುವೆಗಳು, ಹುಲ್ಲುಹಾಸುಗಳು ಮತ್ತು ಬೆಳಕಿನ ವ್ಯವಸ್ಥೆ ಮುಂತಾದವುಗಳ ಸುಧಾರಣೆಯಾಗಿದೆ. ಈ ಕಾಮಗಾರಿಯು ನವೆಂಬರ್ ವೇಳೆಗೆ ಮುಕ್ತಾಯವಾಗಬೇಕಿದೆ ಎಂದು ಅದು ತಿಳಿಸಿದೆ. ಕಾರ್ಮಿಕರು ಸ್ಥಳದಲ್ಲಿ ನೆಲೆಸಿಲ್ಲ ಎಂಬ ವಾದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ, ಏಪ್ರಿಲ್ 19ರ ನಿಷೇಧಾಜ್ಞೆಗೂ ಮುನ್ನ ಸುಮಾರು 400 ಕಾರ್ಮಿಕರನ್ನು ಕರೆತರಲಾಗಿತ್ತು. ಹೀಗಾಗಿ ಅವರ ವಾಸಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು. ಬೇರೆ ಜಾಗದಿಂದ ಕಾರ್ಮಿಕರು ಮತ್ತು ಸಾಮಗ್ರಿಗಳನ್ನು ರವಾನಿಸಲು ಮನವಿ ಸಲ್ಲಿಸಲಾಗಿತ್ತು ಎಂದು ವಿವರಿಸಿದೆ. ಅರ್ಜಿದಾರರು ಖುದ್ದು ವಾಸ್ತವಗಳನ್ನು ಪರಿಶೀಲಿಸಿಲ್ಲ. ವಿಭಿನ್ನ ಸಂಸ್ಥೆಗಳು ವಿಭಿನ್ನ ಪ್ರಾಜೆಕ್ಟ್‌ಗಳನ್ನು ಏಕಕಾಲದಲ್ಲಿ ನಡೆಸುತ್ತಿವೆ. ಆದರೆ ಅರ್ಜಿದಾರರು ಎಲ್ಲ ಕಾಮಗಾರಿಗಳೂ ಒಂದೇ ಯೋಜನೆ ಎಂದುಕೊಂಡು ಈ ಎಲ್ಲ ವಾಸ್ತವಗಳನ್ನು ಮುಚ್ಚಿಟ್ಟು ಅರ್ಜಿ ಸಲ್ಲಿಸಿದ್ದಾರೆ ಎಂದು ಕೇಂದ್ರ ಸರ್ಕಾರ ವಾದಿಸಿದೆ.