ಸಿಎಂ ಜಗನ್ ಜಾಮೀನು ರದ್ದುಗೊಳಿಸುವಂತೆ ಕೋರಿದ್ದ ಸಂಸದ ದೇಶದ್ರೋಹ ಪ್ರಕರಣದಲ್ಲಿ ಬಂಧನ

ಅಕ್ರಮ ಆಸ್ತಿ ಪ್ರಕರಣದಲ್ಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಗೆ ನೀಡಲಾಗಿರುವ ಜಾಮೀನನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದ, ಆಂಧ್ರಪ್ರದೇಶದ ವೈಎಸ್ಆರ್ ಕಾಂಗ್ರೆಸ್ ಸಂಸದ ರಘುರಾಮ ಕೃಷ್ಣನ್ ರಾಜು ಅವರನ್ನು ದೇಶದ್ರೋಹದ ಪ್ರಕರಣದಲ್ಲಿ ಬಂಧಿಸಲಾಗಿದೆ.

ಸಿಎಂ ಜಗನ್ ಜಾಮೀನು ರದ್ದುಗೊಳಿಸುವಂತೆ ಕೋರಿದ್ದ ಸಂಸದ ದೇಶದ್ರೋಹ ಪ್ರಕರಣದಲ್ಲಿ ಬಂಧನ
Linkup
ಹೈದರಾಬಾದ್: ಆರೋಪದಲ್ಲಿ ನರಸಾಪುರಂ ಕ್ಷೇತ್ರದ ಸಂಸದ ಕಾನುಮುರಿ ಅವರನ್ನು ಸಿಐಡಿ ಶುಕ್ರವಾರ ಬಂಧಿಸಿದೆ. ವೈಎಸ್ಆರ್ ಕಾಂಗ್ರೆಸ್‌ನಲ್ಲಿ ಬಂಡಾಯವೆದ್ದಿರುವ ರಾಜು ಅವರು, ತಮ್ಮ ನಾಯಕ ಹಾಗೂ ಮುಖ್ಯಮಂತ್ರಿ ಅವರಿಗೆ ಅಕ್ರಮ ಆಸ್ತಿ ಪ್ರಕರಣದಲ್ಲಿ ನೀಡಿರುವ ಜಾಮೀನನ್ನು ರದ್ದುಗೊಳಿಸುವಂತೆ ಕಳೆದ ವಾರ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ರಾಜ್ಯ ಸರ್ಕಾರದ ಘನತೆಗೆ ಹಾನಿ ಮಾಡುವ ರೀತಿ ವರ್ತಿಸಿದ ಆರೋಪದಲ್ಲಿ ರಾಜು ಅವರನ್ನು ಹೈದರಾಬಾದ್‌ನಲ್ಲಿನ ನಿವಾಸದಿಂದ ಬಂಧಿಸಲಾಗಿದೆ. ಜಗನ್ ರೆಡ್ಡಿ ಸರ್ಕಾರದ ವಿರುದ್ಧ 59 ವರ್ಷದ ರಾಜು, ಭ್ರಷ್ಟಾಚಾರದ ಆರೋಪ ಮಾಡಿದ್ದರು. 124 ಎ (ದೇಶದ್ರೋಹ), 153ಎ (ವಿಭಿನ್ನ ಗುಂಪುಗಳ ನಡುವೆ ವೈರತ್ವಮೂಡಿಸುವುದು ಮತ್ತು 505 (ಸಾರ್ವಜನಿಕ ದುರ್ವರ್ತನೆ ತೋರುವುದು) ಪ್ರಕರಣಗಳನ್ನು ಅವರ ವಿರುದ್ಧ ದಾಖಲಿಸಲಾಗಿದೆ. 'ರಾಜು ಅವರು ನಿರ್ದಿಷ್ಟ ಸಮುದಾಯಗಳ ವಿರುದ್ಧ ದ್ವೇಷ ಭಾಷಣಗಳನ್ನು ಮಾಡುತ್ತಿರುವುದಕ್ಕೆ ಹಾಗೂ ಸರ್ಕಾರದ ವಿರುದ್ಧ ಅಸಮಾಧಾನವನ್ನು ಪ್ರಚಾರ ಮಾಡುತ್ತಿರುವುದರ ಮಾಹಿತಿ ಬಂದಿತ್ತು' ಎಂದು ಬಂಧನದ ಬಳಿಕ ಪೊಲೀಸರು ಹೇಳಿದ್ದಾರೆ. 2012ರಲ್ಲಿ ಅಕ್ರಮ ಆಸ್ತಿ ಪ್ರಕರಣದಲ್ಲಿ ಜಗನ್ ರೆಡ್ಡಿಗೆ ನೀಡಲಾಗಿರುವ ಜಾಮೀನನ್ನು ರದ್ದುಗೊಳಿಸುವಂತೆ ಏಪ್ರಿಲ್ 27ರಂದು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ರಾಜು ಮನವಿ ಮಾಡಿದ್ದರು. ಜಾಮೀನಿನ ನಿಯಮಗಳನ್ನು ಮುಖ್ಯಮಂತ್ರಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ವೈಎಸ್ಆರ್ ಕಾಂಗ್ರೆಸ್‌ಅನ್ನು ಹಲವು ವರ್ಷಗಳ ಹಿಂದೆ ತೊರೆದಿದ್ದ ರಾಜು, 2019ರ ಲೋಕಸಭೆ ಚುನಾವಣೆಗೂ ಮುನ್ನವಷ್ಟೇ ಪಕ್ಷಕ್ಕೆ ಮರಳಿದ್ದರು. ಈ ನಡುವೆ ಅವರು ಬಿಜೆಪಿ ಹಾಗೂ ಟಿಡಿಪಿಯನ್ನು ಸೇರಿದ್ದರು.