ತೆಲಂಗಾಣದಲ್ಲಿ ಒಂದು ವಾರ 'ಸಂಕ್ರಾಂತಿ ರಜೆ': ಕೋವಿಡ್ ಹಿನ್ನೆಲೆ ಶಾಲೆ ಕಾಲೇಜುಗಳು ಬಂದ್

ಕೊರೊನಾ ವೈರಸ್ ಪ್ರಕರಣಗಳ ಏರಿಕೆಯ ಹಿನ್ನೆಲೆಯಲ್ಲಿ ತೆಲಂಗಾಣದಲ್ಲಿ ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೆ ಜನವರಿ 8 ರಿಂದ 16ರವರೆಗೆ 'ಸಂಕ್ರಾಂತಿ ರಜೆ' ಘೋಷಿಸಲಾಗಿದೆ. ಆದರೆ ಪ್ರಸ್ತುತದ ಸನ್ನಿವೇಶದಲ್ಲಿ ಲಾಕ್‌ಡೌನ್ ಅಥವಾ ನೈಟ್ ಕರ್ಫ್ಯೂ ಅಗತ್ಯ ಇಲ್ಲ ಎಂದು ಸಿಎಂ ಕೆ ಚಂದ್ರಶೇಖರ್ ರಾವ್ ಹೇಳಿದ್ದಾರೆ.

ತೆಲಂಗಾಣದಲ್ಲಿ ಒಂದು ವಾರ 'ಸಂಕ್ರಾಂತಿ ರಜೆ': ಕೋವಿಡ್ ಹಿನ್ನೆಲೆ ಶಾಲೆ ಕಾಲೇಜುಗಳು ಬಂದ್
Linkup
ಹೈದರಾಬಾದ್: ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವುದರಿಂದ ಸರ್ಕಾರ ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೂ ಜನವರಿ 8 ರಿಂದ 16ರವರೆಗೆ ಸಂಕ್ರಾಂತಿ ರಜೆ ಘೋಷಿಸಿದೆ. ಸೋಂಕಿನ ದಿಢೀರ್ ಏರಿಕೆಯ ಮಧ್ಯೆ ಮುಖ್ಯಮಂತ್ರಿ ಕೆ ಅವರು ರಾಜ್ಯದಲ್ಲಿನ ಕೊರೊನಾ ಸ್ಥಿತಿಗತಿಗಳ ಬಗ್ಗೆ ಸೋಮವಾರ ನಡೆಸಿದ ಪರಾಮರ್ಶನಾ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ರಾಜ್ಯದಲ್ಲಿನ ಪ್ರಸ್ತುತದ ಸನ್ನಿವೇಶದಲ್ಲಿ ಲಾಕ್‌ಡೌನ್ ಅಥವಾ ನೈಟ್ ಕರ್ಫ್ಯೂದಂತಹ ಕಠಿಣ ಕ್ರಮದ ಅಗತ್ಯ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿನ ಆರೋಗ್ಯ ಮೂಲಸೌಕರ್ಯಗಳನ್ನು ಕೂಡಲೇ ಬಲಪಡಿಸಲು ತಕ್ಷಣದ ಕ್ರಮಗಳನ್ನು ಕೈಗೊಳ್ಳುವಂತೆ ಕೆಸಿಆರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ತಳಿ ಕೋವಿಡ್ 19 ಪ್ರಕರಣಗಳಲ್ಲಿ ಹೆಚ್ಚಳ ಆಗುತ್ತಿರುವುದರ ಬಗ್ಗೆ ಜನರು ಚಿಂತೆ ಪಡುವ ಅಗತ್ಯವಿಲ್ಲ. ಆದರೆ ಅವರು ಎಚ್ಚರದಿಂದ ಇರಬೇಕು ಮತ್ತು ಸರ್ಕಾರ ಹೊರಡಿಸಿರುವ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದು ಅವರು ಸೂಚನೆ ನೀಡಿದ್ದಾರೆ. ಪ್ರಸ್ತುತ ಇರುವ 324 ಟನ್‌ಗಳಿಂದ 500 ಟನ್‌ಗಳಿಗೆ ಆಕ್ಸಿಜನ್ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಮುಂದಕ್ಕೆ ಬರಬಹುದಾದ ವಿಪರೀತ ಬೇಡಿಕೆಯನ್ನು ಈಡೇರಿಸಲು ಸನ್ನದ್ಧಗೊಳ್ಳಬೇಕು. ಜತೆಗೆ 20 ಲಕ್ಷ ಇರುವ ಕೋವಿಡ್ ಐಸೋಲೇಷನ್ ಕಿಟ್‌ಗಳನ್ನು ಒಂದು ಕೋಟಿಗೆ ಹೆಚ್ಚಿಸಬೇಕು ಹಾಗೂ ಎರಡು ಕೋಟಿ ಪರೀಕ್ಷಾ ಕಿಟ್‌ಗಳನ್ನು ಸಿದ್ಧಗೊಳಿಸಿ ಇರಬೇಕು. ಸಾಕಷ್ಟು ಸಂಖ್ಯೆಯಲ್ಲಿ ವೈದ್ಯರ ಲಭ್ಯತೆ ಬಗ್ಗೆ ಖಾತರಿವಹಿಸಬೇಕು ಮತ್ತು ಖಾಲಿ ಇರುವ ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡಬೇಕು ಎಂದೂ ಅವರು ಆದೇಶಿಸಿದ್ದಾರೆ. ರಾಜ್ಯದಲ್ಲಿ ಕೋವಿಡ್ ಸನ್ನಿವೇಶ ನಿಯಂತ್ರಣದಲ್ಲಿ ಇದೆ. ಹೀಗಾಗಿ ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿಗಳ ಪ್ರಕಾರ ಈಗ ಲಾಕ್‌ಡೌನ್ ವಿಧಿಸುವ ಅಗತ್ಯ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳಲ್ಲಿ ಶೇ 99ರಷ್ಟನ್ನು ಆಕ್ಸಿಜನ್ ಬೆಡ್‌ಗಳನ್ನಾಗಿ ಪರಿವರ್ತಿಸಲಾಗಿದೆ. ಇನ್ನು ಉಳಿದ ಶೇ 1ರಷ್ಟು ಕೂಡ ಕೂಡಲೇ ಪರಿವರ್ತನೆ ಮಾಡಬೇಕು ಎಂದು ಸೂಚಿಸಿದ್ದಾರೆ. ಎಲ್ಲ ಪಾಲಿಕೆ ವ್ಯಾಪ್ತಿಗಳಲ್ಲಿಯೂ ಇನ್ನಷ್ಟು ಬಸ್ತಿ ದವಾಖಾನೆಗಳನ್ನು ಸ್ಥಾಪಿಸಬೇಕು. ನಗರ ಹಾಗೂ ಪಾಲಿಕೆಗಳಲ್ಲಿ ದವಾಖಾನೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಕೆ. ಚಂದ್ರಶೇಖರ್ ರಾವ್ ಸೂಚನೆ ನೀಡಿದ್ದಾರೆ.