ಶಾಹೀನ್ ಚಂಡಮಾರುತದಿಂದಾಗಿ ಏಳು ರಾಜ್ಯಗಳಲ್ಲಿ ಭಾರೀ ಮಳೆ: ಐಎಂಡಿ

ಶಾಹೀನ್ ಚಂಡಮಾರುತದಿಂದಾಗಿ ಭಾರತದ ಏಳು ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಮುಂದಿನ 24 ಗಂಟೆಗಳಲ್ಲಿ ಚಂಡಮಾರುತ ತೀವ್ರ ಸ್ವರೂಪ ತಾಳುವ ನಿರೀಕ್ಷೆಯಿದೆ ಎಂದು ತಿಳಿಸಿದೆ.

ಶಾಹೀನ್ ಚಂಡಮಾರುತದಿಂದಾಗಿ ಏಳು ರಾಜ್ಯಗಳಲ್ಲಿ ಭಾರೀ ಮಳೆ: ಐಎಂಡಿ
Linkup
ಹೊಸದಿಲ್ಲಿ: ಶಾಹೀನ್ ಚಂಡಮಾರುತದಿಂದಾಗಿ ಭಾರತದ ಏಳು ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ () ಮುನ್ಸೂಚನೆ ನೀಡಿದೆ. ಮುಂದಿನ 24 ಗಂಟೆಗಳಲ್ಲಿ ಚಂಡಮಾರುತ ತೀವ್ರ ಸ್ವರೂಪ ತಾಳುವ ನಿರೀಕ್ಷೆಯಿದೆ ಎಂದು ತಿಳಿಸಿದೆ. ಗುಲಾಬ್ ಚಂಡಮಾರುತದ ಬೆನ್ನಲ್ಲೇ ಶಾಹೀನ್ ಚಂಡಮಾರುತದ ಭೀತಿ ಉಂಟಾಗಿದ್ದು, ಶೀಘ್ರದಲ್ಲೇ ಗುಜರಾತ್ ಕರಾವಳಿಗೆ () ಅಪ್ಪಳಿಸುವ ಸಾಧ್ಯತೆಯಿದೆ. ಶಾಹೀನ್ ಚಂಡಮಾರುತವು ಈಶಾನ್ಯ ಅರಬ್ಬಿ ಸಮುದ್ರ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ತೀವ್ರಗೊಂಡಿದೆ ಎಂದು ವರದಿಯಾಗಿದೆ. ಚಂಡಮಾರುತದ ಬಿಕ್ಕಟ್ಟಿನ ದೃಷ್ಟಿಯಿಂದ, ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾಗಿರುವ ಗುಜರಾತ್ ಸರ್ಕಾರ ಈ ಕುರಿತಂತೆ ಅಧಿಕಾರಿಗಳು ಮತ್ತು NDRF ತಂಡದೊಂದಿಗೆ ಸಭೆ ನಡೆಸಿದೇ. ಅದೇ ಸಮಯದಲ್ಲಿ, ಹವಾಮಾನ ಇಲಾಖೆ ಕೂಡ ಗುಜರಾತ್‌ನಲ್ಲಿ 3 ದಿನಗಳ ಕಾಲ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ. ಗಾಳಿಯು ಗುಜರಾತಿನ ಕರಾವಳಿ ಪ್ರದೇಶಗಳಲ್ಲಿ ಗಂಟೆಗೆ 60-150 ಕಿಮೀ ವೇಗದಲ್ಲಿ ಚಲಿಸಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪೀಡಿತ ಪ್ರದೇಶಗಳಲ್ಲಿ ಅಲರ್ಟ್: ಗುಜರಾತ್ (Gujarat) ಕರಾವಳಿಗೆ ಶಾಹೀನ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂದು ಗುಜರಾತ್‌ನ ಎಲ್ಲಾ ಜಿಲ್ಲೆಗಳಲ್ಲಿ ಆಡಳಿತವನ್ನು ಅಲರ್ಟ್ ಆಗಿರುವಂತೆ ಸೂಚಿಸಲಾಗಿದೆ. ಅದೇ ಸಮಯದಲ್ಲಿ, NDRF ಮತ್ತು SDRF ತಂಡಗಳು 17 ಜಿಲ್ಲೆಗಳಲ್ಲಿ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿವೆ. ಮೀನುಗಾರರು ಅರಬ್ಬಿ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅದೇ ಸಮಯದಲ್ಲಿ, ಅಕ್ಟೋಬರ್ 2 ರವರೆಗೆ ಮೀನುಗಾರಿಕೆ ಮತ್ತು ಯಾವುದೇ ರೀತಿಯ ಸಮುದ್ರ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಶಾಹೀನ್ ಚಂಡಮಾರುತದ ಹಿನ್ನಲೆಯಲ್ಲಿ ಮುಂದಿನ ಎರಡು ದಿನಗಳಲ್ಲಿ ಅಮ್ರೇಲಿ, ಭವಾನಗರ, ರಾಜ್‌ಕೋಟ್, ಆನಂದ್ ಮತ್ತು ಭರೂಚ್ ಮತ್ತು ಸೌರಾಷ್ಟ್ರ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂತಹ ಪರಿಸ್ಥಿತಿಯಲ್ಲಿ, ಚಂಡಮಾರುತವು ವಾಯುವ್ಯದಲ್ಲಿರುವ ಪಾಕಿಸ್ತಾನ- ಮಕ್ರಾನ್ ಕರಾವಳಿಯ ಕಡೆಗೆ ಚಲಿಸಲಿದೆ. ಮತ್ತು ಭಾರತೀಯ ಕರಾವಳಿಯಿಂದ ದೂರ ಹೋಗುವ ಸಾಧ್ಯತೆಯಿದೆ. ಈ ಚಂಡಮಾರುತವು ಅರೇಬಿಯನ್ ಸಮುದ್ರದಲ್ಲಿ ಕ್ರಮೇಣ ಪಶ್ಚಿಮಕ್ಕೆ ಚಲಿಸುತ್ತದೆ ಎಂದು ತಿಳಿದುಬಂದಿದೆ. ಇದು ಪಾಕಿಸ್ತಾನದ ಕರಾವಳಿಗೆ ಸಮಾನಾಂತರವಾಗಿ ಇರಾನ್‌ನ ಗಡಿ ಪ್ರದೇಶವನ್ನು ತಲುಪುತ್ತದೆ ಎಂದು ಊಹಿಸಲಾಗಿದೆ. ಶಾಹೀನ್ ಚಂಡಮಾರುತ ಹಿನ್ನೆಲೆಯಲ್ಲಿ ಐಎಂಡಿ ನೀಡಿರುವ ಎಚ್ಚರಿಕೆಗಳಿವು ಅಕ್ಟೋಬರ್ 1 ಮತ್ತು 2 ರಂದು ಬಿಹಾರ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಭಾರೀ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಬುಲೆಟಿನ್ ಮುನ್ಸೂಚನೆ ನೀಡಿದೆ. ಅಕ್ಟೋಬರ್ 1 ರಿಂದ ಭಾರತದಲ್ಲಿ ಚಟುವಟಿಕೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ, ಆ ಮೂಲಕ ತಮಿಳುನಾಡು, ಕೇರಳ, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕರ್ನಾಟಕದಲ್ಲಿ ಅಕ್ಟೋಬರ್ 1 ರಿಂದ 4 ರ ನಡುವೆ ಭಾರೀ ಮಳೆಯಾಗಲಿದೆ. ಅಕ್ಟೋಬರ್ 2 ಮತ್ತು 4 ರ ನಡುವೆ ಪ್ರತ್ಯೇಕ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತದೆ. ಮುಂದಿನ 12 ಗಂಟೆಗಳಲ್ಲಿ ಈಶಾನ್ಯ ಅರಬ್ಬಿ ಸಮುದ್ರ ಹಾಗೂ ಗುಜರಾತ್ ಕರಾವಳಿಯಲ್ಲಿ ಮೀನುಗಾರಿಕೆಗೆ ತೆರಳದಂತೆ ಐಎಂಡಿ ಮೀನುಗಾರರಿಗೆ ಎಚ್ಚರಿಕೆ ನೀಡಿದೆ. ಅಕ್ಟೋಬರ್ 4 ರ ಮುಂಜಾನೆಯವರೆಗೆ ಉತ್ತರ ಮತ್ತು ಪಕ್ಕದ ಮಧ್ಯ ಅರಬ್ಬಿ ಸಮುದ್ರ, ಪಾಕಿಸ್ತಾನ-ಮಕ್ರಾನ್ ಕರಾವಳಿಯಲ್ಲಿ ಮತ್ತು ಓಮನ್ ಕೊಲ್ಲಿಯಲ್ಲಿರುವ ಮೀನುಗಾರರಿಗೆ ಅದೇ ಎಚ್ಚರಿಕೆಯನ್ನು ನೀಡಲಾಗಿದೆ.