ಕ್ವಿಜ್‌ಗೆ ಉತ್ತರಿಸಿದರೆ ಉಚಿತ ಪ್ರಯಾಣ: ಪಶ್ಚಿಮ ಬಂಗಾಳ ಆಟೋ ಚಾಲಕನ ಕಾರ್ಯಕ್ಕೆ ಪ್ರಶಂಸೆ

ಪಶ್ಚಿಮ ಬಂಗಾಳದಲ್ಲೊಬ್ಬ ಆಟೋ ಚಾಲಕ ಜನರ ಸಾಮಾನ್ಯ ಜ್ಞಾನ ಹೆಚ್ಚಿಸಲು ಒತ್ತು ನೀಡುತ್ತಿದ್ದಾರೆ. ತಮ್ಮ ಆಟೋ ಹತ್ತುವ ಪ್ರಯಾಣಿಕರಿಗೆ 15 ಪ್ರಶ್ನೆ ಕೇಳುತ್ತಾರೆ. ಎಲ್ಲ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದರೆ, ಪ್ರಯಾಣ ವೆಚ್ಚ ಎಷ್ಟೇ ಆಗಿದ್ದರೂ ಅವರಿಂದ ಹಣ ಸ್ವೀಕರಿಸುವುದಿಲ್ಲ. ಇವರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಿಮಗೆ ಇದ್ಯಾ? ಇಲ್ಲಿದೆ ಈ ಅವರ ಬಗ್ಗೆಗ್ಗಿನ ಇಂಟ್ರೆಸ್ಟಿಂಗ್‌ ಕಹಾನಿ

ಕ್ವಿಜ್‌ಗೆ ಉತ್ತರಿಸಿದರೆ ಉಚಿತ ಪ್ರಯಾಣ: ಪಶ್ಚಿಮ ಬಂಗಾಳ ಆಟೋ ಚಾಲಕನ ಕಾರ್ಯಕ್ಕೆ ಪ್ರಶಂಸೆ
Linkup
ಕೋಲ್ಕೊತಾ: ಆಟೋ ಚಾಲಕರು ಗರ್ಭಿಣಿಯರಿಗೆ, ಕಷ್ಟದಲ್ಲಿರುವವರಿಗೆ ಉಚಿತವಾಗಿ 'ಆಟೋ ಸೇವೆ' ಮೂಲಕ ಸಾಮಾಜಿಕ ಕಳಕಳಿ, ಮಾನವೀಯತೆ ಮೆರೆಯುವುದನ್ನು ಕೇಳಿದ್ದೇವೆ. ಆದರೆ, ಪಶ್ಚಿಮ ಬಂಗಾಳದಲ್ಲೊಬ್ಬ ಜನರ ಸಾಮಾನ್ಯ ಜ್ಞಾನ ಹೆಚ್ಚಿಸಲು ಒತ್ತು ನೀಡುತ್ತಿದ್ದಾರೆ. ತಮ್ಮ ಆಟೋ ಹತ್ತುವ ಪ್ರಯಾಣಿಕರಿಗೆ 15 ಪ್ರಶ್ನೆ ಕೇಳುತ್ತಾರೆ. ಎಲ್ಲ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದರೆ, ಪ್ರಯಾಣ ವೆಚ್ಚ ಎಷ್ಟೇ ಆಗಿದ್ದರೂ ಅವರಿಂದ ಹಣ ಸ್ವೀಕರಿಸುವುದಿಲ್ಲ. ಹೌರಾ ಜಿಲ್ಲೆಯ ಲಿಲುವಾದಲ್ಲಿ ಇ-ಆಟೋ ಓಡಿಸುವ ಸುರಂಜನ್‌ ಕರ್ಮಾಕರ್‌ ' ಮಾಸ್ಟರ್‌' ಎಂದೇ ಪ್ರಯಾಣಿಕರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರ ಕುರಿತು ಸಂಕಲನ್‌ ಸರಕಾರ್‌ ಎಂಬುವವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ''ನಾನು ಹಾಗೂ ನನ್ನ ಪತ್ನಿ ಆಟೋ ಹತ್ತಿದಾಗ, 15 ಪ್ರಶ್ನೆ ಕೇಳುತ್ತೇನೆ. ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದರೆ ಬಾಡಿಗೆ ಪಡೆಯುವುದಿಲ್ಲಎಂದು ಸುರಂಜನ್‌ ಹೇಳಿದರು. ಮೊದಲಿಗೆ, ಹೆಚ್ಚಿನ ಬಾಡಿಗೆ ಹಣ ಬೇಕಾಗಿದೆ, ಅದಕ್ಕಾಗಿ ಇವರು ಇಂತಹ ಉಪಾಯ ಮಾಡಿದ್ದಾರೆ ಎನಿಸಿತು. ಅದರಲ್ಲೂ, ರಾಷ್ಟ್ರಗೀತೆ ರಚಿಸಿದವರು ಯಾರು ಎಂದು ಮೊದಲ ಪ್ರಶ್ನೆ ಕೇಳಿದಾಗ ಇನ್ನೂ ಅನುಮಾನ ಬಂತು. ಆದರೆ, ಬಳಿಕ ಅವರು ಕೇಳಿದ ಪ್ರಶ್ನೆ ಕೇಳಿ ಇದು ನಿಜವೆನಿಸಿತು,'' ಎಂದು ಸಂಕಲನ್‌ ವಿವರಿಸಿದ್ದಾರೆ. ''ಬಳಿಕ ಅವರು ಪಶ್ಚಿಮ ಬಂಗಾಳದ ಮೊದಲ ಮುಖ್ಯಮಂತ್ರಿ ಯಾರು ಎಂದು ಕೇಳಿದರು. ನಾನು ಬಿ.ಸಿ.ರಾಯ್‌ ಎಂದೆ. ಆದರೆ, ಉತ್ತರ ತಪ್ಪಾಗಿತ್ತು. ಬಳಿಕ ಅವರು ಕೇಳಿದ ಪ್ರಶ್ನೆ ಕೇಳಿ ದಂಗಾದೆ. ವಿಕ್ರಮ ಬೇತಾಳ, ಶ್ರೀದೇವಿ ಜನ್ಮದಿನ, ಜಗತ್ತಿನ ಮೊದಲ ಟೆಸ್ಟ್‌ ಟ್ಯೂಬ್‌ ಬೇಬಿಯಿಂದ ಹಿಡಿದು ಅವರು ಎಲ್ಲ ವಿಷಯಗಳ ಕುರಿತು ಪ್ರಶ್ನೆ ಕೇಳಿದರು. ನಾನು ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದೆ. ಬಳಿಕ ಅವರು ನಾನು ಹೇಳಿದ ಜಾಗದಲ್ಲಿಬಿಟ್ಟರು. ಸುರಂಜನ್‌ಗೆ ಓದುವ ಅಭ್ಯಾಸವಿದೆ. ಹಗಲಿಡೀ ದುಡಿದರೂ ರಾತ್ರಿ ಎರಡು ಗಂಟೆವರೆಗೂ ಓದುತ್ತಾರಂತೆ,'' ಎಂದು ಮಾಹಿತಿ ನೀಡಿದ್ದಾರೆ. ಸುರಂಜನ್‌ ಲಿಲುವಾ ಬುಕ್‌ ಫೇರ್‌ ಫೌಂಡೇಷನ್‌ನ ಸದಸ್ಯರೂ ಆಗಿದ್ದಾರೆ. ಎಲ್ಲರಿಗೂ ಉತ್ತಮ ಜ್ಞಾನ ಸಿಗಬೇಕು ಹಾಗೂ ವಿಷಯ ತಿಳಿದಿರಬೇಕು ಎನ್ನುವ ಉದ್ದೇಶದಿಂದ ಪಶ್ಚಿಮ ಬಂಗಾಳದ ಆಟೋ ಚಾಲಕ ಸುರಂಜನ್‌ ಕರ್ಮಾಕರ್‌ ಈ ರೀತಿ ಮಾಡುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ.