ಶಿರೂರು ಮಠದ ಪೀಠಾಧಿಪತಿ ನೇಮಕ ವಿಚಾರ ಕೋರ್ಟ್‌ ಅಂಗಳಕ್ಕೆ: ಭಕ್ತರ ಅಸಮಾಧಾನ

'ಶಿರೂರು ಮಠ ಮತ್ತು ಸೋಂದೆ ವಾದಿರಾಜ ಮಠ ದ್ವಂದ್ವ ಮಠವಾಗಿರುವುದರಿಂದ ಈ ಪ್ರಕ್ರಿಯೆ ನಡೆದಿದೆ. ಪರಂಪರೆಯಂತೆ ಎಲ್ಲವೂ ನಡೆದಿದೆ. ಇದೆಲ್ಲವನ್ನೂ ತಿಳಿದಿದ್ದರೂ ಅರ್ಜಿದಾರರು ದುರುದ್ದೇಶದಿಂದ ನ್ಯಾಯಾಲಯದ ಮೊರೆ ಹೋಗಿದ್ದಾರೆ' - ಭಕ್ತರ ವಾದ

ಶಿರೂರು ಮಠದ ಪೀಠಾಧಿಪತಿ ನೇಮಕ ವಿಚಾರ ಕೋರ್ಟ್‌ ಅಂಗಳಕ್ಕೆ: ಭಕ್ತರ ಅಸಮಾಧಾನ
Linkup
: ಶಿರೂರು ಮಠದ ಪೀಠಾಧಿಪತಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಪಿಐಎಲ್‌ ಹೂಡಿರುವುದಕ್ಕೆ ಮಠದ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಅರ್ಜಿದಾರರಾದ ಲಾತವ್ಯ ಆಚಾರ್ಯ, ಶ್ರೀನಿವಾಸ ಆಚಾರ್ಯ ಮತ್ತಿತರರು ಸ್ವಾರ್ಥ ಹಾಗೂ ದುರುದ್ದೇಶದಿಂದ ಸಾರ್ವಜನಿಕ ಹಿತಾಸಕ್ತಿ ಹೆಸರಿನಲ್ಲಿ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದ್ದು, ಇದನ್ನು ಖಂಡಿಸುತ್ತೇವೆ' ಎಂದು ಕೋಟೇಶ್ವರ ಮಾಗಣೆಯ ಶ್ರೀ ವಾದಿರಾಜ ಮಠದ ಭಕ್ತರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ' ಮತ್ತು ಸೋಂದೆ ವಾದಿರಾಜ ಮಠ ದ್ವಂದ್ವ ಮಠವಾಗಿರುವುದರಿಂದ ಈ ಪ್ರಕ್ರಿಯೆ ನಡೆದಿದೆ. ಪರಂಪರೆಯಂತೆ ಎಲ್ಲವೂ ನಡೆದಿದೆ. ಇದೆಲ್ಲವನ್ನೂ ತಿಳಿದಿದ್ದರೂ ಅರ್ಜಿದಾರರು ದುರುದ್ದೇಶದಿಂದ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದರಿಂದ ನಮ್ಮ ಸಮಾಜಕ್ಕೆ ದೊಡ್ಡ ಅವಮಾನವಾಗಿದೆ. ಹಾಗಾಗಿ ಅರ್ಜಿದಾರರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು' ಎಂದು ಭಕ್ತರು ಆಗ್ರಹಿಸಿದ್ದಾರೆ. ಉಡುಪಿಯ ಶಿರೂರು ಮಠಕ್ಕೆ ಪೀಠಾಧಿಪತಿಯಾಗಿ ಅಪ್ರಾಪ್ತರಾದ ಬಾಲಕ ಅನಿರುದ್ಧ ಸರಳತ್ತಾಯ ಅವರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಲಾಗಿತ್ತು. ಈ ಸಂಬಂಧ ನ್ಯಾ. ಸತೀಶ್‌ಚಂದ್ರ ಶರ್ಮಾ ನೇತೃತ್ವದ ರಜಾ ಕಾಲದ ವಿಭಾಗೀಯ ಪೀಠದ ಮುಂದೆ ಕಳೆದ ಬುಧವಾರ ವಿಚಾರಣೆಗೆ ಬಂದಿತು. ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲ ಡಿ.ಆರ್‌. ರವಿಶಂಕರ್‌, 'ನೂರಾರು ವರ್ಷಗಳ ಇತಿಹಾಸ ಹಾಗೂ ಪರಂಪರೆ ಹೊಂದಿರುವ ಉಡುಪಿಯ ಅಷ್ಟ ಮಠಗಳಲ್ಲಿಒಂದಾಗಿರುವ ಶಿರೂರು ಮಠಕ್ಕೆ ಪೀಠಾಧಿಪತಿಯಾಗಿ 16 ವರ್ಷದ ಬಾಲಕ ಅನಿರುದ್ಧ ಸರಳತ್ತಾಯ ಅವರನ್ನು ನೇಮಕ ಮಾಡಿರುವುದು ಕಾನೂನುಬಾಹಿರ ಕ್ರಮ' ಎಂದು ವಾದಿಸಿದ್ದರು.