ಸಿದ್ದರಾಮಯ್ಯ ಕ್ಷಮೆಯಾಚಿಸದಿದ್ದರೆ ನಾವು ಪ್ರತಿಭಟನೆ ಮಾಡುತ್ತೇವೆ; ಬಿಜೆಪಿ ಎಂಎಲ್‌ಸಿ ರವಿಕುಮಾರ್ ಎಚ್ಚರಿಕೆ

ಇವರು ಕಾಂಗ್ರೆಸ್‌ನಲ್ಲಿ ದಲಿತರನ್ನ, ಮುಸ್ಲಿಮರನ್ನ ಹೊಟ್ಟೆಪಾಡಿಗೆ ಇಟ್ಟುಕೊಂಡಿದ್ರಾ? ದಲಿತರನ್ನ ಹೇಗೆ ನಡೆಸಿಕೊಳ್ತಿದ್ದಾರೆ ಅನ್ನೋದು ಗೊತ್ತಾಗುತ್ತಿದೆ. ಅಂಬೇಡ್ಕರ್ ಅವರ ಶವ ಸಂಸ್ಕಾರಕ್ಕೂ ಅವಕಾಶ ನೀಡಲಿಲ್ಲ. ಎಲ್ಲದರಲ್ಲೂ ದಲಿತರಿಗೆ ಅನ್ಯಾಯ ಮಾಡಿದ್ದಾರೆ. ದಲಿತರಿಗೆ ವೇತನ ಸಿಗುವಂತೆ ಮಾಡಿರೋದು ಬಿಜೆಪಿ. ಆದರೆ ಕಾಂಗ್ರೆಸ್‌ನವರು ಮೂಲಭೂತ ಸೌಕರ್ಯಗಳು ಸಿಗದಂತೆ ಮಾಡಿದ್ದರು ಎಂದು ರವಿಕುಮಾರ್ ಕಿಡಿಕಾರಿದರು.

ಸಿದ್ದರಾಮಯ್ಯ ಕ್ಷಮೆಯಾಚಿಸದಿದ್ದರೆ ನಾವು ಪ್ರತಿಭಟನೆ ಮಾಡುತ್ತೇವೆ; ಬಿಜೆಪಿ ಎಂಎಲ್‌ಸಿ ರವಿಕುಮಾರ್ ಎಚ್ಚರಿಕೆ
Linkup
ಬೆಂಗಳೂರು: ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾದ ಹೇಳಿಕೆಗೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಎಂಎಲ್‌ಸಿ ರವಿಕುಮಾರ್‌ ಕಿಡಿಕಾರಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೆ ದಲಿತರು ಅವರಿಗೆ ಬೇಕಿತ್ತು. ದಲಿತರನ್ನ ತುಚ್ಚವಾಗಿ ನಡೆಸಿಕೊಂಡ ಪಕ್ಷ . ದಲಿತರ ಬಗ್ಗೆ ಅವಹೇಳನವಾಗಿ ಮಾತನಾಡಿದ ಸಿದ್ದರಾಮಯ್ಯ ಅವರು ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲದೇ ಹೋದರೆ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಎಂಎಲ್ ಸಿ ರವಿಕುಮಾರ್ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯನವರು ಒಮ್ಮೊಮ್ಮೆ ಸತ್ಯ ಹೇಳ್ತಾರೆ ಎಂದ ರವಿ ಕುಮಾರ್‌, ಇವರು ಕಾಂಗ್ರೆಸ್‌ನಲ್ಲಿ ದಲಿತರನ್ನ, ಮುಸ್ಲಿಮರನ್ನ ಹೊಟ್ಟೆಪಾಡಿಗೆ ಇಟ್ಟುಕೊಂಡಿದ್ರಾ? ದಲಿತರನ್ನ ಹೇಗೆ ನಡೆಸಿಕೊಳ್ತಿದ್ದಾರೆ ಅನ್ನೋದು ಗೊತ್ತಾಗುತ್ತಿದೆ. ಅಂಬೇಡ್ಕರ್ ಅವರ ಶವ ಸಂಸ್ಕಾರಕ್ಕೂ ಅವಕಾಶ ನೀಡಲಿಲ್ಲ. ಎಲ್ಲದರಲ್ಲೂ ದಲಿತರಿಗೆ ಅನ್ಯಾಯ ಮಾಡಿದ್ದಾರೆ. ದಲಿತರಿಗೆ ವೇತನ ಸಿಗುವಂತೆ ಮಾಡಿರೋದು ಬಿಜೆಪಿ. ಆದರೆ ಕಾಂಗ್ರೆಸ್‌ನವರು ಮೂಲಭೂತ ಸೌಕರ್ಯಗಳು ಸಿಗದಂತೆ ಮಾಡಿದ್ದರು ಎಂದು ಕಿಡಿಕಾರಿದರು. ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ ಎಂಬ ಬಿಜೆಪಿಗರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಸಿಂದಗಿಯಲ್ಲಿ ನಡೆದ ಎಡಗೈ ಸಮಾವೇಶದಲ್ಲಿ ನಾನು ಮಾತನಾಡಿದ್ದ ವೇಳೆ, ಗೋವಿಂದ ಕಾರಜೋಳ, ನಾರಾಯಣ ಸ್ವಾಮಿ, ರಮೇಶ್ ಜಿಗಜಿಗಣಿ ಇವರು ಸ್ವಾರ್ಥಕ್ಕಾಗಿ ಬಿಜೆಪಿಗೆ ಹೋಗಿದ್ದಾರೆ ಎಂದು ಹೇಳಿದ್ದೇನೆ.‌ ದಲಿತರು ಎಂಬ ಪದ ಎಲ್ಲೂ ಬಳಕೆ ಮಾಡಿಲ್ಲ ಎಂದಿದ್ದಾರೆ. ಅಲ್ಲದೇ, ಬಿಜೆಪಿಗರು ರಾಜಕೀಯವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿ ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುತ್ತಾರೆ. ಆದರೆ ಸಂವಿಧಾನದಲ್ಲಿ ಸಮ ಸಮಾಜ ನಿರ್ಮಾಣ ಮಾಡುವ ಮಾತನ್ನಾಡುತ್ತದೆ. ಕೆಲವರು ಸ್ವಾರ್ಥಕ್ಕಾಗಿ ಬಿಜೆಪಿಗೆ ಹೋಗಿದ್ದಾರೆ ಎಂದಿದ್ದೇನೆ ಹೊರತು ದಲಿತರು ಎಂಬ ಪದ ಉಪಯೋಗ ಮಾಡಿಲ್ಲ ಎಂದಿದ್ದಾರೆ. ಅಲ್ಲದೇ ಸಂವಿಧಾನಕ್ಕೆ ಗೌರವ ಇಲ್ಲದ ಪಕ್ಷಕ್ಕೆ ಹೋಗಿದ್ದಾರೆ ಎಂದಿದ್ದೇನೆ. ದಲಿತರ ಸಮಾವೇಶದಲ್ಲಿ ಈ ಮಾತನ್ನು ಹೇಳಿದ್ದೇನೆ. ‌ದಲಿತರಿಗೆ ಅವಹೇಳನ ಆಗುವ ರೀತಿಯಲ್ಲಿ ಇದ್ದಿದ್ದರೆ ಅಲ್ಲೇ ಪ್ರತಿಭಟನೆ ಮಾಡಬಹುದಿತ್ತಲ್ವಾ? ಎಂದು ಪ್ರಶ್ನಿಸಿದ್ದಾರೆ. ದಲಿತರ ಬಗ್ಗೆ ಆಪಾರ ಗೌರವ ಇದೆ. ಅವರಿಗೆ ರಾಜಕೀಯ ಶಕ್ತಿ ಬರಬೇಕು ಎಂದು ಬಯಸುವವನು ನಾನು ಅಂಬೇಡ್ಕರ್ ಅವರನ್ನು ಕಾನೂನು ಹಾಗೂ ಕಾರ್ಮಿಕ ಸಚಿವ ಮಾಡಿದ್ದು ಕಾಂಗ್ರೆಸ್ . ಮೀಸಲಾತಿಯನ್ನು ಅಂಬೇಡ್ಕರ್ ತಂದರೂ ಮೀಸಲಾತಿ ಜಾರಿ ಮಾಡಿದವರು ಯಾರು? ಎಂದು ಪ್ರಶ್ನಿಸಿದ್ದಾರೆ.