ಬ್ಯಾಂಕ್‌ ಆಫ್‌ ಮಹಾರಾಷ್ಟ್ರ, ಸೆಂಟ್ರಲ್‌ ಬ್ಯಾಂಕ್‌ ಖಾಸಗೀಕರಣ?

ಸಾರ್ವಜನಿಕ ವಲಯದ 2 ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸಲು ನೀತಿ ಆಯೋಗವು ಸರಕಾರಕ್ಕೆ ಸಲಹೆ ನೀಡಿದ್ದು, ವರದಿಗಳ ಪ್ರಕಾರ ಖಾಸಗೀಕರಣವಾಗಲಿರುವ ಸಂಭವನೀಯ ಬ್ಯಾಂಕ್‌ಗಳಲ್ಲಿ ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ಮತ್ತು ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ಮುಂಚೂಣಿಯಲ್ಲಿವೆ.

ಬ್ಯಾಂಕ್‌ ಆಫ್‌ ಮಹಾರಾಷ್ಟ್ರ, ಸೆಂಟ್ರಲ್‌ ಬ್ಯಾಂಕ್‌ ಖಾಸಗೀಕರಣ?
Linkup
ಹೊಸದಿಲ್ಲಿ: ಸಾರ್ವಜನಿಕ ವಲಯದ 2 ಬ್ಯಾಂಕ್‌ಗಳು ಮತ್ತು 1 ಸಾಮಾನ್ಯ ವಿಮೆ ಕಂಪನಿಯನ್ನು ಖಾಸಗೀಕರಣಗೊಳಿಸಲು ನೀತಿ ಆಯೋಗವು ಸರಕಾರಕ್ಕೆ ಸಲಹೆ ನೀಡಿದೆ. ಇದರೊಂದಿಗೆ ಖಾಸಗೀಕರಣವಾಗಲಿರುವ ಆ ಎರಡು ಬ್ಯಾಂಕ್‌ಗಳು ಯಾವುದು ಎಂಬ ಕುತೂಹಲ ಉಂಟಾಗಿದೆ. ಕೆಲ ವರದಿಗಳ ಪ್ರಕಾರ ಖಾಸಗೀಕರಣವಾಗಲಿರುವ ಸಂಭವನೀಯ ಬ್ಯಾಂಕ್‌ಗಳಲ್ಲಿ ಮತ್ತು ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ಮುಂಚೂಣಿಯಲ್ಲಿದೆ. ಕೂಡ ಈ ವರ್ಷ ಅಥವಾ ಮುಂದಿನ ವರ್ಷ ಖಾಸಗೀಕರಣವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಪುಣೆ ಮೂಲದ ಬ್ಯಾಂಕ್‌ ಆಫ್‌ ಮಹಾರಾಷ್ಟ್ರ 1935ರಲ್ಲಿ ಸ್ಥಾಪನೆಯಾಗಿರುವ ಬ್ಯಾಂಕ್‌ ಆಗಿದ್ದು, 1,900 ಶಾಖೆಗಳನ್ನು ಒಳಗೊಂಡಿದೆ. ಮುಂಬಯಿ ಮೂಲದ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾಕ್ಕೆ 109 ವರ್ಷಗಳ ಇತಿಹಾಸವಿದ್ದು, 1911ರಲ್ಲಿಸ್ಥಾಪನೆಯಾಗಿದೆ. ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (ಡಿಐಪಿಎಎಂ) ಮತ್ತು ಹಣಕಾಸು ಸೇವೆಗಳ ಇಲಾಖೆ (ಡಿಎಫ್‌ಎಸ್‌) ಸೂಚಿಸಿರುವ ಬ್ಯಾಂಕ್‌ಗಳ ಖಾಸಗೀಕರಣ ಪರಿಶೀಲಿಸಲಿದೆ.