ವರ್ಷಗಳ ಬಳಿಕ ಸಿಹಿಸುದ್ದಿ ನೀಡಿದ 'ಅರಸು' ಸಿನಿಮಾ ನಟಿ ಮೀರಾ ಜಾಸ್ಮಿನ್: ಅಭಿಮಾನಿಗಳು ಫುಲ್ ಖುಷ್

ಪುನೀತ್ ರಾಜ್‌ಕುಮಾರ್ 'ಅರಸು' ಸಿನಿಮಾದ ನಟಿ ಮೀರಾ ಜಾಸ್ಮಿನ್ ಅವರು ವರ್ಷಗಳ ಬಳಿಕ ಸಿನಿಮಾ ರಂಗಕ್ಕೆ ಮುಖ ಮಾಡುತ್ತಿದ್ದಾರೆ. ಮೀರಾ ನಟಿಸುತ್ತಿರುವ ಹೊಸ ಸಿನಿಮಾ ಯಾವುದು? ಆ ಬಗ್ಗೆ ಮಾಹಿತಿ ಇಲ್ಲಿದೆ.

ವರ್ಷಗಳ ಬಳಿಕ ಸಿಹಿಸುದ್ದಿ ನೀಡಿದ 'ಅರಸು' ಸಿನಿಮಾ ನಟಿ ಮೀರಾ ಜಾಸ್ಮಿನ್: ಅಭಿಮಾನಿಗಳು ಫುಲ್ ಖುಷ್
Linkup
ದಕ್ಷಿಣ ಭಾರತದ ಮುದ್ದು ಮುಖದ ಚೆಲುವೆ 2 ವರ್ಷಗಳ ನಂತರದಲ್ಲಿ ಮತ್ತೆ ಸಿನಿಮಾ ರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಪುನೀತ್ ರಾಜ್‌ಕುಮಾರ್ 'ಅರಸು' ಸಿನಿಮಾದಲ್ಲಿ ನಟಿಸಿದ ನಂತರದಲ್ಲಿ ಕನ್ನಡಿಗರ ಮನಸ್ಸನ್ನು ಮೀರಾ ಗೆದ್ದಿದ್ದರು. ಮೀರಾ ಅವರು ತೆಲುಗು, ತಮಿಳು, ಕನ್ನಡದಲ್ಲಿ ನಟಿಸಿರುವ ಅವರು ಮಲಯಾಳಂ ಸಿನಿಮಾ ಮೂಲಕ ಸೆಕೆಂಡ್ ಇನಿಂಗ್ಸ್ ಶುರು ಮಾಡುತ್ತಿದ್ದಾರೆ. ಸತ್ಯನ್ ಅಂತಿಕಾಡ್ ಜೊತೆ ಮೀರಾ ಜಾಸ್ಮಿನ್ ಸಿನಿಮಾ 2000ರ ಸಮಯದಲ್ಲಿ ನಾಯಕಿಯಾಗಿ ಮೀರಾಗೆ ಸಿಕ್ಕಾಪಟ್ಟೆ ಬೇಡಿಕೆಯಿತ್ತು. ಹೀಗಾಗಿ ಅವರು ದಕ್ಷಿಣ ಭಾರತದ ಅನೇಕ ಸಿನಿಮಾಗಳಲ್ಲಿ ಲೀಡ್ ಪಾತ್ರದಲ್ಲಿ ಮಿಂಚಿದರು. Paadam Onnu: Oru Vilapam ಸಿನಿಮಾದಲ್ಲಿನ ಅದ್ಭುತ ನಟನೆಗೆ ಅವರಿಗೆ ರಾಷ್ಟ್ರ ಪ್ರಶಸ್ತಿಯೂ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಮೀರಾ ಜಾಸ್ಮಿನ್ ಅವರು ಸಿನಿಮಾ ರಂಗದಲ್ಲಿ ಸಕ್ರಿಯವಾಗಿರಲಿದ್ದಾರಂತೆ. ಆದರೆ ಬಹಳ ಮುತುವರ್ಜಿಯಿಂದ ಅವರು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ. ಸತ್ಯನ್ ಅಂತಿಕಾಡ್ ನಿರ್ದೇಶನದ ಸಿನಿಮಾದಲ್ಲಿ ಮೀರಾ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿರೋದಕ್ಕೆ ಪುಣ್ಯ ಮಾಡಿದ್ದೇನೆ ಎಂದಿದ್ದಾರೆ ಅವರು. ಮೀರಾ ಜಾಸ್ಮಿನ್‌ಗೆ ಗೋಲ್ಡನ್ ವೀಸಾ ಮೋಹನ್‌ಲಾಲ್, ಮಮ್ಮೂಟಿ, ಪೃಥ್ವಿರಾಜ್ ನಂತರದಲ್ಲಿ ಮೀರಾ ಜಾಸ್ಮಿನ್ ಅವರಿಗೆ UAE ಗೋಲ್ಡನ್ ವೀಸಾ ಸಿಕ್ಕಿದೆ. ಇದರ ಪ್ರಕಾರ 5-10 ವರ್ಷಗಳ ಕಾಲ ವಿದೇಶಿಗರು ದೇಶದಲ್ಲಿ ಇರಬಹುದು. ಕೆಲ ವರ್ಷಗಳಿಂದ ಅವರು ಬಣ್ಣದ ಲೋಕದಿಂದ ದೂರವಿದ್ದರು, ಈಗ ಮತ್ತೆ ಸಿನಿಮಾಕ್ಕೆ ಮರಳುತ್ತಿರುವುದರಿಂದ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿಗೆ ಮೀರಾ ಧನ್ಯವಾದ ಹೇಳಿದ್ದಾರೆ. ವಿಭಿನ್ನ ಪಾತ್ರದಲ್ಲಿ ಮೀರಾ ಜಾಸ್ಮಿನ್ ಈಗಾಗಲೇ ಮೀರಾ ಅವರು ಸತ್ಯನ್ ಅಂತಿಕಾಡ್ ಜೊತೆ ನಾಲ್ಕು ಸಿನಿಮಾಗಳನ್ನು ಮಾಡಿದ್ದಾರೆ. ಈಗ ಮಾಡುತ್ತಿರುವ ಪಾತ್ರ ತುಂಬ ವಿಭಿನ್ನ ಆಗಿರೋದಕ್ಕೆ, ಈ ಹಿಂದಿನ ಸಿನಿಮಾಗಳನ್ನು ಈ ಹೊಸ ಸಿನಿಮಾದ ಜೊತೆ ಮೀರಾ ಹೋಲಿಕೆ ಮಾಡಲು ರೆಡಿಯಿಲ್ಲ. ಜಾಗತಿಕ ಮಟ್ಟದಲ್ಲಿ ಮಲಯಾಳಂ ಚಿತ್ರರಂಗ ಗುರುತಿಸಿಕೊಂಡಿರೋದಕ್ಕೆ ಮೀರಾಗೆ ತುಂಬ ಹೆಮ್ಮೆಯಿದೆ. ಹೀಗಾಗಿ ಮತ್ತಷ್ಟು ಮಲಯಾಳಂ ಚಿತ್ರಗಳ ಭಾಗವಾಗಲು ಮೀರಾ ಪ್ರಯತ್ನಪಡುತ್ತಾರೆ. ಸತ್ಯನ್ ಅಂತಿಕಾಡ್ ಸಿನಿಮಾದಲ್ಲಿ ನಟ ಲೀಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ದೇವಿಕಾ ಸಂಜಯ್, ಶ್ರೀನಿವಾಸನ್ ಕೂಡ ನಟಿಸಲಿದ್ದಾರೆ. ಆದಷ್ಟು ಬೇಗ ಈ ಸಿನಿಮಾದ ಶೂಟಿಂಗ್ ನಡೆಯಲಿದೆ. ಮೀರಾ ವಿವಾದಾತ್ಮಕ ಮದುವೆ ಮೀರಾ ಜಾಸ್ಮಿನ್ ಅನಿಲ್ ಎಂಬುವವರ ಜೊತೆ ಮದುವೆ ಆಗಿ ದುಬೈನಲ್ಲಿ ನೆಲೆಸಿದ್ದರು. ಅನಿಲ್‌ಗೆ ಈ ಹಿಂದೆ ಮದುವೆ ಆಗಿದ್ದು, ಪೊಲೀಸ್ ರಕ್ಷಣೆ ಪಡೆದು ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ನಂತರ ದಪ್ಪಗಾಗಿದ್ದ ಮೀರಾ, ಸಣ್ಣಗಾಗಿ ಅಚ್ಚರಿ ಮೂಡಿಸಿದ್ದಾರೆ. ಅವರ ವೈಯಕ್ತಿಕ ಜೀವನದ ಕುರಿತು ಅಂತೆ-ಕಂತೆ ಪುರಾಣಗಳು ಹೆಚ್ಚಾಗಿ ಕೇಳಿಬಂದಿದೆಯಾದರೂ ಕೂಡ, ಮೀರಾ ಅವಕ್ಕೆಲ್ಲ ಉತ್ತರವೇ ನೀಡಿಲ್ಲ.