ಸಂದೀಪ್ ಉನ್ನಿಕೃಷ್ಣನ್ ಕುರಿತ 'ಮೇಜರ್' ಸಿನಿಮಾಕ್ಕಾಗಿ ಕಾಯುತ್ತಿದ್ದವರಿಗೆ ನಿರಾಸೆ!

2008ರಲ್ಲಿ ಮುಂಬೈ ಮೇಲೆ ಭಯೋತ್ಪಾದಕರು ಮಾಡಿದ ದಾಳಿಯಲ್ಲಿ ಸಾವನ್ನಪ್ಪಿದ್ದ 'ಮೇಜರ್‌' ಸಂದೀಪ್‌ ಉನ್ನಿಕೃಷ್ಣನ್‌ ಅವರ ಕುರಿತು 'ಮೇಜರ್' ಸಿನಿಮಾವನ್ನು ನಟ ಮಹೇಶ್ ಬಾಬು ನಿರ್ಮಾಣ ಮಾಡಿದ್ದಾರೆ. ಜುಲೈ 2ರಂದು ಆ ಸಿನಿಮಾ ತೆರೆಕಾಣಬೇಕಿತ್ತು. ಆದರೆ ಈಗ ಒಂದು ಬೇಸರದ ಸುದ್ದಿ ಹೊರಬಿದ್ದಿದೆ.

ಸಂದೀಪ್ ಉನ್ನಿಕೃಷ್ಣನ್ ಕುರಿತ 'ಮೇಜರ್' ಸಿನಿಮಾಕ್ಕಾಗಿ ಕಾಯುತ್ತಿದ್ದವರಿಗೆ ನಿರಾಸೆ!
Linkup
ಮುಂಬೈನ ತಾಜ್‌ ಹೋಟೆಲ್‌ ಮೇಲೆ 2008ರ ನವೆಂಬರ್‌ 26ರಂದು ನಡೆದ ಉಗ್ರರ ದಾಳಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಉಗ್ರರ ಈ ದುಷ್ಕೃತ್ಯಕ್ಕೆ ಅನೇಕ ಜೀವಗಳು ಬಲಿಯಾದವು. ಉಗ್ರರ ಜೊತೆಗಿನ ಮುಖಾಮುಖಿಯಲ್ಲಿ ಅನೇಕ ಪೊಲೀಸರು, ಸೈನಿಕರು ಪ್ರಾಣ ಕಳೆದುಕೊಂಡರು. ಹಾಗೇ ಹೋರಾಡಿ ವೀರ ಮರಣವನ್ನಪ್ಪಿದವರಲ್ಲಿ ಮೇಜರ್‌ ಸಂದೀಪ್ ಉನ್ನಿಕೃಷ್ಣನ್‌ ಕೂಡ ಒಬ್ಬರು. ಅವರ ಬದುಕನ್ನೇ ಆಧಾರವಾಗಿಟ್ಟುಕೊಂಡು 'ಮೇಜರ್' ಅಂತ ಸಿನಿಮಾ ಮಾಡಲಾಗಿದ್ದು, ಅದು ಜುಲೈ 2ರಂದು ತೆರೆಗೆ ಬರಬೇಕಿತ್ತು. ಆದರೆ, ಅಲ್ಲೊಂದು ಬದಲಾವಣೆ ಆಗಿದೆ. ಜುಲೈ 2ಕ್ಕೆ ಮೇಜರ್ ಬರಲ್ಲ! 'ಪ್ರಿನ್ಸ್' ನಿರ್ಮಾಣದ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ಧಗೊಂಡಿದೆ. ಜುಲೈ 2ರಂದು ರಿಲೀಸ್ ಮಾಡುವುದಕ್ಕೆ ಮಹೇಶ್ ಬಾಬು ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ ಈಗ ಪರಿಸ್ಥಿತಿ ಉತ್ತಮವಾಗಿಲ್ಲ. 'ಸದ್ಯ ನಾವೆಲ್ಲ ಒಂದು ವಿಷಮ ಪರಿಸ್ಥಿತಿಯಲ್ಲಿ ಇದ್ದೇವೆ. ಈ ಸಂದರ್ಭದಲ್ಲಿ ನಾವು ಒಂದು ವಿಚಾರವನ್ನು ಹೇಳಬೇಕೆಂದುಕೊಂಡಿದ್ದೇವೆ. ಈ ಮೊದಲಿಗೆ ವಿಶ್ವಾದ್ಯಂತ ಮೇಜರ್ ಸಿನಿಮಾವನ್ನು ಜುಲೈ 2ರಂದು ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ ಈಗ ಆ ದಿನಾಂಕದಲ್ಲಿ ಬದಲಾವಣೆ ಆಗಲಿದೆ. ಪರಿಸ್ಥಿತಿ ತಿಳಿಯಾದ ಮೇಲೆ ಹೊಸ ರಿಲೀಸ್ ಡೇಟ್ ಘೋಷಣೆ ಮಾಡಲಿದ್ದೇವೆ' ಎಂದು ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ. ಸಂದೀಪ್ ಪಾತ್ರದಲ್ಲಿ 'ಕ್ಷಣಂ', 'ಗೂಡಚಾರಿ', 'ಎವರು' ಖ್ಯಾತಿಯ ಅಡಿವಿ ಶೇಷ್‌ ನಟಿಸಿದ್ದಾರೆ. ಈಚೆಗೆ ಸಿನಿಮಾದ ಒಂದು ಟೀಸರ್ ಸಹ ರಿಲೀಸ್ ಆಗಿತ್ತು. ಹಿಂದಿಯಲ್ಲಿ ಅದನ್ನು ಸಲ್ಮಾನ್ ಖಾನ್ ರಿಲೀಸ್ ಮಾಡಿದ್ದು ವಿಶೇಷ. ಇನ್ನು, ಮೇಜರ್‌ಗೆ ಶಶಿಕಿರಣ್ ತಿಕ್ಕಾ ಇದರ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ ಮಹೇಶ್‌ ಬಾಬು ಜೊತೆ ಸೋನಿ ಪಿಕ್ಚರ್ಸ್ ಪ್ರೊಡಕ್ಷನ್ಸ್ ಸಂಸ್ಥೆ ಕೂಡ ಬಂಡವಾಳ ಹೂಡಿದೆ. ಶೋಭಿತಾ ಧುಲಿಪಲಾ, ಸಾಯಿ ಮಂಜ್ರೇಕರ್ ಕೂಡ 'ಮೇಜರ್‌'ನಲ್ಲಿ ಬಣ್ಣ ಹಚ್ಚಿದ್ದಾರೆ. ಸಂದೀಪ್ ಪಾತ್ರ ಮಾಡುವುದಕ್ಕಾಗಿ ಅಡಿವಿ ಶೇಷ್‌ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರಂತೆ. ಬೆಂಗಳೂರಿನಲ್ಲಿರುವ ಸಂದೀಪ್ ಅವರ ಪೋಷಕರನ್ನು ಭೇಟಿ ಮಾಡಿದ್ದ ಅವರು, ಸಂದೀಪ್‌ ಅವರ ಬದುಕಿನ ಮತ್ತೊಂದು ಆಯಾಮವನ್ನು ಈ ಸಿನಿಮಾ ಮೂಲಕ ತೋರಿಸುವುದಾಗಿ ಹೇಳಿಕೊಂಡಿದ್ದಾರೆ. 'ಸಂದೀಪ್ ಅವರನ್ನು ನೋಡಿದಾಗ ನಮ್ಮ ಕುಟುಂಬದ ಒಬ್ಬ ಸದಸ್ಯರೇನೋ ಎನಿಸಿತು. ಆ ಪಾಸ್‌ಪೋರ್ಟ್‌ ಸೈಜ್‌ ಫೋಟೋದಲ್ಲಿ ಅವರ ಕಣ್ಣುಗಳನ್ನು ಗಮನಿಸಿದರೆ ಅವರಲ್ಲಿ ಒಂದು ಮ್ಯಾಡ್‌ನೆಸ್‌, ಪ್ಯಾಷನ್‌ ಮತ್ತು ಸ್ಪಿರಿಟ್‌ ಕಾಣಿಸಿತು. ಆಗಲೇ ನನಗೆ ಅವರ ಬಗ್ಗೆ ತಿಳಿದುಕೊಳ್ಳಬೇಕು ಎನಿಸಿತು' ಎಂದು ಹಿಂದೊಮ್ಮೆ ಅಡಿವಿ ಶೇಷ್ ಹೇಳಿಕೊಂಡಿದ್ದರು.