ರಾಷ್ಟ್ರೀಯ ಭಾಷಾನೀತಿ ರೂಪಿಸದಿದ್ದರೆ ಮಾತೃ ಭಾಷೆಗಳಿಗೆ ಕಂಟಕ; ಪುರುಷೋತ್ತಮ ಬಿಳಿಮಲೆ ಆತಂಕ

‘ಭಾಷೆಯೊಂದು ಸತ್ತರೆ, ಅದರಲ್ಲಿ ಅಡಗಿರುವ ಶ್ರೀಮಂತ ಸಂಸ್ಕೃತಿಯೂ ಕೂಡ ನಶಿಸುತ್ತದೆ. ನೆಲದ ಭಾಷೆಗಳ ಉಳಿವಿಗಾಗಿ ರಾಷ್ಟ್ರೀಯ ಭಾಷಾ ನೀತಿಯನ್ನು ರೂಪಿಸುವ ಅಗತ್ಯವಿದೆ. ಇದು ಕೇವಲ ಕೊಡವ ಭಾಷೆಯ ಕಥೆಯಷ್ಟೇ ಅಲ್ಲ. ಕೊಡವ ಭಾಷೆ ಮಾತನಾಡುವವರ ಸಂಖ್ಯೆ ಕ್ಷೀಣಿಸಿರುವುದಾಗಿ 2011ರ ಜನಗಣತಿ ಹೇಳುತ್ತದೆ. ಇದೇ ರೀತಿ ಮುಂದುವರಿದರೆ ಕೊಡವ ಭಾಷೆ ಮಾತನಾಡುವವರೇ ಇಲ್ಲವಾಗುತ್ತಾರೆ. ಬಹುತ್ವ ಭಾರತದಲ್ಲಿ ಹಲವಾರು ಭಾಷೆ ಮತ್ತು ಸಂಸ್ಕೃತಿಗಳು ಸೇರಿಕೊಂಡಿವೆ ಎಂದು ನಿವೃತ್ತ ಪ್ರಾಧ್ಯಾಪಕ ಹಾಗೂ ಚಿಂತಕ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯ ವ್ಯಕ್ತಪಡಿಸಿದರು.

ರಾಷ್ಟ್ರೀಯ ಭಾಷಾನೀತಿ ರೂಪಿಸದಿದ್ದರೆ ಮಾತೃ ಭಾಷೆಗಳಿಗೆ ಕಂಟಕ; ಪುರುಷೋತ್ತಮ ಬಿಳಿಮಲೆ ಆತಂಕ
Linkup
ಬೆಂಗಳೂರು: ರೂಪಿಸದಿದ್ದರೆ ಹಲವು ಮಾತೃ ಭಾಷೆಗಳಿಗೆ ದೊಡ್ಡ ಕಂಟಕ ಎದುರಾಗಲಿದೆ ಎಂದು ಹೊಸದಿಲ್ಲಿಯ ಜವಾಹರ್‌ಲಾಲ್‌ ನೆಹರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಹಾಗೂ ಚಿಂತಕ ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಜಾ ಪ್ರಕಾಶನ -ಬೆಂಗಳೂರು ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಅವರು ಸಂಸತ್ತಿನಲ್ಲಿ ಮಾಡಿದ ಭಾಷಣಗಳ ಆಯ್ದು ಭಾಗ-1, ತುಳು-ಕೊಡವ ಭಾಷೆಗಳ ಅಳಿವು-ಉಳಿವು' ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ‘ಭಾಷೆಯೊಂದು ಸತ್ತರೆ, ಅದರಲ್ಲಿ ಅಡಗಿರುವ ಶ್ರೀಮಂತ ಸಂಸ್ಕೃತಿಯೂ ಕೂಡ ನಶಿಸುತ್ತದೆ. ನೆಲದ ಭಾಷೆಗಳ ಉಳಿವಿಗಾಗಿ ರಾಷ್ಟ್ರೀಯ ಭಾಷಾ ನೀತಿಯನ್ನು ರೂಪಿಸುವ ಅಗತ್ಯವಿದೆ. ಇದು ಕೇವಲ ಕೊಡವ ಭಾಷೆಯ ಕಥೆಯಷ್ಟೇ ಅಲ್ಲ. ಕೊಡವ ಭಾಷೆ ಮಾತನಾಡುವವರ ಸಂಖ್ಯೆ ಕ್ಷೀಣಿಸಿರುವುದಾಗಿ 2011ರ ಜನಗಣತಿ ಹೇಳುತ್ತದೆ. ಇದೇ ರೀತಿ ಮುಂದುವರಿದರೆ ಕೊಡವ ಭಾಷೆ ಮಾತನಾಡುವವರೇ ಇಲ್ಲವಾಗುತ್ತಾರೆ. ಬಹುತ್ವ ಭಾರತದಲ್ಲಿ ಹಲವಾರು ಭಾಷೆ ಮತ್ತು ಸಂಸ್ಕೃತಿಗಳು ಸೇರಿಕೊಂಡಿವೆ. ದೇಶದಲ್ಲಿರುವ 19,569 ಭಾಷೆಗಳನ್ನೂ ಜೋಪಾನವಾಗಿ ಕಾಪಾಡಲು ನೆರವಾಗುವ ಸಮಗ್ರ ಭಾಷಾ ನೀತಿಯನ್ನು ಜಾರಿಗೊಳಿಸಬೇಕು ಎಂದು ಬಿಳಿಮಲೆ ಆಗ್ರಹಿಸಿದರು. 1971ರಿಂದ 2011ರ ವರೆಗಿನ ಅಂಕಿ- ಅಂಶಗಳನ್ನು ಪರಿಶೀಲಿಸಿದಾಗ ದೇಶದಲ್ಲಿ ಹಿಂದಿ ಮಾತನಾಡುವವರ ಸಂಖ್ಯೆ ಶೇ 56ರಷ್ಟು ಏರಿಕೆ ಆಗಿದೆ. ತೆಲುಗು, ತಮಿಳು ಶೇ 9ರಷ್ಟು ಬೆಳವಣಿಗೆ ಆಗಿದೆ. ಆದರೆ ಕನ್ನಡ ಭಾಷೆ ಬೆಳವಣಿಗೆ ಇಡೀ ದೇಶದಲ್ಲಿರುವ ಭಾಷೆಗಳಿಗಿಂತ ಕಡಿಮೆ ಅಂದರೆ 3.75 ರಷ್ಟು ಮಾತ್ರ. ಈ ಹಿನ್ನೆಲೆಯಲ್ಲಿ ನಮ್ಮ ತಾಯಿ ಭಾಷೆಯನ್ನು ಉಳಿಸಿಕೊಳ್ಳಲು ರಾಷ್ಟ್ರೀಯ ಭಾಷಾ ನೀತಿ ಅಗತ್ಯವಾಗಿ ಬೇಕಾಗಿದೆ ಎಂದರು. ರಾಜ್ಯಸಭಾ ಸಂಸದ ಮತ್ತು ಸಾಹಿತಿ ಎಲ್‌. ಹನುಮಂತಯ್ಯ, ಲೇಖಕಿ ಬಿ.ಟಿ.ಲಲಿತಾನಾಯಕ್‌, ಕೃತಿ ಸಂಪಾದಕ ಆರ್‌.ಜಯಕುಮಾರ್‌, ವಿಧಾನ ಪರಿಷತ್‌ ಸದಸ್ಯ ಯು.ಬಿ. ವೆಂಕಟೇಶ್‌, ಎನ್‌.ವಿ.ನಾಚಪ್ಪ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಕೃತಕ್ಕೆ 640 ಕೋಟಿ, ಕನ್ನಡಕ್ಕೆ 3 ಕೋಟಿ ರೂ.ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಮಾತನಾಡಿ, ‘ಕೊಡವ ಮತ್ತು ತುಳುವಿನಲ್ಲಿ ಸಂವಿಧಾನದ ಆಶಯವಿದೆ. ಹೀಗಾಗಿ, ಕೊಡವ ಮತ್ತು ತುಳುವನ್ನು ಕಾಪಾಡಬೇಕು. ಆದರೆ, ನಮ್ಮಲ್ಲಿ 28 ಸಾವಿರ ಮಂದಿ ಮಾತನಾಡುವ ಸಂಸ್ಕೃತಕ್ಕೆ 640 ಕೋಟಿ ರೂ. ಕೊಡುತ್ತಾರೆ. 6 ಕೋಟಿ ಕನ್ನಡ ಮಾತನಾಡುವವರಿಗೆ 3 ಕೋಟಿ ಕೊಡುತ್ತಾರೆ. ತುಳು, ಕೊಡವ ಭಾಷೆಗೆ ಶೂನ್ಯ. ಅಧಿಕೃತ ಭಾಷೆಯನ್ನು ಪ್ರಚಾರ ಮಾಡಬೇಕು, ಬೆಳವಣಿಗೆ ಮಾಡಬೇಕು ಎಂದು ಸಂವಿಧಾನದಲ್ಲೇ ಹೇಳಲಾಗಿದೆ. ಹೀಗಿದ್ದರೂ ಯಾಕೆ ಅದನ್ನು ಪಾಲಿಸುತ್ತಿಲ್ಲ’ ಎಂದು ಆಕ್ಷೇಪಿಸಿದರು.