ರವಿಚಂದ್ರನ್ ಅವರ ಉದಾರತೆಗೆ, ದೊಡ್ಡ ಗುಣಕ್ಕೆ ಸಾಕ್ಷಿ ಇಲ್ಲಿದೆ ನೋಡಿ..

'ಪುಟ್ನಂಜ' ಚಿತ್ರಕ್ಕಾಗಿ ಬಿ.ಸುರೇಶ ಅವರೇ ಬೆರಗಾಗುವಷ್ಟು ಸಂಭಾವನೆಯನ್ನ ರವಿಚಂದ್ರನ್ ನೀಡಿದ್ದಾರೆ. ಈ ಬಗ್ಗೆ ನಿಮ್ಮ 'ವಿಜಯ ಕರ್ನಾಟಕ ವೆಬ್' ಆರಂಭಿಸಿರುವ 'ಕನಸುಗಾರನ ಕಹಾನಿ' ವಿಶೇಷ ವೆಬ್ ಸರಣಿಯಲ್ಲಿ ನಿರ್ದೇಶಕ ಬಿ.ಸುರೇಶ ವಿವರಿಸಿದ್ದಾರೆ.

ರವಿಚಂದ್ರನ್ ಅವರ ಉದಾರತೆಗೆ, ದೊಡ್ಡ ಗುಣಕ್ಕೆ ಸಾಕ್ಷಿ ಇಲ್ಲಿದೆ ನೋಡಿ..
Linkup
ಸ್ಯಾಂಡಲ್‌ವುಡ್‌ನಲ್ಲಿ ರವಿಚಂದ್ರನ್‌ರನ್ನ 'ಕ್ರೇಜಿ ಸ್ಟಾರ್' ಅಂತಲೇ ಎಲ್ಲರೂ ಕರೆಯುತ್ತಾರೆ. ಯಾಕಂದ್ರೆ, ಸಿನಿಮಾ ಮೇಲೆ ರವಿಚಂದ್ರನ್‌ಗೆ ಇರುವ ಕ್ರೇಜ್ ಅಂಥದ್ದು. ಸಿನಿಮಾ ಚೆನ್ನಾಗಿ ಮೂಡಿಬರಬೇಕೆಂದು ಧಾರಾಳವಾಗಿ ದುಡ್ಡು ಸುರಿಯುವುದರಲ್ಲಿ ಎತ್ತಿದ ಕೈ. ಹಾಗೇ, ಸಿನಿಮಾಗಾಗಿ ಉತ್ತಮ ಕೆಲಸ ಮಾಡಿದವರಿಗೂ ರವಿಚಂದ್ರನ್ ಕೈತುಂಬಾ ಸಂಬಳ ನೀಡಿದ್ದಾರೆ. ಅದಕ್ಕೆ ಸಾಕ್ಷಿ ನಿರ್ದೇಶಕ . 'ಪುಟ್ನಂಜ' ಚಿತ್ರಕ್ಕಾಗಿ ಬಿ.ಸುರೇಶ ಅವರೇ ಬೆರಗಾಗುವಷ್ಟು ಸಂಭಾವನೆಯನ್ನ ರವಿಚಂದ್ರನ್ ನೀಡಿದ್ದಾರೆ. ಈ ಬಗ್ಗೆ ನಿಮ್ಮ 'ವಿಜಯ ಕರ್ನಾಟಕ ವೆಬ್' ಆರಂಭಿಸಿರುವ '' ವಿಶೇಷ ವೆಬ್ ಸರಣಿಯಲ್ಲಿ ನಿರ್ದೇಶಕ ಬಿ.ಸುರೇಶ ವಿವರಿಸಿದ್ದಾರೆ. ಜೊತೆಗೆ ರವಿಚಂದ್ರನ್‌ಗೆ 'ಕನ್ನಡದ ಕನಸುಗಾರ' ಎಂಬ ಬಿರುದು ಸಿಕ್ಕಿದ್ದು ಹೇಗೆ ಅಂತಲೂ ಬಿ.ಸುರೇಶ ವಿವರಿಸಿದ್ದಾರೆ. ಸಂದರ್ಶನದಲ್ಲಿ ಬಿ.ಸುರೇಶ್ ಹಂಚಿಕೊಂಡ ಸಂಗತಿಗಳು ಇಲ್ಲಿವೆ... 'ಕನ್ನಡದ ಕನಸುಗಾರ' ಬಿರುದು ಬಂದಿದ್ದು ಹೇಗೆ? ''ನಾವೆಲ್ಲರೂ ಪೆನ್-ಪೇಪರ್ ಇಟ್ಟುಕೊಂಡು ಕೆಲಸ ಮಾಡಿದರೆ, ಕಥೆ ಬರೆಯೋಕೆ ರವಿಚಂದ್ರನ್ ನೇರವಾಗಿ ಕ್ಯಾಮರಾವನ್ನೇ ಇಟ್ಟುಕೊಂಡು ಕೆಲಸ ಮಾಡುವಂಥವರು. ಅವರು ದೊಡ್ಡ ಕನಸುಗಾರ. ನಾನು ಅವರ ತಂಡಕ್ಕೆ ಹೋಗುವುದಕ್ಕೆ ಮುಂಚೆ ಬಹಳ ಜನ ''ಇವರು ತಮಿಳಿನವರು'' ಅಂತೆಲ್ಲಾ ಮಾತನಾಡುತ್ತಿದ್ದರು. ಅದನ್ನ ತಪ್ಪಿಸಬೇಕು ಎಂಬ ಕಾರಣಕ್ಕಾಗಿಯೇ ನಾವು 'ಪುಟ್ನಂಜ' ಸಿನಿಮಾದ ಪ್ರಚಾರ ಮಾಡುವ ಟೈಮ್‌ನಲ್ಲಿ ''ಕನ್ನಡದ ಕನಸುಗಾರ'' ಅಂತ ಬರೆಯೋಕೆ ಶುರು ಮಾಡಿದ್ವಿ. ಅದು ಇವತ್ತಿಗೂ ಉಳಿದುಕೊಂಡು ಬಂದಿದೆ. ಅವರು ಸ್ವಚ್ಛ ಕನ್ನಡದವರು. ಬೆಂಗಳೂರಿನಲ್ಲೇ ಹುಟ್ಟಿಬೆಳೆದವರು. ಮನೆ ಮಾತು ಬೇರೆ ಇದ್ದಿರಬಹುದು. ಆದರೆ ಮೂಲತಃ ಅವರು ಕನ್ನಡದವರು. ಕನ್ನಡದಲ್ಲಿಯೇ ಯೋಚನೆ ಮಾಡುತ್ತಿದ್ದವರು. ಅವರ ಜೊತೆಗೆ ಕೆಲಸ ಮಾಡುವುದು ಒಂದು ದೊಡ್ಡ ಅನುಭವ''. ''ಸಣ್ಣ ಕಥೆಯನ್ನೂ ಚೆನ್ನಾಗಿ ಅಲಂಕಾರ ಮಾಡಬಹುದು ಅಂತ ತೋರಿಸಿಕೊಟ್ಟರು. ಚಿತ್ರೀಕರಣ ಮಾಡುವ ಕ್ರಮದಲ್ಲೇ ಸಿನಿಮಾಗೆ ವಿಶೇಷ ಅಲಂಕಾರ ಮಾಡುವ ಶಕ್ತಿ ರವಿಚಂದ್ರನ್ ಅವರಿಗಿತ್ತು. ಅವರ ಬಹುತೇಕ ಸಿನಿಮಾಗಳು ನೋಡುಗರ ಕಣ್ಣಿಗೆ ಹಬ್ಬ ಅನ್ನುವ ಹಾಗೆ ಇವತ್ತಿಗೂ ಇದೆ. ಇದು ರವಿಚಂದ್ರನ್ ಅವರ ಚಿತ್ರೀಕರಣದ ವಿಶೇಷ'' ಧಾರಾಳವಾಗಿ ಸಂಬಳ ಕೊಡ್ತಾರೆ ರವಿಚಂದ್ರನ್ ''ಕೆಲಸ ಮಾಡುವವರಿಗೆ ರವಿಚಂದ್ರನ್ ಧಾರಾಳವಾಗಿ ಸಂಬಳ ಕೊಡುತ್ತಾರೆ. ಅಲ್ಲಿವರೆಗೆ ನಾನು ಯಾವ ಸಿನಿಮಾಗಳಲ್ಲಿ ಕೆಲಸ ಮಾಡಿದ್ನೋ, ಅಲ್ಲಿ ಎಷ್ಟೋ ಸಲ ದುಡ್ಡು ಬರ್ತಿರ್ಲಿಲ್ಲ. ನಾವು ನಮ್ಮ ಖುಷಿಗೋಸ್ಕರ ಕೆಲಸ ಮಾಡ್ತಿದ್ವಿ. ಆದರೆ, ರವಿಚಂದ್ರನ್ ಅವರ ಸಿನಿಮಾಗಳಲ್ಲಿ ಧಾರಾಳವಾದ ದುಡ್ಡು ಇರುತ್ತಿತ್ತು. ರವಿಚಂದ್ರನ್ ಅವರಿಂದ ನಾನೇ ಬೆರಗಾಗುವ ಅನುಭವಗಳಾಗಿದ್ದಾವೆ'' ''ಪುಟ್ನಂಜ' ಸಿನಿಮಾ ರಿಲೀಸ್ ಆದ ದಿನ... ನನ್ನ ಬಳಿ ರಾಜ್‌ದೂತ್ ಬೈಕ್ ಇತ್ತು. ಸಾಗರ್ ಥಿಯೇಟರ್‌ಗೆ ಹೋಗುತ್ತಿದ್ದಾಗ, ಬೈಕ್‌ನ ಪೆಟ್ರೋಲ್ ಖಾಲಿ ಆಗೋಯ್ತು. ನಾನು ಹೋಗುವ ಹೊತ್ತಿಗೆ ಮಾರ್ನಿಂಗ್ ಶೋ ಶುರುವಾಗಿತ್ತು. ನಾನು ಥಿಯೇಟರ್ ಒಳಗೆ ಹೋಗೋಕೆ ಆಗಲಿಲ್ಲ. ಬೇಜಾರು ಮಾಡಿಕೊಂಡು ಗಾಂಧಿನಗರದ ಕಡೆ ಬೈಕ್ ತಳ್ಳಿಕೊಂಡು ಬಂದೆ. ಈಶ್ವರಿ ಮೂವೀಸ್ ಒಳಗೆ ನನ್ನನ್ನ ಕರೆದರು. ರವಿಚಂದ್ರನ್ ಅವತ್ತು ತುಂಬಾ ಖುಷಿಯಾಗಿದ್ದರು. ''ಇವತ್ತು ಬಿಡುಗಡೆಯಾಗಿರುವ 'ಪುಟ್ನಂಜ' ಸಿನಿಮಾ ಖಂಡಿತ ಹಿಟ್ ಆಗುತ್ತೆ. ಇದು ಹಿಟ್ ಆಗೋದು ನಿನ್ನ ಡೈಲಾಗ್ಸ್‌ನಿಂದ'' ಅಂತ ರವಿಚಂದ್ರನ್ ನನಗೆ ಹೇಳಿದರು. ನನ್ನನ್ನ ತುಂಬಾ ಹೊಗಳಿದರು. ಮೀನಾ ಅವರ ತಾಯಿ ಕೂಡ ನನ್ನನ್ನ ಹೊಗಳಿದರು'' ರವಿಚಂದ್ರನ್ ಅವರ ದೊಡ್ಡ ಗುಣ ''ನನ್ನ ಕಲ್ಪನೆಯಲ್ಲಿ ಅಲ್ಲಿಯವರೆಗೂ ಇದ್ದದ್ದು, ಒಂದು ಸಿನಿಮಾಗೆ ಡೈಲಾಗ್ ಬರೆದರೆ 15 ಸಾವಿರ ರೂಪಾಯಿ ಕೊಡ್ತಾರೆ ಅಂತ. ಆ ದುಡ್ಡು ನನಗೆ ಅದಾಗಲೇ ಬಂದಿತ್ತು. ಅದರ ಮೇಲೆ ಇನ್ನೇನೂ ಕೊಡಲ್ಲ. ನಾನು ಬೇರೆ ಕೆಲಸ ಹುಡುಕಬೇಕು ಅಂತ ಅಂದುಕೊಂಡಿದ್ದೆ. ಅಲ್ಲಿ ನೋಡಿದರೆ ಮತ್ತೆ ನನಗೆ ಕವರ್‌ನಲ್ಲಿ ದುಡ್ಡು ಕೊಟ್ಟರು. ಆ ಕವರ್‌ನಲ್ಲಿ 1,35,000 ರೂಪಾಯಿ ಇತ್ತು. ಒಟ್ಟು ಒಂದುವರೆ ಲಕ್ಷ ರೂಪಾಯಿ. ''ಇದು ನಿನ್ನ ಸಂಬಳ. ನಿಜವಾಗಲೂ ನೀನು ಚೆನ್ನಾಗಿ ಕೆಲಸ ಮಾಡಿದ್ದೀಯಾ'' ಅಂತ ರವಿಚಂದ್ರನ್ ಹೇಳಿದರು. ನನಗೆ ಆಗ ನಂಬೋಕೆ ಆಗಲಿಲ್ಲ. ಪೆಟ್ರೋಲ್ ಇಲ್ಲದೆ ಗಾಡಿ ತಳ್ಳಿಕೊಂಡು ಓಡಾಡುತ್ತಿದ್ದವನ ಕೈಗೆ ಇಷ್ಟೊಂದು ದುಡ್ಡು ಬಂದಿದ್ದು ಮ್ಯಾಜಿಕ್. ಅಂತಹ ಮ್ಯಾಜಿಕ್‌ಅನ್ನು ರವಿಚಂದ್ರನ್ ಅವರು ನನ್ನ ಜೀವನದಲ್ಲಿ ಮಾಡಿದರು. ಅದು ರವಿಚಂದ್ರನ್ ಅವರ ದೊಡ್ಡ ಗುಣ. 1993 ರಿಂದ 2003 ವರೆಗೂ ಸುಮಾರು ಹತ್ತು ಚಿತ್ರಗಳಲ್ಲಿ ನಾನು ಅವರ ಜೊತೆಗೆ ಕೆಲಸ ಮಾಡಿದೆ. 'ರಸಿಕ', 'ಜಾಣ', 'ಪುಟ್ನಂಜ', 'ಚೆಲುವ' ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದೆ. ರವಿಚಂದ್ರನ್ ಅವರನ್ನು ನಾನು ಗುರು ಅಂತ ಪರಿಗಣಿಸುತ್ತೇನೆ. ನನಗೆ ಅವರು ಹಲವು ವಿಷಯಗಳನ್ನು ಕಲಿಸಿದ್ದಾರೆ'' ಎಂದು ಸಂದರ್ಶನದಲ್ಲಿ ಬಿ.ಸುರೇಶ ಹೇಳಿದ್ದಾರೆ.