ರೈತರಿಗೆ ಸಿಹಿ ತಂದ ಗೆಣಸು; 2 ವರ್ಷಗಳ ನಂತರ ಕುದುರಿದ ಬೇಡಿಕೆ, ಹೊರ ರಾಜ್ಯಗಳಿಗೆ ಮಾರಾಟ!

ರಾಜ್ಯದಲ್ಲಿ ಬೆಳೆದ ಬಹುಪಾಲು ಸಿಹಿಗೆಣಸು ಬೇರೆಡೆ ಪೂರೈಕೆಯಾಗುತ್ತವೆ. ಅದರಲ್ಲಿ ಅರ್ಧದಷ್ಟು ಆಹಾರಕ್ಕೆ ಬಳಸಲಾಗುತ್ತಿದ್ದರೆ ಇನ್ನುಳಿದ ಸಿಹಿಗೆಣಸನ್ನು ಉಪ ಉತ್ಪನ್ನ ತಯಾರಿಕೆಗೆ ಬಳಸಲಾಗುತ್ತಿದೆ. ರಾಜ್ಯದಲ್ಲೂ ಸಿಹಿಗೆಣಸು ಸಂಸ್ಕರಣಾ ಘಟಕ ಸ್ಥಾಪಿಸಿದರೆ ಗೆಣಸು ಬೆಳೆದವರ ಬಾಳು ಇನ್ನಷ್ಟು ಸಿಹಿಯಾಗುತ್ತದೆ ಎನ್ನುತ್ತಾರೆ ರೈತರು.

ರೈತರಿಗೆ ಸಿಹಿ ತಂದ ಗೆಣಸು; 2 ವರ್ಷಗಳ ನಂತರ ಕುದುರಿದ ಬೇಡಿಕೆ, ಹೊರ ರಾಜ್ಯಗಳಿಗೆ ಮಾರಾಟ!
Linkup
ಮಹೇಶ್‌ ವಿಜಾಪುರ ಬೆಳಗಾವಿ: ಕೊರೊನಾ ಕಾರಣದಿಂದ ಬೇಡಿಕೆ ಕಳೆದುಕೊಂಡಿದ್ದ ಸಿಹಿಗೆಣಸಿಗೆ ಈ ವರ್ಷ ಭಾರಿ ಡಿಮ್ಯಾಂಡ್‌ ಬಂದಿದ್ದು, ಬೆಳೆಗಾರರ ಮೊಗದಲ್ಲಿ ಮಂದಹಾಸ ಮಿನುಗುತ್ತಿದೆ. ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ಸಿಹಿಗೆಣಸು ಬೆಳೆಯಲಾಗುತ್ತಿದ್ದು, ಬೆಳಗಾವಿ ಮಣ್ಣಲ್ಲಿ ಬೆಳೆಯುವ ಗೆಣಸಿಗೆ ಅತ್ಯಧಿಕ ಬೇಡಿಕೆ ಇದೆ. ಜಿಲ್ಲೆಯಲ್ಲಿ ಬೆಳೆದ ಬಹುಪಾಲು ಸಿಹಿಗೆಣಸು ಉತ್ತರ ಭಾರತದ ರಾಜ್ಯಗಳಿಗೆ ಸರಬರಾಜಾಗುತ್ತವೆ. ಹೀಗಾಗಿ, ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಳಿಗೆಗಳಲ್ಲಿ ಈಗ ಸಿಹಿಗೆಣಸಿನ ಚೀಲಗಳ ರಾಶಿಯೇ ಕಂಡುಬರುತ್ತಿದೆ. ರಾಜ್ಯದಲ್ಲಿಅತಿ ಹೆಚ್ಚುಜಿಲ್ಲೆಯಲ್ಲಿ ಬೆಳಗಾವಿ ಮತ್ತು ಖಾನಾಪುರ ತಾಲೂಕಿನಲ್ಲಿಯೇ ಅತಿ ಹೆಚ್ಚು ಗೆಣಸು ಬೆಳೆಯಲಾಗುತ್ತಿದೆ. ಪಕ್ಕದ ಧಾರವಾಡ ಜಿಲ್ಲೆಗೆ ಹೋಲಿಸಿದರೆ ಬೆಳಗಾವಿ ಜಿಲ್ಲೆ(3000 ಹೆಕ್ಟೇರ್‌) ಕಡಿಮೆ ಗೆಣಸು ಪ್ರದೇಶ ಹೊಂದಿದ್ದರೂ ಬೆಳಗಾವಿ ಸಗಟು ಮಾರುಕಟ್ಟೆಯಲ್ಲಿರಾಜ್ಯದಲ್ಲಿಯೇ ಅತಿ ಹೆಚ್ಚು ಗೆಣಸು ವಹಿವಾಟು ನಡೆಯುತ್ತದೆ. ಜತೆಗೆ ಮಹಾರಾಷ್ಟ್ರದ ಚಂದಗಡ ತಾಲೂಕಿನ ಆಸುಪಾಸಿನ ಪ್ರದೇಶಗಳ ರೈತರೂ ಗೆಣಸು ಮಾರಾಟಕ್ಕೆ ಬೆಳಗಾವಿ ಎಪಿಎಂಸಿಯನ್ನೇ ಅವಲಂಬಿಸಿದ್ದಾರೆ. ಉತ್ತರ ಭಾರತಕ್ಕೆ ರಫ್ತುಈ ಬಾರಿ ಒಂದೇ ತಿಂಗಳಲ್ಲಿ 76,874 ಕ್ವಿಂಟಾಲ್‌ (1.53 ಲಕ್ಷ ಚೀಲ) ಸಿಹಿಗೆಣಸು ಬೆಳಗಾವಿ ಎಪಿಎಂಸಿಗೆ ಬಂದಿದೆ. 2018-19ರ ಸಾಲಿನಲ್ಲಿ 3.68 ಲಕ್ಷ ಕ್ವಿಂಟಾಲ್‌ ಗೆಣಸು ಖರೀದಿಯಾಗಿತ್ತು. ಎಪಿಎಂಸಿಗೆ ಬರುವ ಒಟ್ಟು ಗೆಣಸಿನ ಪೈಕಿ ಶೇ.95ರಷ್ಟು ಉತ್ತರ ಭಾರತದ ರಾಜ್ಯಗಳಾದ ದೆಹಲಿ, ಉತ್ತರ ಪ್ರದೇಶ, ಪಂಜಾಬ್‌ಗೆ ರಫ್ತಾಗುತ್ತಿದೆ. ಕೊರೊನಾ ಕಾರಣಕ್ಕೆ ಎರಡು ವರ್ಷಗಳಿಂದ ಗೆಣಸಿಗೆ ಬೇಡಿಕೆ ಸಿಕ್ಕಿರಲಿಲ್ಲ. ಆದರೆ, ಈ ಬಾರಿ ದೆಹಲಿ ಮತ್ತು ಉತ್ತರ ಪ್ರದೇಶ ರಾಜ್ಯಗಳ ವ್ಯಾಪಾರಿಗಳು ನಿತ್ಯ 40 ರಿಂದ 50 ಲೋಡ್‌ ಸಿಹಿಗೆಣಸು ಖರೀದಿಸುತ್ತಿದ್ದಾರೆ. ಹೀಗಾಗಿ, ಬುಧವಾರ ಮತ್ತು ಶನಿವಾರ ಬೆಳಗಾವಿ ಎಪಿಎಂಸಿ ತುಂಬೆಲ್ಲ ಸಿಹಿಗೆಣಸು ಖರೀದಿ ಹಬ್ಬದ ಸ್ವರೂಪ ಪಡೆದುಕೊಂಡಿರುತ್ತದೆ. ''ಉತ್ತರ ಭಾರತದಲ್ಲಿ ಅತ್ಯುತ್ಸಾಹದಿಂದ ಆಚರಿಸುವ ಛಟ್‌ ಹಬ್ಬಕ್ಕೆ ಸಿಹಿಗೆಣಸಿನ ಆಹಾರ ಕಡ್ಡಾಯ. ಹಾಗಾಗಿ ಕಾರ್ತಿಕ ಮಾಸದಲ್ಲಿ ಮಾರುಕಟ್ಟೆಗೆ ಬರುವ ಗೆಣಸಿನ ಬಹುಪಾಲು ಉತ್ತರ ಭಾರತದ ರಾಜ್ಯಗಳಿಗೆ ರಫ್ತಾಗುತ್ತದೆ'', ಎನ್ನುತ್ತಾರೆ ಇಲ್ಲಿನ ಗೆಣಸು ಮಾರಾಟಗಾರರು. ಬೇಕಿದೆ ಪ್ರೋತ್ಸಾಹ ರಾಜ್ಯದಲ್ಲಿ ಬೆಳೆದ ಬಹುಪಾಲು ಸಿಹಿಗೆಣಸು ಬೇರೆಡೆ ಪೂರೈಕೆಯಾಗುತ್ತವೆ. ಅದರಲ್ಲಿ ಅರ್ಧದಷ್ಟು ಆಹಾರಕ್ಕೆ ಬಳಸಲಾಗುತ್ತಿದ್ದರೆ ಇನ್ನುಳಿದ ಸಿಹಿಗೆಣಸನ್ನು ಉಪ ಉತ್ಪನ್ನ ತಯಾರಿಕೆಗೆ ಬಳಸಲಾಗುತ್ತಿದೆ. ರಾಜ್ಯದಲ್ಲೂ ಸಿಹಿಗೆಣಸು ಸಂಸ್ಕರಣಾ ಘಟಕ ಸ್ಥಾಪಿಸಿದರೆ ಗೆಣಸು ಬೆಳೆದವರ ಬಾಳು ಇನ್ನಷ್ಟು ಸಿಹಿಯಾಗುತ್ತದೆ ಎನ್ನುತ್ತಾರೆ ರೈತರು. ಗೆಣಸು ಬೆಳೆ ಉಪಉತ್ಪನ್ನ ತಯಾರಿಕೆ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯ ಸಂಶೋಧನೆ ನಡೆಸುತ್ತಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು. ಸತ್ವಯುತ ಆಹಾರ ಗಡ್ಡೆಗಳ ಜಾತಿಗೆ ಸೇರಿರುವ ಗೆಣಸು ತನ್ನೊಳಗೆ ಹತ್ತು ಹಲವು ಪೋಷಕಾಂಶಗಳನ್ನು ಅಡಗಿಸಿಕೊಂಡಿದೆ. ಕರ್ನಾಟಕದ ಕೆಲ ಜಿಲ್ಲೆಗಳ ಸೀಮಿತ ಪ್ರದೇಶದಲ್ಲಿ ಮಾತ್ರ ರೈತರು ಬೆಳೆಯುತ್ತಾರೆ. ಕರಾವಳಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಬೆಳಗಾವಿ ಭಾಗಗಳಲ್ಲಿ ಗೆಣಸು ಬೆಳೆ ಹೆಚ್ಚು. ಆಲೂಗಡ್ಡೆಗಿಂತ ಖರ್ಚು-ವೆಚ್ಚ ಕಡಿಮೆ ಇರುವುದರಿಂದ ಸಿಹಿಗೆಣಸು ಬೆಳೆಯುತ್ತಿದ್ದೇವೆ. ಉಪ ಉತ್ಪನ್ನಗಳ ಘಟಕ ಸ್ಥಾಪಿಸಿದರೆ ಸಿಹಿಗೆಣಸು ಬೆಳೆಗೆ ಇನ್ನಷ್ಟು ಪ್ರೋತ್ಸಾಹ ಸಿಗುತ್ತದೆ. ಬಾಳು ಪಾವಲೆ, ಗೆಣಸು ಬೆಳೆಯುವ ರೈತ ಪೌಷ್ಟಿಕಾಂಶ ಹೊಂದಿರುವ ಗೆಣಸು ಬೆಳೆಗೆ ರೋಗ ಕಡಿಮೆ. ಅಂತರ್‌ ಬೆಳೆಯಾಗಿ ಬೆಳೆದರೆ ರೈತರು ಆರ್ಥಿಕತೆ ಹೆಚ್ಚಿಸಿಕೊಳ್ಳಬಹುದು. ಪ್ರವೀಣ್‌ ಮಹೇಂದ್ರಕರ. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೆಶಕರು, ಬೆಳಗಾವಿ