ರಾಜ್ಯದ ಮುನ್ನಡೆಯೇ ಸರಕಾರದ ಮುಂದಿರುವ ಗುರಿ: ಬಸವರಾಜ ಬೊಮ್ಮಾಯಿ

ಕೋವಿಡ್ ಮಾರ್ಗಸೂಚಿ ಪ್ರಕಾರ, ಅಂತರ ಕಾಪಾಡಿಕೊಂಡು ಸ್ವಾತಂತ್ರ್ಯ ದಿನ ಆಚರಿಸಲಾಗುವುದು. ಕೋವಿಡ್ ಒಂದನೇ, ಎರಡನೇ ಅಲೆಯ ಅನುಭವದಿಂದ ಈ ಬಾರಿ ಕೋವಿಡ್ ನಿರ್ವಹಣೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಬೇಕೆಂಬ ಚಿಂತನೆ ಇದೆ.

ರಾಜ್ಯದ ಮುನ್ನಡೆಯೇ ಸರಕಾರದ ಮುಂದಿರುವ ಗುರಿ: ಬಸವರಾಜ ಬೊಮ್ಮಾಯಿ
Linkup
ಬೆಂಗಳೂರು: 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ಸೌಭಾಗ್ಯ ಒದಗಿಬಂದಿದೆ. ಕನ್ನಡ ನಾಡು, ನುಡಿ, ಸಾಹಿತ್ಯ, ಆಡಳಿತ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ದೇಶದಲ್ಲೇ ಮಾದರಿಯಾಗಿದೆ. 75 ವರ್ಷ ನಡೆದು ಬಂದ ದಾರಿ, ಇನ್ನೂ ನಡೆಯಬೇಕಾದ ದಾರಿಯ ಬಗ್ಗೆ ಚಿಂತನೆ ಮಾಡಬೇಕಿದೆ. ನಮ್ಮ ಸರಕಾರ ಕೂಡ ಅದೇ ದಿಕ್ಕಿನಲ್ಲಿ ಚಿಂತನೆ ಮಾಡುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ತಮ್ಮ ನಿವಾಸದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ "ಕೋವಿಡ್ ಮಾರ್ಗಸೂಚಿ ಪ್ರಕಾರ, ಅಂತರ ಕಾಪಾಡಿಕೊಂಡು ಸ್ವಾತಂತ್ರ್ಯ ದಿನ ಆಚರಿಸಲಾಗುವುದು. ಕೋವಿಡ್ ಒಂದನೇ, ಎರಡನೇ ಅಲೆಯ ಅನುಭವದಿಂದ ಈ ಬಾರಿ ಕೋವಿಡ್ ನಿರ್ವಹಣೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಬೇಕೆಂಬ ಚಿಂತನೆ ಇದೆ. ಚಿಕಿತ್ಸೆಗಿಂತ ರೋಗ ವನ್ನು ತಡೆಗಟ್ಟುವುದು ಉತ್ತಮ ಎಂಬ ದೃಷ್ಟಿಯಿಂದ ಹಂತಹಂತವಾಗಿ ಸಂಪೂರ್ಣ ನಿಯಂತ್ರಣ ಮಾಡಲಾಗುವುದು" ಎಂದು ತಿಳಿಸಿದರು. "ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ, ತಜ್ಞರ ಸಲಹೆ ಪಡೆದುಕೊಂಡು, ವೈಜ್ಞಾನಿಕವಾಗಿ ಚರ್ಚಿಸಿ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಜನರಿಗೆ, ಜನರ ಬದುಕಿಗೆ ತೊಂದರೆಯಾಗಬಾರದು, ಹಾಗೆಯೇ ಕೊರೋನಾ ಹರಡಬಾರದು ಎನ್ನುವುದೇ ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ನಮ್ಮ ಸರಕಾರ ಕಾರ್ಯಪ್ರವೃತ್ತವಾಗಿದೆ" ಎಂದು ಬಸವರಾಜ ಬೊಮ್ಮಾಯಿ ವಿವರಿಸಿದರು.