ಪ್ರಣಬ್‌ ಮುಖರ್ಜಿ ಪುತ್ರ ಅಭಿಜಿತ್‌ ಟಿಎಂಸಿಗೆ ಸೇರ್ಪಡೆ, ಕಾಂಗ್ರೆಸ್‌ಗೆ ಮತ್ತೊಂದು ನಷ್ಟ

ಮಮತಾ ಬ್ಯಾನರ್ಜಿ ಬಿಜೆಪಿಯ ಇತ್ತೀಚಿನ ಕೋಮು ಅಲೆಯನ್ನು ತಡೆದ ರೀತಿಯಲ್ಲೇ, ಭವಿಷ್ಯದಲ್ಲಿ ಇಡೀ ದೇಶದಲ್ಲಿಯೂ ಅವರು ಇದೇ ರೀತಿ ಮಾಡಲಿದ್ದಾರೆ ಎಂದು ನಾನು ನಂಬುತ್ತೇನೆ ಎಂದು ಟಿಎಂಸಿ ಸೇರ್ಪಡೆ ಬಳಿಕ ಅಭಿಜಿತ್‌ ಮುಖರ್ಜಿ ಹೇಳಿದ್ದಾರೆ.

ಪ್ರಣಬ್‌ ಮುಖರ್ಜಿ ಪುತ್ರ ಅಭಿಜಿತ್‌ ಟಿಎಂಸಿಗೆ ಸೇರ್ಪಡೆ, ಕಾಂಗ್ರೆಸ್‌ಗೆ ಮತ್ತೊಂದು ನಷ್ಟ
Linkup
ಕೋಲ್ಕೊತ್ತಾ: ಮಾಜಿ ರಾಷ್ಟ್ರಪತಿ ಪುತ್ರ ಸೋಮವಾರ ತೃಣಮೂಲ ಕಾಂಗ್ರೆಸ್‌ಗೆ () ಸೇರ್ಪಡೆಯಾಗಿದ್ದಾರೆ. ಟಿಎಂಸಿ ಸೇರ್ಪಡೆ ಬಳಿಕ ಪ್ರತಿಕ್ರಿಯೆ ನೀಡಿರುವ ಅಭಿಜಿತ್‌ ಮುಖರ್ಜಿ, "ಮಮತಾ ಬ್ಯಾನರ್ಜಿ ಬಿಜೆಪಿಯ ಇತ್ತೀಚಿನ ಕೋಮು ಅಲೆಯನ್ನು ತಡೆದ ರೀತಿಯಲ್ಲೇ, ಇತರರ ಬೆಂಬಲದೊಂದಿಗೆ ಭವಿಷ್ಯದಲ್ಲಿ, ಇಡೀ ದೇಶದಲ್ಲಿಯೂ ಅವರು ಇದೇ ರೀತಿ ಮಾಡಲಿದ್ದಾರೆ ಎಂದು ನಾನು ನಂಬುತ್ತೇನೆ,” ಎಂದು ಹೇಳಿದ್ದಾರೆ. ಅಭಿಜಿತ್‌ ಮುಖರ್ಜಿ ಜಂಗಿಪುರ ಕ್ಷೇತ್ರದ ಮಾಜಿ ಸಂಸದರಾಗಿದ್ದು, ಇದಕ್ಕೂ ಮೊದಲು ನಲ್ಹಟಿ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರೂ ಆಗಿದ್ದರು. ಮುಖರ್ಜಿಯವರಿಗೆ ಅವರು ಜಂಗಿಪುರ ವಿಧಾನಸಭೆ ಕ್ಷೇತ್ರದಲ್ಲಿ ಟಿಕೆಟ್‌ ನೀಡುವ ಸಾಧ್ಯತೆ ಇದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರದ ಅಭ್ಯರ್ಥಿ ನಿಧನರಾದ ಹಿನ್ನೆಲೆಯಲ್ಲಿ ಇಲ್ಲಿ ಮತದಾನ ಮುಂದೂಡಿಕೆಯಾಗಿತ್ತು. ಇಲ್ಲೀಗ ಉಪಚುನಾವಣೆ ನಡೆಯಬೇಕಿದೆ. ಜಂಗಿಪುರ್‌ ಲೋಕಸಭಾ ಕ್ಷೇತ್ರದಲ್ಲಿ ಅಭಿಜಿತ್‌ ತಂದೆ ಪ್ರಣಬ್‌ ಮುಖರ್ಜಿ ಸತತ ಎರಡು ಬಾರಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ನಂತರ 2012ರಲ್ಲಿ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವ ವೇಳೆ ಅವರು ಈ ಕ್ಷೇತ್ರವನ್ನು ತೊರೆದರು. ಬಳಿಕ 2012ರ ಉಪಚುನಾವಣೆ ಹಾಗೂ 2014ರ ಲೋಕಸಭೆ ಚುನಾವಣೆಯಲ್ಲಿಯೂ ಇಲ್ಲಿ ಅಭಿಜಿತ್‌ ಮುಖರ್ಜಿ ಗೆಲುವು ಸಾಧಿಸಿದ್ದರು. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಡಪಕ್ಷಗಳೊಂದಿಗೆ ಸೇರಿ ಚುನಾವಣೆ ಎದುರಿಸಿದ್ದ ಕಾಂಗ್ರೆಸ್‌ಗೆ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಬಳಿಕ ಇದೀಗ ಅಭಿಜಿತ್‌ ಮುಖರ್ಜಿ ಅದೇ ಕಾಂಗ್ರೆಸ್‌ನಿಂದ ಟಿಎಂಸಿಗೆ ನೆಗೆದಿದ್ದಾರೆ.