ಯೋಗಿ ಆದಿತ್ಯನಾಥ್, ಫಡ್ನವೀಸ್ ರೀತಿಯಲ್ಲಿ ಸಿಎಂ ಸ್ಥಾನಕ್ಕೆ ಅಚ್ಚರಿಯ ಆಯ್ಕೆ ಆಗಬಹುದು: ಸಂಸದ ಬಿವೈ ರಾಘವೇಂದ್ರ

ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ನಡೆದಂತೆಯೇ ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಹೊಸ ಮುಖದ ಹೆಸರನ್ನು ಹೈಕಮಾಂಡ್ ಆಯ್ಕೆ ಮಾಡಿದರೂ ಅಚ್ಚರಿ ಪಡಬೇಕಿಲ್ಲ ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದ್ದಾರೆ.

ಯೋಗಿ ಆದಿತ್ಯನಾಥ್, ಫಡ್ನವೀಸ್ ರೀತಿಯಲ್ಲಿ ಸಿಎಂ ಸ್ಥಾನಕ್ಕೆ ಅಚ್ಚರಿಯ ಆಯ್ಕೆ ಆಗಬಹುದು: ಸಂಸದ ಬಿವೈ ರಾಘವೇಂದ್ರ
Linkup
ಬೆಂಗಳೂರು: ಬಳಿಕ ಸ್ಥಾನಕ್ಕೆ ಬರುವವರು ಯಾರು ಎಂಬ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಹಲವಾರು ಹೆಸರುಗಳು ಕೇಳಿಬರುತ್ತಿವೆ. ಆದರೆ, ಮುಖ್ಯಮಂತ್ರಿ ಸ್ಥಾನಕ್ಕೆ ಅಚ್ಚರಿಯ ಹೆಸರು ಅಂತಿಮವಾದರೂ ಆಗಬಹುದು ಎಂದು ಸಂಸದ ಹೇಳಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿವೈ ರಾಘವೇಂದ್ರ, ದೇವೇಂದ್ರ ಫಡ್ನವೀಸ್, ಯೋಗಿ ಆದಿತ್ಯನಾಥ್ ಮಾದರಿಯಲ್ಲಿಯೇ ಅನಿರೀಕ್ಷಿತ ಆಯ್ಕೆಯಾಗಬಹುದು ಎಂದು ಸುಳಿವು ನೀಡಿದ್ದಾರೆ. 'ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು. ಪಕ್ಷ ಯಾವ ಸಂದರ್ಭದಲ್ಲಿ ಏನು ತೀರ್ಮಾನ ಮಾಡುತ್ತದೆ ಎಂದು ಊಹಿಸಲು ಆಗುವುದಿಲ್ಲ. ಸಂಸದರಾಗಿದ್ದ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಮುಖ್ಯಮಂತ್ರಿಯಾದರು. ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ಸಿಎಂ ಆಗಿದ್ದರು. ಹಾಗೆಯೇ ಈಗಿನ ಕೇಂದ್ರ ಕ್ಯಾಬೆನಟ್ ಪುನರಾಚನೆಯಾಗಿತ್ತು. ಇದೆಲ್ಲವೂ ನಿರೀಕ್ಷೆಯನ್ನೂ ಮೀರಿದ್ದು' ಎಂದು ಅವರು ಹೇಳಿದ್ದಾರೆ. 'ಕೇಂದ್ರದ ನಾಯಕರು ಯಾವ ಸಂದರ್ಭದಲ್ಲಿ ಯಾವ ರೀತಿ ಚಿಂತನೆ ಮಾಡುತ್ತಾರೆ ಎನ್ನುವುದು ಹೇಳಲಾಗದು. ಆದರೆ ಪಕ್ಷದ ಹಿತದೃಷ್ಟಿಯಿಂದ ತೀರ್ಮಾನ ಮಾಡುತ್ತಾರೆ. ಇದನ್ನು ನೀವೆಲ್ಲ ಗಮನಿಸಿದ್ದೀರಿ. ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ನನಗೂ ಏನೂ ತಿಳಿದಿಲ್ಲ. ಯೋಗಿ, ಫಡ್ನವೀಸ್ ಮುಂತಾದ ನಿದರ್ಶನಗಳನ್ನಷ್ಟೇ ನೀಡಿದ್ದೇನೆ. ಈಗಾಗಲೇ ಸಿಎಂ ಸ್ಥಾನದ ಅಭ್ಯರ್ಥಿಯ ಬಗ್ಗೆ ತೀರ್ಮಾನ ಆಗಿರಬಹುದು' ಎಂದಿದ್ದಾರೆ. ದಿಲ್ಲಿಯಲ್ಲಿ ತೀರ್ಮಾನ ಆಗುತ್ತದೆನಮ್ಮದು ರಾಷ್ಟ್ರೀಯ ಪಕ್ಷವಾಗಿರುವುದರಿಂದ ಹಲವು ಹಂತಗಳಲ್ಲಿ ಚರ್ಚೆಗಳು ನಡೆಯುತ್ತವೆ. ಶಾಸಕಾಂಗ ಪಕ್ಷದ ಸಭೆ, ಪಕ್ಷದ ಕೋರ್ ಕಮಿಟಿ, ಸಂಸದೀಯ ಸಮಿತಿಗಳಲ್ಲಿ ಚರ್ಚೆಗಳು ನಡೆಯಲಿದೆ. ಪಕ್ಷದ ಮುಖ್ಯಸ್ಥರು ಸಮಾಲೋಚನೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.