ಮಹಾರಾಷ್ಟ್ರದಲ್ಲಿ ಯಶಸ್ವಿಯಾದ ಲಾಕ್‌ಡೌನ್‌ ಅಸ್ತ್ರ, ಸುರಕ್ಷತೆಯತ್ತ ಮುಂಬಯಿ

ಕಳೆದ ಎರಡು ವಾರಗಳಿಂದ ನಿತ್ಯ ಸರಾಸರಿ 50 ರಿಂದ 60 ಸಾವಿರ ಕೇಸ್‌ಗಳು ವರದಿಯಾಗುತ್ತಿದ್ದ ಮಹಾರಾಷ್ಟ್ರದಲ್ಲಿ, ಕಳೆದ 24 ಗಂಟೆಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ 48,700ಕ್ಕೆ ಇಳಿದಿದ್ದು, ಆತಂಕ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.

ಮಹಾರಾಷ್ಟ್ರದಲ್ಲಿ ಯಶಸ್ವಿಯಾದ ಲಾಕ್‌ಡೌನ್‌ ಅಸ್ತ್ರ, ಸುರಕ್ಷತೆಯತ್ತ ಮುಂಬಯಿ
Linkup
ಮುಂಬಯಿ: ಕೊರೊನಾ ಪ್ರಸರಣ ತಡೆಗೆ ಪ್ರಯೋಗಿಸಿದ ಲಾಕ್‌ಡೌನ್‌ ಅಸ್ತ್ರ ಫಲ ನೀಡುತ್ತಿದೆ. ಎರಡು ವಾರಗಳಿಂದ ಸರಾಸರಿ ನಿತ್ಯ 50 ರಿಂದ 60 ಸಾವಿರ ಕೇಸ್‌ಗಳು ವರದಿಯಾಗುತ್ತಿದ್ದರೆ, ಕಳೆದ 24 ಗಂಟೆಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ 48,700ಕ್ಕೆ ಇಳಿದಿದೆ. ಒಂದೇ ದಿನದಲ್ಲಿ 524 ಸಾವು ಸಂಭವಿಸಿವೆ. ಇನ್ನು ರಾಷ್ಟ್ರದ ವಾಣಿಜ್ಯ ರಾಜಧಾನಿ ಎನಿಸಿರುವ ಮುಂಬಯಿನಲ್ಲಿ ಸೋಮವಾರ 41 ಸಾವಿರ ಜನರಿಗೆ ಪರೀಕ್ಷೆ ಮಾಡಿದ್ದರೂ ಕೇವಲ 3,792 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದು ನಿಜಕ್ಕೂ ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಆರೋಗ್ಯ ತಜ್ಞರು ವಿಶ್ಲೇಷಿಸಿದ್ದಾರೆ. ಒಂದು ಕಡೆ ಲಾಕ್‌ಡೌನ್‌ನಿಂದ ಜನರ ಓಡಾಟ ಕಡಿಮೆಯಾಗಿದೆ. ಇನ್ನೊಂದು ಕಡೆ ಸೋಂಕಿನ ತೀವ್ರತೆಯ ಮೌಲ್ಯಮಾಪನ, ಚಿಕಿತ್ಸೆ ಹಾಗೂ ನಿರ್ವಹಣೆ ಸೂತ್ರವನ್ನು ಪಾಲಿಸಲಾಗುತ್ತಿದ್ದು, ಇದೆಲ್ಲವೂ ಸೋಂಕು ಶರವೇಗದಲ್ಲಿ ಹರಡುವುದಕ್ಕೆ ಕಡಿವಾಣ ಹಾಕಿದೆ. ಎರಡನೇ ಅಲೆ ವೇಳೆ ಮಹಾರಾಷ್ಟ್ರದಲ್ಲಿ , ಪುಣೆ ಸೇರಿ ಹಲವು ನಗರಗಳು ಹಾಟ್‌ಸ್ಪಾಟ್‌ ಆಗಿವೆ. ಆದರೆ ಈಗ ಮುಂಬಯಿನಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಏ.4ರಂದು 11,163 ಕೇಸ್‌ಗಳು ನಗರದಲ್ಲಿ ವರದಿಯಾಗಿದ್ದರೆ, ಭಾನುವಾರ 5,542 ಸೋಂಕಿತರು ಪತ್ತೆಯಾಗಿದ್ದರು. ಸೋಮವಾರ ಈ ಪ್ರಮಾಣದಲ್ಲಿಇನ್ನಷ್ಟು ಇಳಿಕೆಯಾಗಿದೆ. ಇದು ಖುಷಿಯ ವಿಚಾರ ಎನ್ನುತ್ತಾರೆ ಡಾ. ಶಶಾಂಕ್‌ ಜೋಶಿ. ಮುಂಬಯಿಯಲ್ಲಿ ಸೋಂಕು ಪೀಕ್‌ ತಲುಪಿ ಈಗ ಇಳಿಯುತ್ತಿದೆ ಎಂದು ಅವರು ಹೇಳಿದ್ದಾರೆ. ಆಕ್ಸಿಜನ್‌ ಕೊರತೆ ಇಲ್ಲದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕದ ಸಂಗ್ರಹ ಇದೆ. ಆಸ್ಪತ್ರೆಗಳಿಗೆ ಸಾಗಿಸುವ ಕೆಲಸವೂ ತ್ವರಿತಗತಿಯಲ್ಲಿ ಸಾಗಿದೆ. ಯಾವುದೇ ವದಂತಿಗಳಿಗೆ ಕಿವಿಗೊಡುವ ಅಗತ್ಯವಿಲ್ಲ. ಆತಂಕ ಬೇಡ ಎಂದು ಕೇಂದ್ರ ಗೃಹ ಸಚಿವಾಲಯ ಸೋಮವಾರ ತಿಳಿಸಿದೆ.