'ಅಬ ಜಬ ದಬ' ಚಿತ್ರದಲ್ಲಿ ನಟ ಶಂಕರ್‌ ನಾಗ್! ಅಚ್ಚರಿ ಮೂಡಿಸಿದ ನಿರ್ದೇಶಕ ಮಯೂರ

ಕನ್ನಡಿಗರು ಎಂದಿಗೂ ಮರೆಯದ ಹೆಸರು 'ಕರಾಟೆ ಕಿಂಗ್' ಶಂಕರ್ ನಾಗ್‌ ಅವರದ್ದು. ನಮ್ಮೊಂದಿಗೆ ದೈಹಿಕವಾಗಿ ಅವರು ಇಲ್ಲವಾಗಿ 30 ವರ್ಷ ಕಳೆದರೂ, ಶಂಕರ್ ನಾಗ್ ನೆನಪು ಮಾತ್ರ ಶಾಶ್ವತ. ಇದೀಗ ಅವರು 'ಅಬ ಜಬ ದಬ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿ ಆಗಿದೆ.

'ಅಬ ಜಬ ದಬ' ಚಿತ್ರದಲ್ಲಿ ನಟ ಶಂಕರ್‌ ನಾಗ್! ಅಚ್ಚರಿ ಮೂಡಿಸಿದ ನಿರ್ದೇಶಕ ಮಯೂರ
Linkup
ಅವಿನಾಶ್ ಜಿ. ರಾಮ್ 'ಕರಾಟೆ ಕಿಂಗ್' ಶಂಕರ್ ನಾಗ್‌- ಇದು ಕನ್ನಡಿಗರು ಎಂದಿಗೂ ಮರೆಯದ ಹೆಸರು. ನಮ್ಮೊಂದಿಗೆ ದೈಹಿಕವಾಗಿ ಇಲ್ಲವಾಗಿ 31 ವರ್ಷ ಕಳೆದರೂ, ಅವರ ನೆನಪು ಮಾತ್ರ ಶಾಶ್ವತ. ಕಡಿಮೆ ಅವಧಿಯಲ್ಲಿಯೇ ಸಾಕಷ್ಟು ಸಿನಿಮಾ, ಹೆಸರು ಮಾಡಿ ಹೋದ ನಟ/ನಿರ್ದೇಶಕ ಅವರು. ಇದೀಗ ಅವರನ್ನು ನೆನಪು ಮಾಡಿಕೊಳ್ಳಲು ಒಂದು ಕಾರಣ ಸಿಕ್ಕಿದೆ. ಅದೇ ''! ಏನಿದು ವಿಚಿತ್ರವಾಗಿದೆ ಎಂದು ನಿಮಗನಿಸಬಹುದು. ಗುರುವಾರ (ಡಿ.9) ಸೆಟ್ಟೇರಿರುವ 'ಅಬ ಜಬ ದಬ' ಸಿನಿಮಾದಲ್ಲಿ ಶಂಕರ್ ನಾಗ್ ಇರಲಿದ್ದಾರಂತೆ! ಅರೇ ಇದು ಹೇಗೆ ಸಾಧ್ಯ? ಅದಕ್ಕುತ್ತರ ನೀಡಿದ್ದಾರೆ ನಿರ್ದೇಶಕ ! ಈ ಹಿಂದೆ ಹರಿಪ್ರಿಯಾ ನಾಯಕಿಯಾಗಿದ್ದ 'ಕನ್ನಡ್ ಗೊತ್ತಿಲ್ಲ' ಚಿತ್ರವನ್ನು ನಿರ್ದೇಶನ ಮಾಡಿದ್ದ ಮಯೂರ ರಾಘವೇಂದ್ರ, ಈಗ ಎರಡನೇ ಪ್ರಯತ್ನವಾಗಿ 'ಅಬ ಜಬ ದಬ' ಕೈಗೆತ್ತಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡುವ ಅವರು, 'ಶಂಕರ್ ನಾಗ್ ಅವರು ತೆರೆಮೇಲೆ ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಈಗಲೇ ನಾನು ಹೇಳುವಂತಿಲ್ಲ. ಒಟ್ಟಿನಲ್ಲಿ ಅವರು ಸಿನಿಮಾದಲ್ಲಿ ಇದ್ದಾರೆ. ಅದನ್ನಂತೂ ಹೇಳಬಲ್ಲೆ. ಅದಕ್ಕೆ ಬೇಕಾದ ಕೆಲಸಗಳು ಜಾರಿಯಲ್ಲಿವೆ. ಒಂದು ವಿಭಿನ್ನವಾದ ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ಇದೊಂದು ಕಾಮಿಡಿ ಮತ್ತು ಫ್ಯಾಂಟಸಿ ಅಂಶಗಳಿರುವ ಸಿನಿಮಾ. ಈ ಸಿನಿಮಾವನ್ನು ನೋಡಿದವರಿಗೆ ಇಲ್ಲಿ ಶಂಕರ್ ನಾಗ್ ಇದ್ದಾರೆ ಎಂದು ಅನಿಸುವುದಂತೂ ಖಂಡಿತ. ಸುಮ್ಮನೇ ಪ್ರಚಾರಕ್ಕಾಗಿ ಈ ಮಾತನ್ನು ಹೇಳುತ್ತಿಲ್ಲ' ಎಂದು ಹೇಳಿದ್ದಾರೆ. 'ಶೀರ್ಷಿಕೆ ಬಗ್ಗೆ ತುಂಬ ಕಾಮೆಂಟ್ ಬರುತ್ತಿವೆ. ಒಂದು ಸಿನಿಮಾದಲ್ಲಿ ಕಾಮಿಡಿ ಸೀನ್‌ನಲ್ಲಿ ಈ ಪದ ಬಳಕೆ ಆಗಿದೆ. ರೇಖಾ ದಾಸ್ ಅವರು ಅದನ್ನು ಬಳಸಿದ್ದರು. ಬಹುತೇಕರಿಗೆ ಅದು ಗೊತ್ತಿದೆ. ಇದೊಂದು ಫ್ಯಾಂಟಸಿ ಸಿನಿಮಾ ಆಗಿರುವುದರಿಂದ ಈ ಶೀರ್ಷಿಕೆ ಬಳಕೆ ಆಗಿದೆ. ರೇಖಾ ದಾಸ್ ಕಾಮಿಡಿ ಸೀನ್‌ಗೂ, ಶಂಕರ್‌ ನಾಗ್ ಅವರಿಗೂ ಈ ಶೀರ್ಷಿಕೆಗೂ ಏನು ಸಂಬಂಧ ಅನ್ನೋದನ್ನು ಸಿನಿಮಾದಲ್ಲೇ ನೋಡಬೇಕು. ಜನವರಿಯಲ್ಲಿ ಮುಹೂರ್ತ ನಡೆಯಲಿದೆ. ಫೆಬ್ರವರಿಯಲ್ಲಿ ಶೂಟಿಂಗ್ ಶುರುವಾಗಲಿದೆ. ಬೇರೆ ಯಾರೆಲ್ಲ ಇದ್ದಾರೆ ಅನ್ನೋದನ್ನು ಈಗಲೇ ಹೇಳುವುದಕ್ಕೆ ಸಾಧ್ಯವಿಲ್ಲ' ಎಂದಿದ್ದಾರೆ ಮಯೂರ. ಈ ಚಿತ್ರಕ್ಕೆ ಗಿರಿಧರ್ ದಿವಾನ್ ಛಾಯಾಗ್ರಹಣ ಮಾಡುತ್ತಿದ್ದರೆ, ಸತೀಶ್‌ ರಘುನಾಥನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. 'ಎಸ್. ರಾಮ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಅನಂತ ಕೃಷ್ಣ ಈ ಸಿನಿಮಾಕ್ಕೆ ಹಣ ಹಾಕುತ್ತಿದ್ದಾರೆ. ಚಿತ್ರದ ಶೀರ್ಷಿಕೆಯನ್ನು ಮಂತ್ರಾಲಯದ ರಾಯರ ಸಾನಿಧ್ಯದಲ್ಲಿ ಬಿಡುಗಡೆ ಮಾಡಿರುವುದು ವಿಶೇಷ.