ಮಲ್ಲೇಶ್ವರ ಕ್ಷೇತ್ರದ 3 ಶಿಬಿರಗಳಲ್ಲಿ ಡಿಸಿಎಂ ಅಶ್ವತ್ಥನಾರಾಯಣ ಫೌಂಡೇಶನ್‌ನಿಂದ ಉಚಿತ ಲಸಿಕೆ

​​ಮಲ್ಲೇಶ್ವರದ ಗುಟ್ಟಹಳ್ಳಿಯ ರಂಗ ಮಂದಿರ, ಎಂಎಸ್‌ಆರ್‌ ನಗರದ ವಾರ್ಡ್‌ ಕಚೇರಿ ಸಮೀಪ ಹಾಗೂ ಯಶವಂತಪುರದ ನೇತಾಜಿ ವೃತ್ತದ ಬಳಿಯ ಶ್ರೀನಿವಾಸ ಕಲ್ಯಾಣ ಮಂಟಪದ ಲಸಿಕೆ ಶಿಬಿರಗಳಿಗೆ ಉಪ ಮುಖ್ಯಮಂತ್ರಿಗಳು ಭೇಟಿ ನೀಡಿದರು.

ಮಲ್ಲೇಶ್ವರ ಕ್ಷೇತ್ರದ 3 ಶಿಬಿರಗಳಲ್ಲಿ ಡಿಸಿಎಂ ಅಶ್ವತ್ಥನಾರಾಯಣ ಫೌಂಡೇಶನ್‌ನಿಂದ ಉಚಿತ ಲಸಿಕೆ
Linkup
: ಡಾ. ಸಿ. ಎನ್. ಅಶ್ವತ್ಥನಾರಾಯಣ ಫೌಂಡೇಶನ್‌ ವತಿಯಿಂದ ಮಲ್ಲೇಶ್ವರ ಕ್ಷೇತ್ರದ ಮೂರು ಕಡೆ ನಡೆಯುತ್ತಿರುವ ಕೋವಿಡ್‌ ಅಭಿಯಾನ ಶಿಬಿರಗಳಿಗೆ ಉಪ ಮುಖ್ಯಮಂತ್ರಿ ಡಾ. ಸಿ. ಎನ್.‌ ಅಶ್ವತ್ಥನಾರಾಯಣ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಫೌಂಡೇಶನ್‌ ವತಿಯಿಂದಲೇ ಲಸಿಕೆ ಖರೀದಿ ಮಾಡಿ ಬಿಪಿಎಲ್ ಕುಟುಂಬಗಳು, ಬೀದಿ ಬದಿ ವ್ಯಾಪಾರಿಗಳು, ಸಾರ್ವಜನಿಕರು, ಮುಂಚೂಣಿ ಕಾರ್ಯಕರ್ತರು ಮತ್ತು ಅಶಕ್ತರಿಗೆ ನೀಡಲಾಗುತ್ತಿದೆ. ಮಲ್ಲೇಶ್ವರದ ಗುಟ್ಟಹಳ್ಳಿಯ ರಂಗ ಮಂದಿರ, ಎಂಎಸ್‌ಆರ್‌ ನಗರದ ವಾರ್ಡ್‌ ಕಚೇರಿ ಸಮೀಪ ಹಾಗೂ ಯಶವಂತಪುರದ ನೇತಾಜಿ ವೃತ್ತದ ಬಳಿಯ ಶ್ರೀನಿವಾಸ ಕಲ್ಯಾಣ ಮಂಟಪದ ಲಸಿಕೆ ಶಿಬಿರಗಳಿಗೆ ಉಪ ಮುಖ್ಯಮಂತ್ರಿಗಳು ಭೇಟಿ ನೀಡಿದರು. ಮೂರು ಕಡೆ ಒಟ್ಟು 1,500 ಲಸಿಕೆಗಳನ್ನು ಸಾರ್ವಜನಿಕರಿಗೆ ನೀಡಲಾಗಿದ್ದು, ಇನ್ನೂ ಲಸಿಕೆ ಅಭಿಯಾನವನ್ನು ಮುಂದವರಿಸಲಾಗುವುದು. ಎಲ್ಲರೂ ತಪ್ಪದೇ ಬಂದು ವ್ಯಾಕ್ಸಿನ್‌ ಪಡೆಯಬೇಕು. ಕೋವಿಡ್‌ ವಿರುದ್ಧ ನಮಗಿರುವ ಏಕೈಕ ಅಸ್ತ್ರ ಲಸಿಕೆ ಮಾತ್ರ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಡಾ.ವಾಸು ಅವರೂ ಇದ್ದರು.