ಮುಂಬೈನ ಕೋವಿಡ್‌ ಆಸ್ಪತ್ರೆಯಲ್ಲಿ ಭಾರೀ ಅಗ್ನಿ ಅವಘಡ; 13 ಕೊರೊನಾ ರೋಗಿಗಳು ಜೀವಂತ ದಹನ!

ಅಗ್ನಿ ಅವಘಡ ಸಂಭವಿಸಿದ ಆಸ್ಪತ್ರೆಯ ಐಸಿಯು ಘಟಕದಲ್ಲಿ ಒಟ್ಟು 17 ಜನ ಕೊರೊನಾ ರೋಗಿಗಳು ಇದ್ದರು. ಬದುಕುಳಿದ ಐವರು ರೋಗಿಗಳನ್ನು ಬೇರೆ ಕಡೆ ಸ್ಥಳಾಂತರಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ವಿಜಯ್‌ ವಲ್ಲಭ ಆಸ್ಪತ್ರೆ ಕೋವಿಡ್‌ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಘಟಕವಾಗಿದೆ.

ಮುಂಬೈನ ಕೋವಿಡ್‌ ಆಸ್ಪತ್ರೆಯಲ್ಲಿ ಭಾರೀ ಅಗ್ನಿ ಅವಘಡ; 13 ಕೊರೊನಾ ರೋಗಿಗಳು ಜೀವಂತ ದಹನ!
Linkup
ಮುಂಬೈ: ಮುಂಬೈನ ವಿಜಯ್‌ ವಲ್ಲಭ ಆಸ್ಪತ್ರೆಯಲ್ಲಿ ದಿಢೀರನೆ ಬೆಂಕಿ ಅವಘಡ ಸಂಭವಿಸಿ ಹದಿಮೂರು ಜನ ಕೊರೊನಾ ರೋಗಿಗಳು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ. ಪಾಲ್ವಾರ್ ಜಿಲ್ಲೆಯ ವಾಸೈನಲ್ಲಿರುವ ಕೋವಿಡ್‌ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಮುಂಜಾನೆ 3.15ರ ಸುಮಾರಿಗೆ ಶಾರ್ಟ್‌ ಸರ್ಕ್ಯೂಟ್‌ ಉಂಟಾಗಿ ಅಗ್ನಿ ಅವಘಡ ಸಂಭವಿಸಿದ್ದು, ಬೆಳಗ್ಗೆ 5.30ರ ತನಕ ಬೆಂಕಿ ಉರಿಯುತ್ತಲೇ ಇತ್ತು ಎಂದು ತಿಳಿದು ಬಂದಿದೆ. ವಿಜಯ್‌ ವಲ್ಲಭ ಆಸ್ಪತ್ರೆಯಲ್ಲಿ ಸಂಭವಿಸಿದ ಈ ಅಗ್ನಿ ಅವಘಡದಲ್ಲಿ 13 ಜನ ಕೊರೊನಾ ರೋಗಿಗಳು ಸಾವನ್ನಪ್ಪದ್ದಾರೆ ಎಂದು ಆಸ್ಪತ್ರೆಯ ಸಿಇಒ ಡಾ.ದಿಲೀಪ್‌ ಜೈನ್ ಖಚಿತಪಡಿಸಿದ್ದಾರೆ. ಅಗ್ನಿ ಅವಘಡ ಸಂಭವಿಸಿದ ಆಸ್ಪತ್ರೆಯ ಐಸಿಯು ಘಟಕದಲ್ಲಿ ಒಟ್ಟು 17 ಜನ ಕೊರೊನಾ ರೋಗಿಗಳು ಇದ್ದರು. ಬದುಕುಳಿದ ಐವರು ರೋಗಿಗಳನ್ನು ಬೇರೆ ಕಡೆ ಸ್ಥಳಾಂತರಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ವಿಜಯ್‌ ವಲ್ಲಭ ಆಸ್ಪತ್ರೆ ಕೋವಿಡ್‌ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಘಟಕವಾಗಿದೆ.