ಮೃಗಾಲಯದ ನಾಲ್ಕು ಸಿಂಹಗಳಲ್ಲಿ ಕೊರೊನಾ ವೈರಸ್ ಡೆಲ್ಟಾ ರೂಪಾಂತರ ಪತ್ತೆ

ತಮಿಳುನಾಡಿನ ವಂಡಲೂರ್‌ನಲ್ಲಿರುವ ಅರಿನಾರ್ ಅಣ್ಣಾ ಮೃಗಾಲಯದಲ್ಲಿ ಕೋವಿಡ್ 19 ಸೋಂಕಿಗೆ ಒಳಗಾಗಿರುವ ನಾಲ್ಕು ಸಿಂಹಗಳಲ್ಲಿ ಡೆಲ್ಟಾ ರೂಪಾಂತರ ಇರುವುದು ಆನುವಂಶಿಕ ಕ್ರಮಾನುಗತಿ ಮಾದರಿಗಳ ಪರೀಕ್ಷೆಯಿಂದ ಪತ್ತೆಯಾಗಿದೆ.

ಮೃಗಾಲಯದ ನಾಲ್ಕು ಸಿಂಹಗಳಲ್ಲಿ ಕೊರೊನಾ ವೈರಸ್ ಡೆಲ್ಟಾ ರೂಪಾಂತರ ಪತ್ತೆ
Linkup
ಚೆನ್ನೈ: ತಮಿಳುನಾಡಿನ ವಂಡಲೂರ್‌ನಲ್ಲಿರುವ ಅರಿನಾರ್ ಅಣ್ಣಾ ಮೃಗಾಲಯದಲ್ಲಿ ಸೋಂಕಿಗೆ ಒಳಗಾಗಿರುವ ನಾಲ್ಕು ಸಿಂಹಗಳ ಆನುವಂಶಿಕ ಕ್ರಮಾನುಗತಿ (ಜೆನೋಮ್ ಸೀಕ್ವೆನ್ಸಿಂಗ್) ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ದೇಶದಲ್ಲಿ ಎರಡನೇ ಅಲೆ ಸೋಂಕಿಗೆ ಕಾರಣವಾಗಿರುವ ಮಾರಕ B.1.617.2 ಅಥವಾ ಇರುವುದು ಪತ್ತೆಯಾಗಿದೆ. ಭಾರತದಲ್ಲಿ ಎರಡನೆಯ ಅಲೆಗೆ ಪ್ರಮುಖ ಕಾರಣವಾಗಿರುವ ರೂಪಾಂತರ B.1.6.617.2ಗೆ ವಿಶ್ವ ಆರೋಗ್ಯ ಸಂಸ್ಥೆಯು ಡೆಲ್ಟಾ ತಳಿ ಎಂದು ನಾಮಕರಣ ಮಾಡಿದ್ದು, ಇದು ಅಧಿಕ ಪ್ರಸರಣ ಸಾಮರ್ಥ್ಯ ಹಾಗೂ ಕಡಿಮೆ ತಟಸ್ಥತೆಯನ್ನು ತೋರಿಸಿರುವುದಾಗಿ ಮೃಗಾಲಯದ ಅಧಿಕಾರಿಗಳು ಹೇಳಿದ್ದಾರೆ. ಮೇ 24ರಂದು ನಾಲ್ಕು ಹಾಗೂ ಮೇ 29ರಂದು ಏಳು ಸಿಂಹಗಳ ಸಾರ್ಸ್ ಕೋವ್-2 ಮಾದರಿಗಳನ್ನು ಭೋಪಾಲದ ಐಸಿಎಆರ್-ರಾಷ್ಟ್ರೀಯ ಅಧಿಕ ಭದ್ರತಾ ಪ್ರಾಣಿ ಕಾಯಿಲೆಗಳ ಸಂಸ್ಥೆಗೆ (ಎನ್‌ಐಎಚ್‌ಎಸ್‌ಎಡಿ) ರವಾನಿಸಲಾಗಿತ್ತು. ಜೂನ್ 3ರಂದು ಮಾಹಿತಿ ನೀಡಿದ್ದ ಸಂಸ್ಥೆ, 9 ಸಿಂಹಗಳಲ್ಲಿ ಸಾರ್ಸ್ ಕೋವ್-2 ಪಾಸಿಟಿವ್‌ಗೆ ಒಳಗಾಗಿರುವುದಾಗಿ ತಿಳಿಸಿತ್ತು. ಇದರ ಬಳಿಕ ಸಿಂಹಗಳನ್ನು ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಈ ಸೋಂಕಿತ ಸಿಂಹಗಳ ಆನುವಂಶಿಕ ಕ್ರಮಾನುಗತಿ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಕೋವಿಡ್ ಸೋಂಕಿಗೆ ಒಳಗಾಗಿದ್ದ 9 ವರ್ಷದ ಸಿಂಹಿಣಿ ನೀಲಾ ಹಾಗೂ 12 ವರ್ಷದ ಪದ್ಮನಾಥನ್ ಈ ತಿಂಗಳ ಆರಂಭದಲ್ಲಿ ಮೃತಪಟ್ಟಿದ್ದವು.