ಭಾರತದಲ್ಲಿ ಮೊದಲ ಬಾರಿ ಬಲು ಅಪರೂಪದ 'ಗುಲಾಬಿ' ಚಿರತೆ ಪತ್ತೆ

ಹಳದಿ ಬಣ್ಣದ ಚಿರತೆಗಳಲ್ಲದೆ ಕಪ್ಪು ಮತ್ತು ಬಿಳಿ ಬಣ್ಣದ ಚಿರತೆಗಳ ಬಗ್ಗೆ ಕೇಳಿದ್ದೀರಿ. ಆದರೆ ಗುಲಾಬಿ ವರ್ಣದ ಚಿರತೆಯೂ ಇದೆ. ಇಂತಹ ಅಪರೂಪದ ಚಿರತೆ ರಾಜಸ್ಥಾನದ ರಾಣಕ್ಪುರ ಪ್ರದೇಶದ ಬೆಟ್ಟ ಭಾಗವೊಂದರಲ್ಲಿ ಪತ್ತೆಯಾಗಿದೆ. ಈ ಚಿರತೆ ಅರಣ್ಯ ಸಂರಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಭಾರತದಲ್ಲಿ ಮೊದಲ ಬಾರಿ ಬಲು ಅಪರೂಪದ 'ಗುಲಾಬಿ' ಚಿರತೆ ಪತ್ತೆ
Linkup
ಉದಯಪುರ: ಕಪ್ಪು ಚಿರತೆಯ ಚಿತ್ರಗಳನ್ನು ನೋಡಿದ್ದೀರಿ, ಬಿಳಿ ಬಗ್ಗೆಯೂ ಕೇಳಿದ್ದೀರಿ. ಆದರೆ ಬಗ್ಗೆ ಗೊತ್ತೇ? ಇದು ಕಲ್ಪನೆಯಲ್ಲ. ಭಾರತದಲ್ಲಿ ಇದೇ ಮೊದಲು ಅಪರೂಪದ 'ಗುಲಾಬಿ' ಚಿರತೆ ಇತ್ತೀಚೆಗೆ ಪತ್ತೆಯಾಗಿದೆ. ರಾಜಸ್ಥಾನದ ದಕ್ಷಿಣ ಭಾಗದಲ್ಲಿರುವ ಪಾಲಿ ಜಿಲ್ಲೆಯ ಅರಾವಳ್ಳಿ ಬೆಟ್ಟ ಪ್ರದೇಶದ ರಾಣಕ್ಪುರ ಭಾಗದಲ್ಲಿ ಈ ವಿಸ್ಮಯಕಾರಿ ಚಿರತೆ ಕಂಡುಬಂದಿದೆ. ಸ್ಟ್ರಾಬೆರಿ ಬಣ್ಣದ ಚುಕ್ಕೆಗಳಿರುವ ಈ ಅಪರೂಪದ ಚಿರತೆಯನ್ನು ಆಗಾಗ್ಗೆ ಕಂಡಿರುವುದಾಗಿ ರಾಣಕ್ಪುರ ಮತ್ತು ಕುಂಭಾಲಗಡ ನಿವಾಸಿಗಳು ತಿಳಿಸಿದ್ದಾರೆ. ಇದು ಈ ಗ್ರಾಮಗಳ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಪತ್ತೆಯಾಗಿದೆ. ಇಲ್ಲಿನ ಅಗಾಧ ವಿಸ್ತಾರದ ಪ್ರದೇಶದಿಂದಾಗಿ ಈ ಗುಲಾಬಿ ಚಿರತೆ () ಎಲ್ಲಾ ಕಡೆ ಓಡಾಡುತ್ತಿದೆ ಎಂದು ರಾಜಸಮಂದ್ ಡಿಸಿಎಫ್ ಫತೇಹ್ ಸಿಂಗ್ ರಾಥೋರ್ ಹೇಳಿದ್ದಾರೆ. ಈ ಚಿರತೆಯನ್ನು ಸ್ಥಳೀಯರು ಹಲವು ಬಾರಿ ಕಂಡಿದ್ದರೂ ಛಾಯಾಗ್ರಾಹಕರ ಕ್ಯಾಮೆರಾಕ್ಕೆ ಸಿಕ್ಕಿರುವುದು ಇದೇ ಮೊದಲ ಬಾರಿ. ಹೀಗಾಗಿ ಗುಲಾಬಿ ಚಿರತೆಯ ಹಾಜರಿ ಖಚಿತವಾಗಿದೆ. ಇತ್ತೀಚೆಗೆ ಕೆಲವು ಛಾಯಾಗ್ರಾಹಕರು ಈ ಹೆಣ್ಣು ಚಿರತೆಯ ಚಿತ್ರಗಳನ್ನು ಸೆರೆಹಿಡಿದಿದ್ದಾರೆ. ' ಸಂರಕ್ಷಕರಾಗಿ ನಾವು ಈ ಚಿರತೆಯನ್ನು ರಕ್ಷಿಸುವ ಗುರಿ ಹೊಂದಿದ್ದೇವೆ. ಅದರ ಪ್ರದೇಶದೊಳಗೆ ಮನುಷ್ಯರ ಓಡಾಟವನ್ನು ನಿರ್ಬಂಧಿಸಲು ಉದ್ದೇಶಿಸಲಾಗಿದೆ' ಎಂದು ರಾಥೋರ್ ತಿಳಿಸಿದ್ದಾರೆ. ಕುಂಭಾಲಗಡ ಅರಣ್ಯ ಪ್ರದೇಶವು 600 ಚದರ ಕಿಮೀಗೂ ಅಧಿಕ ವ್ಯಾಪ್ತಿ ಹೊಂದಿದೆ. ಭಾರತೀಯ ಚಿರತೆಗಳು ಸಾಮಾನ್ಯವಾಗಿ ಕಂದು ಹಳದಿ ಬಣ್ಣ ಹಾಗೂ ಕಪ್ಪು ಚುಕ್ಕೆ ಹೊಂದಿರುತ್ತವೆ. ಗುಲಾಬಿ ಚಿರತೆಯು ಕೆಂಪು ಕಂದು ಚರ್ಮ ಹಾಗೂ ಸಾಮಾನ್ಯ ಚಿರತೆಗಳಿಗೆ ಹೋಲಿಸಿದರೆ ವಿಶಿಷ್ಟ ಮತ್ತು ವಿಭಿನ್ನ ಚುಕ್ಕೆಗಳನ್ನು ಹೊಂದಿರುತ್ತದೆ. ಈ ಗುಲಾಬಿ ಚಿರತೆಯಲ್ಲಿನ ಚರ್ಮದಲ್ಲಿನ ಸ್ಟ್ರಾಬೆರಿ ಚುಕ್ಕೆಗಳು ಎರಿತ್ರಿಸಂ- ಅಂದರೆ ಕೆಂಪು ವರ್ಣ ಕೋಶಗಳ ಅತಿಯಾದ ಉತ್ಪಾದನೆಯಿಂದ ಅಥವಾ ಗಾಢ ವರ್ಣಕೋಶಗಳ ಕಡಿಮೆ ಉತ್ಪಾದನೆಯಿಂದ ಉಂಟಾಗಿರಬಹುದಾದ ಆನುವಂಶಿಕ ಸ್ಥಿತಿ ಇರಬಹುದು ಎಂದು ನಿವೃತ್ತ ಅರಣ್ಯ ಅಧಿಕಾರಿ ಡಾ. ಸತೀಶ್ ಶರ್ಮಾ ಹೇಳಿದ್ದಾರೆ. ಸತತ ಹುಡುಕಾಟದ ಬಳಿಕ ಅಪರೂಪದ ಪಿಂಕ್ ಚಿರತೆಯ ಚಿತ್ರಗಳನ್ನು ತೆಗೆದಿರುವುದಾಗಿ ಉದಯಪುರ ಮೂಲದ ವನ್ಯಜೀವಿ ಸಂರಕ್ಷಕ ಮತ್ತು ಛಾಯಾಗ್ರಾಹಕ ಹಿತೇಶ್ ಮೋಟ್ವಾನಿ ತಿಳಿಸಿದ್ದಾರೆ. ಈ ಹೆಣ್ಣು ಚಿರತೆಯು ಐದರಿಂದ ಆರು ವರ್ಷದ್ದಾಗಿರಬಹುದು ಎಂದು ಮೋಟ್ವಾನಿ ಹೇಳಿದ್ದಾರೆ. ಈ ಭಾಗದಲ್ಲಿ ಗುಲಾಬಿ ಚಿರತೆ ಪತ್ತೆಯಾಗಿರುವುದು ಹೆಮ್ಮೆಯ ಸಂಗತಿಯೂ ಹೌದು, ಹಾಗೆಯೇ ಕಳವಳಕಾರಿಯೂ ಹೌದು ಎಂದು ವನ್ಯಜೀವಿ ಸಂರಕ್ಷಣಾ ಹೋರಾಟಗಾರ ಮತ್ತು ಡಬ್ಲ್ಯೂಸಿಸಿಬಿ ಸದಸ್ಯ ಅನಿಲ್ ರೋಡ್ಜರ್ ತಿಳಿಸಿದ್ದಾರೆ. ಈ ಬಣ್ಣದ ಚಿರತೆಯು ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ 2012 ಮತ್ತು 2019ರಲ್ಲಿ ಪತ್ತೆಯಾಗಿತ್ತು. ಚಿರತೆಗಳ ದೇಹದ ರೂಪಾಂತರದಿಂದ ಈ ಬಣ್ಣ ಬಂದಿರಬಹುದು. ಸಾಮಾನ್ಯವಾಗಿ ರೂಪಾಂತರದಿಂದ ಬಿಳಿ ಹಾಗೂ ಕಪ್ಪು ಬಣ್ಣದ ಚಿರತೆಗಳನ್ನು ನೋಡಿದ್ದೇವೆ. ಆದರೆ ಇದು ನಿಜಕ್ಕೂ ಅಪರೂಪದ್ದಾಗಿದೆ ಎಂದು ನಿವೃತ್ತ ಅರಣ್ಯ ಅಧಿಕಾರಿ ಸುನಯನ್ ಶರ್ಮಾ ಹೇಳಿದ್ದಾರೆ.