'ಭಾರತದಿಂದ ಹೊರಹೋಗಿದ್ದು ವೈದ್ಯಕೀಯ ಚಿಕಿತ್ಸೆಗಾಗಿ, ನಾನು ಕಾನೂನಿಗೆ ಬದ್ಧನಾಗಿರುವ ಪ್ರಜೆ': ಮೆಹುಲ್ ಚೋಕ್ಸಿ

ಡೊಮಿನಿಕಾ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿರುವ ಮೆಹುಲ್ ಚೋಕ್ಸಿ, ತಾನು ಭಾರತದ ತನಿಖಾ ಸಂಸ್ಥೆಗಳ ಕಣ್ಣಿಗೆ ಮಣ್ಣೆರಚಿ ಪರಾರಿಯಾಗಿ ಬಂದಿರುವುದಲ್ಲ. ವೈದ್ಯಕೀಯ ಚಿಕಿತ್ಸೆಗಾಗಿ ಭಾರತ ತೊರೆದಿದ್ದು. ಆಗ ತನ್ನ ಮೇಲೆ ಯಾವ ಪ್ರಕರಣವೂ ಇರಲಿಲ್ಲ ಎಂದಿದ್ದಾನೆ.

'ಭಾರತದಿಂದ ಹೊರಹೋಗಿದ್ದು ವೈದ್ಯಕೀಯ ಚಿಕಿತ್ಸೆಗಾಗಿ, ನಾನು ಕಾನೂನಿಗೆ ಬದ್ಧನಾಗಿರುವ ಪ್ರಜೆ': ಮೆಹುಲ್ ಚೋಕ್ಸಿ
Linkup
ಹೊಸದಿಲ್ಲಿ: ತನ್ನನ್ನು ಸಂದರ್ಶನ ಮಾಡುವಂತೆ ಭಾರತೀಯ ಅಧಿಕಾರಿಗಳಿಗೆ ಆಹ್ವಾನ ನೀಡಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿ, ಆಭರಣ ವ್ಯಾಪಾರಿ , ತಾನು ವೈದ್ಯಕೀಯ ಚಿಕಿತ್ಸೆ ಪಡೆಯುವುದಕ್ಕಾಗಿಯೇ ತ್ಯಜಿಸಿದ್ದು ಎಂದು ಹೇಳಿಕೊಂಡಿದ್ದಾನೆ. 'ನಾನು ಕಾನೂನಿಗೆ ಬದ್ಧನಾಗಿರುವ ಪ್ರಜೆ' ಎಂದು ಆತ ಘೋಷಿಸಿಕೊಂಡಿದ್ದಾನೆ. ಹೈಕೋರ್ಟ್‌ಗೆ ತನ್ನ ವಕೀಲರ ಮೂಲಕ ಅಫಿಡವಿಟ್ ಸಲ್ಲಿಸಿರುವ ಚೋಕ್ಸಿ, 'ನನ್ನನ್ನು ಸಂದರ್ಶನ ಮಾಡುವಂತೆ ಭಾರತೀಯ ಅಧಿಕಾರಿಗಳಿಗೆ ಆಹ್ವಾನವನ್ನು ನೀಡುತ್ತಿದ್ದೇನೆ. ಅವರು ನನ್ನ ವಿರುದ್ಧ ನಡೆಸುತ್ತಿರುವ ವಿಚಾರಣೆಗೆ ಸಂಬಂಧಿಸಿದಂತೆ ನನಗೆ ಅವರು ಯಾವುದೇ ಪ್ರಶ್ನೆಗಳನ್ನು ಬೇಕಾದರೂ ಕೇಳಲಿ' ಎಂದು ಹೇಳಿದ್ದಾನೆ. 'ನಾನು ಭಾರತದಲ್ಲಿನ ಕಾನೂನು ಕ್ರಮಗಳಿಂದ ತಪ್ಪಿಸಿಕೊಂಡಿಲ್ಲ. ಅಮೆರಿಕದಲ್ಲಿ ವೈದ್ಯಕೀಯ ನೆರವು ಪಡೆಯುವುದಕ್ಕಾಗಿ ಭಾರತವನ್ನು ತ್ಯಜಿಸುವ ವೇಳೆ ನನ್ನ ವಿರುದ್ಧ ಭಾರತದ ಕಾನೂನು ಜಾರಿ ಸಂಸ್ಥೆಗಳಿಂದ ಯಾವುದೇ ವಾರಂಟ್ ಜಾರಿಯಾಗಿರಲಿಲ್ಲ' ಎಂದು ಚೋಕ್ಸಿ ತಿಳಿಸಿದ್ದಾನೆ. 'ಡೊಮಿನಿಕಾದ ಕೋರ್ಟ್‌ಗೆ ಹಾಜರಾಗುವುದರಿಂದ ತಪ್ಪಿಸಿಕೊಳ್ಳುವ ಯಾವ ಉದ್ದೇಶವೂ ನನ್ನಲ್ಲಿ ಇಲ್ಲ. ರೆಡ್ ನೋಟಿಸ್ ಹೊರಡಿಸಿರುವುದು ನಾನು ವಿಚಾರಣೆಯಿಲ್ಲದೆ ದೇಶದಿಂದ ಹೊರಹೋಗಲು ಅವಕಾಶ ನೀಡುವುದಿಲ್ಲ. ರೆಡ್ ಕಾರ್ನರ್ ನೋಟಿಸ್ ಅಂತಾರಾಷ್ಟ್ರೀಯ ವಾರಂಟ್ ಅಲ್ಲ. ನನ್ನನ್ನು ಪತ್ತೆಹಚ್ಚಲು ಮತ್ತು ಗಡಿಪಾರು ಪ್ರಕ್ರಿಯೆ ಮೂಲಕ ಭಾರತಕ್ಕೆ ಶರಣಾಗತಗೊಳಿಸಲು ಭಾರತದ ಪರವಾಗಿ ಇಂಟರ್‌ಪೋಲ್ ಮಾಡಿರುವ ಮನವಿಯಷ್ಟೇ. ಈ ಪ್ರಕ್ರಿಯೆ ಮತ್ತು ಬರ್ಮುಡಾದಲ್ಲಿ ಈಗಾಗಲೇ ಆರಂಭವಾಗಿದೆ. ಹೀಗಾಗಿ ನ್ಯಾಯಾಲಯದ ಅನುಮತಿ ಮೇರೆಗೆ ಆಂಟಿಗುವಾಕ್ಕೆ ಹೋಗುವುದರ ಹೊರತಾಗಿ ನಾನು ಡೊಮಿನಿಕಾದಿಂದ ಹೋಗುವ ಉದ್ದೇಶ ಹೊಂದಿಲ್ಲ' ಎಂದು ಚೋಕ್ಸಿ ಎಂಟು ಪುಟಗಳ ಅಫಿಡವಿಟ್‌ನಲ್ಲಿ ಹೇಳಿದ್ದಾನೆ. 'ನನ್ನನ್ನು ಭಾರತಕ್ಕೆ ಗಡಿಪಾರು ಮಾಡಬೇಕೇ ಎಂದು ನಿರ್ಧರಿಸಲು ಆಂಟಿಗುವಾ ಮತ್ತು ಬರ್ಮುಡಾದ ಈಸ್ಟರ್ನ್ ಕೆರೆಬಿಯನ್ ಸುಪ್ರೀಂಕೋರ್ಟ್‌ನಲ್ಲಿ ಎರಡು ಅರ್ಜಿಗಳು ಬಾಕಿ ಇವೆ. ಆಂಟಿಗುವಾದಲ್ಲಿನ ನನ್ನ ಪ್ರತಿ ಕೋರ್ಟ್ ವಿಚಾರಣೆಗೂ ನಾನು ತಪ್ಪದೆ ಹಾಜರಾಗಿದ್ದೇನೆ... ನಾನು ಕಾನೂನಿಗೆ ಬದ್ಧನಾಗಿರುವ ಪ್ರಜೆ. ನನ್ನ ಮೇಲೆ ಹಿಂದೆ ಎಂದೂ ಶಿಕ್ಷೆ ವಿಧಿಸಿದ ಪ್ರಕರಣವಿಲ್ಲ' ಎಂದು 2013ರಲ್ಲಿ ತಾನು ಪಡೆದುಕೊಂಡ ಪೌರತ್ವದ ಪ್ರತಿಯನ್ನು ನೀಡಿದ್ದಾನೆ. 'ನನ್ನನ್ನು ಪೊಲೀಸ್ ಕಸ್ಟಡಿಯಲ್ಲಿಯೇ ಮುಂದುವರಿಸಿದರೆ ನನ್ನ ಆರೋಗ್ಯ ತೀವ್ರ ಹದಗೆಡುವ ಭಯವಿದೆ. ನನಗೆ 62 ವರ್ಷ ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳಿವೆ. ನಾನು ಮಧುಮೇಹಿ, ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ, ಹೃದಯ ಸಮಸ್ಯೆಗಳಿವೆ ಮತ್ತು ಇತರೆ ವೈದ್ಯಕೀಯ ಸಮಸ್ಯೆಗಳಿವೆ' ಎಂದು ಜಾಮೀನಿಗೆ ಚೋಕ್ಸಿ ಮನವಿ ಮಾಡಿದ್ದಾನೆ.