ಭಾರತದ ಅತಿ ಅಗ್ಗದ ಕೋವಿಡ್ ಲಸಿಕೆ 'ಕೊರ್ಬೆವ್ಯಾಕ್ಸ್': ಒಂದು ಡೋಸ್ ಬೆಲೆ 250 ರೂ ಮಾತ್ರ!

ಹೈದರಾಬಾದ್ ಮೂಲಕ ಬಯಾಲಾಜಿಕಲ್-ಇ ಪ್ರಯೋಗಿಸುತ್ತಿರುವ ಕೊರ್ಬೆವ್ಯಾಕ್ಸ್ ಲಸಿಕೆಯು ಭಾರತದ ಅತಿ ಅಗ್ಗದ ಕೋವಿಡ್ ಲಸಿಕೆ ಎನಿಸಿಕೊಳ್ಳಲಿದೆ. ಎರಡು ಡೋಸ್ ಬೆಲೆ ಒಟ್ಟು 500 ರೂಪಾಯಿ ಇರುವ ಸಾಧ್ಯತೆ ಇದೆ.

ಭಾರತದ ಅತಿ ಅಗ್ಗದ ಕೋವಿಡ್ ಲಸಿಕೆ 'ಕೊರ್ಬೆವ್ಯಾಕ್ಸ್': ಒಂದು ಡೋಸ್ ಬೆಲೆ 250 ರೂ ಮಾತ್ರ!
Linkup
ಹೈದರಾಬಾದ್: ಕಂಪೆನಿಯ ಮರು ಸಂಯೋಜಿತ ಪ್ರೋಟೀನ್ ಲಸಿಕೆ, ಭಾರತದ ಅತ್ಯಂತ ಅಗ್ಗದ ಕೋವಿಡ್ ಎನಿಸಿಕೊಳ್ಳಲಿದೆ. ಕೊರ್ಬೆವ್ಯಾಕ್ಸ್ ತುರ್ತು ಬಳಕೆಯ ಅನುಮೋದನೆ (ಇಯುಎ) ಪಡೆದುಕೊಂಡ ಬಳಿಕ ಭಾರತೀಯ ಮಾರುಕಟ್ಟೆಯಲ್ಲಿನ ಅತಿ ಕಡಿಮೆ ದರದ ಕೋವಿಡ್ 19 ಲಸಿಕೆ ಎನಿಸಿಕೊಳ್ಳಲಿದೆ. ಕೊರ್ಬೆವ್ಯಾಕ್ಸ್ ಎರಡು ಡೋಸ್ ಸೇರಿ ಕೇವಲ 500 ರೂಪಾಯಿಗೆ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಎರಡು ಡೋಸ್‌ಗಳಿಗೆ ಅದರ ದರ 400 ರೂಪಾಯಿಗೆ ತಗ್ಗುವ ಸಾಧ್ಯತೆಗಳೂ ಇವೆ. 'ಟೈಮ್ಸ್ ಆಫ್ ಇಂಡಿಯಾ'ಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಬಯಾಲಾಜಿಕಲ್-ಇ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಮಹಿಮಾ ಡಾಟ್ಲಾ ಈ ಸುಳಿವು ನೀಡಿದ್ದಾರೆ. ಸೀರಂ ಸಂಸ್ಥೆಯು ಪ್ರತಿ ಡೋಸ್‌ಗೆ 300 ರೂಪಾಯಿಯಂತೆ ರಾಜ್ಯ ಸರ್ಕಾರಗಳಿಗೆ ಹಾಗೂ 600 ರೂಪಾಯಿಯಂತೆ ಖಾಸಗಿ ಆಸ್ಪತ್ರೆಗಳಿಗೆ ಕೋವಿಶೀಲ್ಡ್ ಲಸಿಕೆಯನ್ನು ಮಾರಾಟ ಮಾಡುತ್ತಿದೆ. ಭಾರತ್ ಬಯೋಟೆಕ್ ತನ್ನ ಕೋವ್ಯಾಕ್ಸಿನ್ ಲಸಿಕೆಯನ್ನು ಕ್ರಮವಾಗಿ 400 ರೂ ಮತ್ತು 1,200 ರೂಪಾಯಿಗೆ ಮಾರುತ್ತಿದೆ. ಇನ್ನು ರಷ್ಯಾದ ಸ್ಪುಟ್ನಿಕ್ ಲಸಿಕೆಯನ್ನು ಡಾ. ರೆಡ್ಡೀಸ್ ಲ್ಯಾಬೊರೇಟರಿ ಡೋಸ್‌ಗೆ 995 ರೂಪಾಯಿಯಂತೆ ನೀಡುತ್ತಿದೆ. ಇದು ರಾಜ್ಯ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಾಗುತ್ತಿವೆ. ಕೊರ್ಬೆವ್ಯಾಕ್ಸ್ ಈಗ ಮೂರನೇ ಹಂತದ ಪ್ರಯೋಗದಲ್ಲಿದ್ದು, ಮೊದಲ ಎರಡು ಹಂತಗಳಲ್ಲಿ ಭರವಸೆಯ ಫಲಿತಾಂಶ ದೊರಕಿದೆ. ಕೇಂದ್ರ ಸರ್ಕಾರ ಈಗಾಗಲೇ 30 ಕೋಟಿ ಡೋಸ್‌ಗಳಿಗಾಗಿ ಒಂದು ಡೋಸ್‌ಗೆ 50 ರೂ ದರದಲ್ಲಿ 1500 ಕೋಟಿ ರೂ ಮುಂಗಡ ಹಣ ಪಾವತಿಸಿದೆ.